ಭದ್ರಾವತಿ : ರಾಜ್ಯದಲ್ಲಿ ಉಪ ಚುನಾವಣೆ ಯಾಕಾದರೂ ಬಂದಿದೆ ಎಂಬಂತಹ ಸಂದರ್ಭದಲ್ಲಿ ವಿಚಾರ ಮಾಡಿದರೆ, ಅಕಾರದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಚ್ಚಾಟಗಳನ್ನು ನೋಡಿದರೆ ಚುನಾವಣೆ ಅವಶ್ಯಕತೆ ಇತ್ತು ಎಂಬಂತಹ ವಾತಾವರಣ ಇದೆ ಎಂದು ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸಿದ್ದಾರೂಢ ನಗರದಲ್ಲಿರುವ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಕಾರದಲ್ಲಿದೆ. ಚುನಾವಣೆ ಪ್ರಚಾರಕ್ಕೆ ಒಬ್ಬರಿಗೊಬ್ಬರೂ ಸೇರಿ ಪ್ರಚಾರ ಮಾಡಲು ತಯಾರಿಲ್ಲದಂತಹ ಪರಿಸ್ಥಿತಿಯನ್ನು ಈ ಎರಡೂ ಪಕ್ಷಗಳು ಮುಟ್ಟಿವೆ. ಇಂತಹ ಸ್ಥಿತಿಯಲ್ಲಿ ಇವರುಗಳು ರಾಜ್ಯವನ್ನು ಆಳುತ್ತಿ ರುವುದು ನಾಡಿನ ದೌರ್ಭಾಗ್ಯದ ಸಂಗತಿ ಎಂದರು.
ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ರವರುಗಳೇ ಆಡಳಿತ ನಡೆಸುತ್ತಿದ್ದಾರೆ. ಆದರೂ ಇವರಿಗೆ ಸಮಾಧಾನ ಇಲ್ಲ. ಇಂಜಿನಿಯರ್ ವರ್ಗಾವಣೆ ದಂಧೆ ಯಲ್ಲಿ ತೊಡಗಿದ್ದಾರೆ.ಇದರ ಮಧ್ಯೆ ಕಾಂಗ್ರೆಸ್‌ನಲ್ಲಿ ಮಂತ್ರಿಗಿರಿ ಸಿಕ್ಕರೆ ಸಾಕು ಎನ್ನುವಂತಹ ವಾತಾವರ ಣದಲ್ಲಿ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಆದರೆ ಯಾರೂ ನಾಡಿನ ಜನತೆಯ ಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಚಿಸ ದಿರುವುದು ದುರ್ದೈವದ ಸಂಗತಿ ಎಂದು ಲೇವಡಿ ಮಾಡಿದರು.
ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಯನ್ನು ಘೋಷಣೆ ಮಾಡಿ ಚುನಾವಣಾ ಪ್ರಚಾರದ ತಯಾರಿ ಮಾಡುವ ಮೂಲಕ ರಾಜ್ಯದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶ ಸಾಸಿದೆ ಎಂದರು.
ಹಿಂದುತ್ವ ಉಳಿಯಬೇಕು, ನಮೋ ಮತ್ತೆ ಪ್ರಧಾನಿಯಾಗಬೇಕು ಜಿಲ್ಲೆ ಯಲ್ಲಿ ಪುನಃ ಬಿ.ವೈ. ರಾಘವೇಂದ್ರ ಗೆಲ್ಲಬೇಕು. ಈ ಹಿನ್ನೆಲೆಯಲ್ಲಿ ಚುನಾವಣೆ ಮಹತ್ವ ಪಡೆದು ಕೊಂಡಿದೆ ಎಂದರು.
ಸಭೆಯನ್ನು ಉದ್ದೇಸಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಾಜಿ ಸಭಾಪತಿ ಡಿ.ಹೆಚ್.ಶಂಕರ ಮೂರ್ತಿ, ಜಿಲ್ಲಾ ಧ್ಯಕ್ಷ ಎಸ್.ರುದ್ರೇಗೌಡ, ಎಸ್.ದತ್ತಾತ್ರಿ ಮಾತನಾಡಿದರು.
ಜಿ.ಆನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪಕ್ಷದ ಮುಖಂ ಡರುಗಳಾದ ವಿ.ಕದಿರೇಶ್, ಜಿ.ಧರ್ಮಪ್ರಸಾದ್, ಸುನೀತ ನಂಬೀಯಾರ್, ಜಿ.ಆರ್.ಪ್ರವೀಣ ಪಟೇಲ್, ಸೇರಿದಂತೆ ಸ್ಥಳಿಯ ಮುಖಂಡರುಗಳು ಹಾಗು ಪದಾಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.