ರಾಜ ಸರ್ಕಾರದಿಂದ ಕೀಳು ಮಟ್ಟದ ಆಡಳಿತ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಮದ್ ಬಿನ್ ತುಘಲಕ್ ಗಿಂತಲೂ ಕೀಳುಮಟ್ಟದ ಆಡಳಿತ ನಡೆಸುತ್ತಿದ್ದಾರೆ
ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹರಿಹಾಯದರು.
ಇಂದು ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾ ಡಿದ ಅವರು, ಈಗ ರಾಜ್ಯ ಸರ್ಕಾರ ಬಹುಮನಿ ಉತ್ಸವ ಮಾಡಲು ಹೊರಟಿದೆ. ಮುಖ್ಯಮಂತ್ರಿ ಮತ್ತು ಮಂತ್ರಿಗಳ ನಡುವೆ ತಾಳ ಇಲ್ಲ, ತಂತಿ ಇಲ್ಲ. ಉತ್ಸವದ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಸಚಿವ ಶರಣ ಪ್ರಕಾಶ್ ಪಾಟೀಲ ಮಾರ್ಚ್ ೬ ರಂದು ೩೦ ಕೋಟಿ ವೆಚ್ಚದಲ್ಲಿ ಬಹು ಮನಿ ಉತ್ಸವ ಮಾಡುತ್ತೇವೆ ಎಂದು ಹೇಳುತ್ತಾರೆ. ಹಾಗಾದರೆ ಸಿದ್ದರಾ ಮಯ್ಯ ರಾಜ್ಯದ ಮುಖ್ಯಮಂತ್ರಿ ಹೌದೋ ಅಲ್ಲವೋ ಎಂಬುದು ಗೊತ್ತಾಗುತ್ತಿಲ್ಲ. ಮಂತ್ರಿಗಳು ಒಂದು ಉತ್ಸವ ಮಾಡುತ್ತೇವೆ ಎಂಬುದು ಮುಖ್ಯಮಂತ್ರಿಗೆ ಗೊತ್ತಾಗುವುದಿಲ್ಲ ಎಂದರೆ ರಾಜ್ಯದಲ್ಲಿ ಏನು ನಡೆಯು ತ್ತಿದೆ ಎಂದು ಪ್ರಶ್ನಿಸಿದರು.
ಬಹುಮನಿ ಸುಲ್ತಾನ ಹಿಂದುಗಳನ್ನು ಕಗ್ಗೊಲೆ ಮಾಡಿದಂತಹ ವ್ಯಕ್ತಿ. ವಿಜಯನಗರ ಸಾಮ್ರಾಜ್ಯವನ್ನು ನಾಶ ಮಾಡಿ ಲೂಟಿ ಮಾಡಿದ ಇತಿಹಾಸ ವಿದೆ. ಇಂತಹ ವ್ಯಕ್ತಿಯ ?ಉತ್ಸವ ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧ. ಇದನ್ನು ಮಾಡಲು ಹೊರಟಿರುವ ಶರಣ ಪ್ರಕಾಶ್ ಪಾಟೀಲ್ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಸಂಪೂರ್ಣವಾಗಿ ಹಿಂದುಗಳ ವಿರುದ್ಧವಾಗಿದೆ. ಮಠಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ ಹೊರಡಿಸುತ್ತಾರೆ. ಮಠಾಧೀಶರಲ್ಲಿ ಈ ಬಗ್ಗೆ ಜಾಗೃತಿ ಆಗುತ್ತಿರುವುದು, ಬಿಜೆಪಿ ವಿರೋಧಕ್ಕೆ ಮಣಿದು ವಾಪಾಸ್ ಪಡೆದುಕೊಂಡಿ ದ್ದಾರೆ. ಮುಗ್ದ ಮುಸಲ್ಮಾನರ ಮೇಲಿನ ಕೇಸು ವಾಪಸ್ ಪಡೆಯುವುದಾಗಿ ಆದೇಶ ಹೊರಡಿಸುತ್ತಾರೆ. ಹಾಗಾದರೆ ಹಿಂದುಗಳಲ್ಲಿ ಮುಗ್ಧರು ಇಲ್ಲವೇ? ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಸ್ಲಿಂರನ್ನು ತೃಪ್ತಿ ಮಾಡಿದರೆ ವೋಟು ಬರುತ್ತದೆ ಎಂದುಕೊಂಡಿ ದ್ದಾರೆ. ಇವರು ಸಿದ್ದರಾಮಯ್ಯ ಅಲ್ಲ, ಸಿದ್ದು ರೆಹಮಾನ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಹಿಂದ ವರ್ಗಕ್ಕೆ ನ್ಯಾಯ ಕೊಡಿ ಸುವುದಾಗಿ ಹೇಳಿ ಜಾತಿ ಜನಗಣತಿ ಯನ್ನು ಈ ಸರ್ಕಾರ ಮಾಡಿಸಿದೆ. ಅದಕ್ಕೆ ೧೭೫ ಕೋಟಿ ರೂ.ಗಳನ್ನೂ ಖರ್ಚು ಮಾಡಿದೆ. ಆದರೆ ಇಲ್ಲಿತನಕ ವರದಿ ಬಿಡುಗಡೆ ಮಾಡಿಲ್ಲ. ಈಗ ಅದಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಈ ಬಗ್ಗೆ ಸಚಿವ ಆಂಜನೇಯ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಅದೊಂದು ಮುಟ್ಟಾಳತನದ ಹೇಳಿಕೆ. ಈ ಮೂಲಕ ಸಿದ್ದರಾಮಯ್ಯ ತಾವೊಬ್ಬ ಅಹಿಂದ ವರ್ಗದ ನಕಲಿ ನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಪ್ರಮುಖರಾದ ಜ್ಯೋತಿ ಪ್ರಕಾಶ್, ಡಿ.ಎಸ್.ಅರುಣ್, ಜ್ನಾನೇಶ್ವರ, ರಮೇಶ್, ರತ್ನಾಕರ ಶೆಣೈ, ಮಧು ಸೂದನ, ಕೆ.ಜಿ.ಕುಮಾರಸ್ವಾಮಿ, ನಾಗರಾಜ್ ಇನ್ನಿತರರಿದ್ದರು.