ಸಚಿವ ತಿಮ್ಮಾಪುರ್ ರಾಜೀನಾಮೆ ನೀಡಲಿ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಆರ್.ಬಿ. ತಿಮ್ಮಾಪುರ್ ಅವರು ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕೆಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾv ನಾಡಿದ ಅವರು, ಆರ್.ಬಿ. ತಿಮ್ಮಾಪುರ್ ಅವರು ವಿಧಾನಪರಿಷತ್‌ಗೆ ಆಯ್ಕೆಯಾ ಗುವ ಸಂದರ್ಭದಲ್ಲಿ ಬಾಗಲಕೋಟೆಯ ವಿಳಾಸವನ್ನು ನೀಡಿದ್ದಾರೆ. ಬಿಬಿಎಂಪಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿ ನಲ್ಲಿ ವಾಸವಾಗಿರುವ ವಿಳಾಸವನ್ನು ನೀಡಿದ್ದಾರೆ. ಆದರೆ, ಪರಿಷತ್ತಿನ ಸದಸ್ಯರಿಗೆ ಸಂಬಂಧಿಸಿದ ಟಿ.ಎ. ಮತ್ತು ಡಿ.ಎ. ನ್ನು ಬಾಗಲಕೋಟೆ ವಿಳಾಸದ ಆಧಾರದ ಮೇಲೆ ಪಡೆಯುತ್ತಿದ್ದು, ಇದರಿಂದ ನೈತಿಕತೆಯ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕೆಂದರು.
ವಿಧಾನಪರಿಷತ್‌ನ ಸದಸ್ಯರಾಗಿ ಆಯ್ಕೆಯಾದ ನಂತರ ಸಂವಿಧಾನ ದತ್ತವಾಗಿ ನಡೆಯುತ್ತೇನೆ ಎಂದು ಪ್ರಮಾಣ ಮಾಡಿರುತ್ತಾರೆ.ಆದರೆ ಎರಡೆರೆಡು ವಿಳಾಸ ನೀಡಿ ಹೆಚ್ಚಿನ ಮೊತ್ತ ಬರುವ ರೀತಿಯಲ್ಲಿ ಬಾಗಲಕೋಟೆ ವಿಳಾಸದಲ್ಲಿ ಟಿಎ, ಡಿಎ ಪಡೆಯುತ್ತಿದ್ದಾರೆ ಎಂದ ಅವರು, ಕಳೆದ ೨೦೧೬ರ ಅ.೭ರಂದು ರೂ. ೮೦೦೦/-, ಅದೇ ವರ್ಷದ ಅ.೧೪ರಂದು ೩೮,೯೦೦ ರೂ., ಅದೇತಿಂಗಳ ೨೧ ರಂದು ೩೪,೮೦೦/- ರೂ.ಗಳನ್ನು ಪಡೆದಿದ್ದಾರೆ ಎಂದು ದೂರಿದರು.
ಕೂಡಲೇ ನೈತಿಕತೆ ಇದ್ದರೆ ತಿಮ್ಮಾಪುರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ರೀತಿ ಎರಡೆರೆಡು ವಿಳಾಸ ನೀಡಿ ರಾಜಕೀಯ ಲಾಭವನ್ನೂ ಪಡೆ ಯುತ್ತಾ ಭತ್ಯೆಗಳನ್ನು ಪಡೆಯುವುದು ಸರಿಯಲ್ಲ. ಇದೇ ರೀತಿ ೮ ಎಂಎಲ್‌ಸಿಗಳು ಇದ್ದಾರೆ. ಅವರುಗಳ ಬಗ್ಗೆ ಈ ಸಂದರ್ಭ ದಲ್ಲಿ ಹೇಳುವುದಿಲ್ಲ ಎಂದರು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೇವಲ ಸಾಗರಕ್ಕೆ ಮಾತ್ರ ಸೀಮಿತಗೊ ಂಡಂತಾಗಿದೆ. ಆ ಕ್ಷೇತ್ರದಲ್ಲಿ ವಿವಿಧ ಯೋಜನೆ ಗಳಿಗೆ ಸಂಬಂಧಿಸಿದಂತೆ ಹಕ್ಕುಪತ್ರ ನೀಡುತ್ತಿದ್ದಾರೆ. ಆದರೆ ಅವರು ಇಡೀ ರಾಜ್ಯಕ್ಕೆ ಕಂದಾಯ ಸಚಿವರು ಎಂಬದು ಮರೆತಂತಿದೆ. ಕೂಡಲೇ ಇಡೀ ಜಿಲ್ಲೆ ಯಲ್ಲಿ ೯೪ಸಿ, ೯೪ಸಿಸಿ, ಅನ್ವಯ ಹಕ್ಕುಪತ್ರ ಕೊಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಒತ್ತಾಯಿಸಿದರು.
ವಸತಿ ಸಚಿವ ಕೃಷ್ಣಪ್ಪನವರು ನಗರದ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಕೊಡುವ ವಿಚಾ ರದಲ್ಲಿ ನಗರಕ್ಕೆ ಬರುತ್ತೇನೆಂದು ಹೇಳಿ ದ್ದರು. ಆದರೆ ನಿಗಧಿಯಾದ ದಿನಾಂಕ ದಂದು ಅನಾರೋಗ್ಯದ ನಿಮಿತ್ತ ಬರಲಾ ಗುತ್ತಿಲ್ಲ ಎಂದು ತಿಳಿಸಿದರು. ಇದನ್ನು ಹೇಳಿ ಒಂದು ತಿಂಗಳು ಗತಿಸಿದರೂ ಸಹ ಇದುವರೆಗೂ ನಗರಕ್ಕೆ ಬಂದಿಲ್ಲ ಎಂದರು.
. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಉಪಾಧ್ಯಕ್ಷ ಎನ್.ಜೆ. ರಾಜಶೇಖರ್, ಎಂ.ಶಂಕರ್, ಡಿ.ಎಸ್.ಅರುಣ್ ಮೊದಲಾದವರಿದ್ದರು.