ಸ್ಮಾರ್ಟ್ ಸಿಟಿ – ನಗರದ ಅಭಿವೃದ್ಧಿಗೆ ಆದ್ಯತೆ ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಘೋಷಣೆ

ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿ, ಬಡವರಿಗೆ ಮನೆ ನಿರ್ಮಾಣ, ಯುಜಿಡಿ ( ಒಳಚರಂಡಿ) ಕಾಮಗಾರಿ ಸೇರಿದಂತೆ ನಗರದಲ್ಲಿ ಬಾಕಿ ಉಳಿದ ಪ್ರಮುಖ ಕಾಮಗಾರಿಗಳನ್ನು ಪೂರ್ಣ ಗೊಳಿಸುವುದಾಗಿ ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಇಂದು ಸುದ್ಛ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಆಶ್ರಯ ಮನೆಗಾಗಿ ಎರಡು ಬಾರಿ ಅರ್ಜಿ ಸಲ್ಲಿಸಿರುವ ಬಡವರು ಮನೆ ಸಿಗುವ ಬಗ್ಗೆ ನಂಬಿಕೆಯೇ ಕಳೆದುಕೊಂಡಿದ್ದಾರೆ. ಎಲ್ಲರಿಗೂ ಮನೆ ನೀಡುವುದಲ್ಲದೆ ಎಲ್ಲರ ನಂಬಿಕೆಗಳಿಸುವಂತೆ ಅಭಿ ವೃದ್ಧಿ ಕೆಲಸ ಮಾಡಿತೋರಿಸುತ್ತೇನೆ ಎಂದರು.
ಬಿಜೆಪಿ ಅಧಿಕಾರವಧಿಯಲ್ಲಿ ಪ್ರಾರಂಭವಾದ ಕೆಲ ಪ್ರಮುಖ ಕಾಮಗಾರಿಗಳು ಪೂರ್ಣಗೊಳ್ಳದೆ ಬಾಕಿ ಉಳಿದಿದ್ದು, ಅವುಗಳನ್ನು ಪೂರ್ಣಗೊಳಿಸಿ ಜನರ ಸೇವೆಗೆ ನೀಡಲಾಗುವುದು. ಪ್ರಮುಖವಾಗಿ ಕೇಂದ್ರದ ಸ್ಮಾರ್ಟ್ ಸಿಟಿ ಯೋಜನೆ ಮಂಜೂರಾಗಿ ೩ ವರ್ಷವಾದರೂ ಇನ್ನೂ ಅಧಿಕೃತವಾಗಿ ಗುದ್ದಲಿಪೂಜೆಯಾಗಿಲ್ಲ, ಅಲ್ಲದೆ ಯಾವ ಯಾವ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಅಂತಿಮ ತೀರ್ಮಾನವಾಗಿಲ್ಲ. ಈ ಬಗ್ಗೆ ಮೊದಲ ಸುತ್ತಿನ ಸಭೆಯನ್ನು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳೊಂದಿಗೆ ಮಾಡಿದ್ದೇನೆ. ಮುಂದೆ ಸಾರ್ವಜನಿಕರ ಸಭೆ ನಡೆಸಿ ಅಗತ್ಯ ಸಲಹೆ ಪಡೆದು ಯೋಜನೆಯ ರೂಪುರೇಷ ಸಿದ್ದಪಡಿಸಲಾಗುವುದು ಎಂದರು.
ಸ್ಮಾರ್ಟ್ ಸಿಟಿ ಯೋಜನೆ ಕಾಮ ಗಾರಿ ತ್ವರಿತಗೊಳಿಸಲು ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರೆ ಜೊತೆ ಚರ್ಚಿಸಿದ್ದೇನೆ. ಕೇಂದ್ರದ ನಗರಾಭಿವೃದ್ಧಿ ಸಚಿವರನ್ನು ನಗರಕ್ಕೆ ಕರೆಯಿಸಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದ ಸ್ಮಾರ್ಟ್ ಸಿಟಿ ಯೋಜನೆಗೆ ಒಟ್ಟು ೧೦೦೦ಕೋಟಿರೂ. ಬರುತ್ತದೆ. ಈ ಹಣ ಸದ್ಭಳಕೆ ಮಾಡಿಕೊಂಡು ನಗರದ ಅಭಿವೃದ್ಧಿಗೆ ಬೇಕಾದ ಕಾಮಗಾರಿ ಕೈಗೊಳ್ಳಲಾಗುವುದು ಎಂದ ಅವರು, ಕೇಂದ್ರ ಮತ್ತು ರಾಜ್ಯದ ವಸತಿ ಯೋಜನೆಯಡಿ ಬಡವರಿಗೆ ಗೋವಿಂದಪುರದಲ್ಲಿ ಮನೆ ಕಟ್ಟಿಕೊಡಲಾಗುವುದು. ದೇವಕಾತಿ ಕೊಪ್ಪದಲ್ಲಿ ಕೈಗಾರಿಕೆ ಗಳಿಗೆ ಮೀಸಲಿಟ್ಟ ೬೦೦ ಎಕರೆ ಜಾಗದಲ್ಲಿ ಕಾರ್ಮಿಕರಿಗೆ ಮನೆ ಕಟ್ಟಲೂ ಜಾಗವಿದ್ದು, ಇದನ್ನು ಬಳಸಿಕೊಂಡು ಮನೆಕಟ್ಟಲಾಗುವುದು ಎಂದರು.
ನಗರದ ಯುಜಿಡಿ ಕಾಮಗಾರಿ ಅಪೂರ್ಣವಾಗಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಇದನ್ನು ಪೂರ್ಣ ಗೊಳಿ ಸಲು ಸೂಚಿಸಲಾಗಿದೆ ಎಂದರು.
ಶಾಸಕರ ಕಛೇರಿ: ತಮ್ಮ ನೂತನ ಕಛೇರಿಯನ್ನು ನೆಹರು ರಸ್ತೆ ಶಿವಪ್ಪನಾಯಕ ಮಾರುಕಟ್ಟೆ ಕಟ್ಟಡದಲ್ಲಿ ಜೂ.೨೧ರ ಬೆಳಿಗ್ಗೆ ೧೦.೩೦ಕ್ಕೆ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಾಂ ತರ ಶಾಸಕ ಅಶೋಕನಾಯ್ಕ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಪ್ರಮುಖರಾದ ಡಿ.ಎಸ್. ಅರುಣ್, eನೇಶ್ವರ್, ಮಧುಸೂದನ್, ನಾಗರಾಜ್, ಅನಿತಾ ರವಿಶಂಕರ್, ಅಣ್ಣಪ್ಪ, ಹಿರಣ್ಣಯ್ಯ ಮತ್ತಿತರರಿದ್ದರು.