ಸಿಎಂ ರಾಜೀನಾಮೆಗೆ ಕೆಎಸ್‌ಈ ಒತ್ತಾಯ

 ಶಿವಮೊಗ್ಗ: ಬಜೆಟ್ ಮೇಲಿನ ಚರ್ಚೆಗೆ ಅವಕಾಶವೇ ಕೊಡದೆ ಅನುಮೋದನೆ ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಷಮ್ಯ ಅಪರಾಧವೆಸಗಿದ್ದು, ಇದಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಕೋರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದಲ್ಲಿ ಬಜೆಟ್ ಮಂಡನೆ ಮೇಲೆ ಚರ್ಚೆ ನಡೆಯಬೇಕಿದ್ದು, ಒಟ್ಟಾರೆ ಅಧಿವೇಶನ ಮೂರುವರೆ ದಿನಗಳು ಮಾತ್ರ ನಡೆದಿವೆ. ಅಧಿವೇಶ ನದಲ್ಲಿ ಕಾಂಗ್ರೇಸ್ ನ ಗೂಂಡಾಗಿರಿ ಬಗ್ಗೆಯೇ ಚರ್ಚೆ ನಡೆದಿದ್ದು, ವಿವಿಧ ಇಲಾಖೆಗಳ ಮೇಲಿನ ಚರ್ಚೆಗಳು ನಡೆಯದೆ ಕೇವಲ ಮೂರುವರೆ ದಿನಗಳು ಮಾತ್ರ ಕಲಾಪ ನಡೆದಂತಾ ಗಿದೆ. ಕನಿಷ್ಠ ೧೫ ದಿನಗಳಾದರೂ ಚರ್ಚೆ ನಡೆಸಬೇಕಿತ್ತು. ಆದರೆ ಕಾಂಗ್ರೇಸ್ ನಾಯಕರುರಾಜ್ಯಕ್ಕೆ ಬರುತ್ತಿರುವುದರಿಂದ ಬಜೆಟ್ ನ್ನು ಅನುಮೋದನೆ ಮಾಡಿಕೊಂಡು ಅಧಿವೇಶನ ಮುಕ್ತಾಯಗೊಳಿಸಲಾಗಿದೆ. ಕಾಂಗ್ರೆಸ್‌ಗೆ ತಮ್ಮ ರಾಜಕೀಯ ಮುಖ್ಯವಾಗಿದ್ದು, ರಾಜ್ಯದ ಜನರ ಭವಿಷ್ಯ ಮುಖ್ಯವಾಗಲಿಲ್ಲ. ಇದಕ್ಕಾಗಿ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಕೇಳಿ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಹಿಂದುಳಿದ,ದಲಿತ ಮಠಗಳು ಸೇರಿದಂತೆ ೩೬ ಮಠಗಳಿಗೆ ೫೮.೨೦ ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಿರುವ ಸರ್ಕಾರ ಮಠಗಳಿಗೂ ತುಪ್ಪ ಹಚ್ಚಿದ್ದಾರೆ. ಮಠಗಳಿಗೆ ಭೂಮಿ ಮೌಲ್ಯದ ಹಣವನ್ನಾದರೂ ನೀqಬಹು ದಿತ್ತು.ಅರಣ್ಯ ಭೂಮಿ ನೀಡಿ ಅದು ದಕ್ಕದಂತೆ ಮಾಡಿದೆ. ಬಡವರಿಗೆ ಹಕ್ಕು ಪತ್ರ ನೀಡುವುದಾಗಿ ಹೇಳಿದ್ದರೂ ಇದುವರೆಗೂ ನೀಡಿಲ್ಲ. ರಾಜ್ಯದಲ್ಲಿ ಕಣ್ಣೆದುರಿಗೆ ಮರಳು ದಂಧೆನಡೆ ಯುತ್ತಿದೆ. ಎಸ್ಸಿ/ಎಸ್ಟಿ ಗಳಿಗೆ ಮೀಸಲಾದ ಹಣವನ್ನು ನೀರಾವರಿಗೆ ಬಳಸಲಾಗಿದೆ. ಅದನ್ನು ಬಳಸಿ ಕೊಳ್ಳಲು ಅವಕಾಶವಿದೆ ನಿಜ. ಆದರೆ ಅಷ್ಟು ಹಣ ವನ್ನು ದಲಿತ ಸಮು ದಾಯಗಳಿಗೆ ಖರ್ಚು ಮಾಡದೆ ವಂಚಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರ ವಿಲ್ಲ. ಅಧಿವೇಶನ ದಲ್ಲಿ ಕೇಳಿದ ಯಾವುದೇ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡದೆ ಅಹಂಕಾರ, ಸರ್ವಾಧಿಕಾರ ಪ್ರದರ್ಶಿಸುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ದತ್ತಾತ್ರಿ, ದೇವ ದಾಸ್ ನಾಯಕ್, ಕೆ.ಜಿ ಕುಮಾರ ಸ್ವಾಮಿ, ಸುಭಾಷ್ ಇದ್ದರು.

SHARE
Previous article24 FEB 2018
Next article26 FEB 2018

LEAVE A REPLY

Please enter your comment!
Please enter your name here