ಶಿವಮೊಗ್ಗ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಜನಸಾಮಾನ್ಯರಿಗೆ ಮರಳು ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳ ಬೇಕೆಂದು ಇಂದು ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಶಾಸಕರುಗಳು ಒತ್ತಾಯಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನ ಸಭೆಯಲ್ಲಿ ಜಿಲ್ಲೆಯ ಶಾಸಕರುಗಳು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮರಳು ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಕುಡಿಯುವ ನೀರಿನ ಯೋಜನೆ ಹಾಗೂ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಂಬಂಧಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತರುವುದೇ ಇಲ್ಲ. ಇದರಿಂದಾಗಿ ಸರ್ಕಾರದಿಂದ ಇದಕ್ಕೆ ಎಷ್ಟು ಹಣ ಬಂದಿದೆ. ಇದರ ರೂಪು ರೇಷೆ ಏನು ಎಂಬುದು ನಮಗೆ ತಿಳಿಯುತ್ತಿಲ್ಲ. ಜನ ಸಾಮಾನ್ಯರು ಕುಡಿಯುವ ನೀರನ್ನು ನಮ್ಮ ಬಳಿ ಕೇಳುತ್ತಾರೆ ಹೊರತು ಅಧಿಕಾರಿಗಳನ್ನು ಕೇಳುವುದಿಲ್ಲ. ಅಧಿಕಾರಿಗಳು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಶಾಸಕರ ಗಮನಕ್ಕೆ ತರುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಡಿ.ಸಿ. ತಮ್ಮಣ್ಣ ಅವರು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರೊಂದಿಗೆ ಚರ್ಚಿಸಿಯೇ ಯೋಜನೆ ರೂಪಿಸಬೇಕೆಂದು ಸೂಚಿಸಿದರು.
ಪ್ರಮುಖವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನೇಕವು ಜಿಲ್ಲೆಯಲ್ಲಿ ನೆನೆಗಿದಿಗೆ ಬಿದ್ದಿವೆ, ೧೨ ತಿಂಗಳಲ್ಲಿ ಆಗಬೇಕಾದ ಕಾಮಗಾರಿ ಗಳು ೭ ವರ್ಷಗಳಾದರೂ ಆಗಿಲ್ಲ ಎಂದು ಗ್ರಾಮಾಂತರ ಶಾಸಕ ಅಶೋಕ್‌ನಾಯ್ಕ ವಿಷಯ ಪ್ರಸ್ತಾಪಿಸಿದರು.
ಅಗರದಳ್ಳಿ, ಬುಳ್ಳಾಪುರದಲ್ಲಿ ಜಾಗದ ಸಮಸ್ಯೆ ತೋರಿಸಿ ಕಾಮಗಾರಿ ೬ ಬಹು ಗ್ರಾಮ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ತಕ್ಷಣ ಕ್ರಮ ಕೈಗೊಂಡು ಬೇಸಿಗೆಯೊಳಗೆ ನೀರು ನೀಡಬೇಕೆಂಬ ಬೇಡಿಕೆಗೆ ಸಚಿವರು ಕ್ರಮಕ್ಕೆ ಸೂಚಿಸಿದರು.
ಮರಳಿನ ಸಮಸ್ಯೆ ನೀಗಿಸದಿದ್ದಲ್ಲಿ ಜನರು ದಂಗೆ ಏಳುವುದು ನಿಶ್ಚಿತ ಎಂದು ತೀರ್ಥಹಳ್ಳಿ ಶಾಸಕ ಆರಗ eನೇಂದ್ರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ತೀರ್ಥಹಳ್ಳಿಯಲ್ಲಿ ಬೇಕಾದಷ್ಟು ಮರಳಿದ್ದರೂ ಸ್ಥಳಿಯರು ಒಂದು ಟ್ರಾಕ್ಟರ್ ಮರಳು ಪಡೆಯುವುದು ಕಷ್ಟವಾಗಿದೆ. ನೂತನ ಮರಳು ನೀತಿಯಿಂದ ಜನರು ಬೇಸತ್ತಿದ್ದಾರೆ. ತಕ್ಷಣ ಇದಕ್ಕೆ ಪರಿಹಾರ ಸೂಚಿಸಿ ಎಂದು ಸಚಿವರನ್ನು ಒತ್ತಾಯಿ ಸಿದರು.
ಶಾಸಕರಾದ ಹಾಲಪ್ಪ, ಕುಮಾರ ಬಂಗಾರಪ್ಪ ಇದಕ್ಕೆ ಪೂರಕವಾಗಿ ಮಾತ ನಾಡಿ, ತಮ್ಮ ಕ್ಷೇತ್ರದಲ್ಲಿ ಮರಳಿಲ್ಲದೆ ಸಮಸ್ಯೆಯಾಗಿದ್ದು, ಸ್ಟಾಕ್ ಯಾರ್ಡ್ ಸ್ಥಾಪಿಸಿ ಮರಳು ವಿತರಿಸುವಂತೆ ಆಗ್ರಹಿಸಿದರು.
ಶಾಸಕ ಈಶ್ವರಪ್ಪ ಮಾತನಾಡಿ, ಮರಳಿನ ಸಮಸ್ಯೆ ಇಂದಿನದಲ್ಲ, ಬಡವರು ಮನೆ ಕಟ್ಟಲು, ದೇವಸ್ಥಾನ ಕಟ್ಟಲೂ ಮರಳು ನೀಡಲು ನಿಮ್ಮಿಂದ ಆಗುತ್ತಿಲ್ಲ. ಬರೀ ಮರಳು ನೀತಿಯ ನಿಯಮಗಳನ್ನು ಹೇಳುತ್ತ ಕಾಲ ತಳ್ಳಲಾಗುತ್ತಿದೆ. ಸರ್ಕಾರ ಮರಳು ನೀತಿ ಬದಲಿಸಬೇಕು ಈ ಬಗ್ಗೆ ಜಿಲ್ಲಾ ಸಚಿವರು ದೇವೇಗೌಡರೊಂದಿಗೆ ಮಾತ ನಾಡಿ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ೨೩ ಬ್ಲಾಕ್‌ಗಳ ಮೂಲಕ ಮರಳು ನೀಡಲು ಸಿದ್ಧತೆ ನಡೆಸಿದ್ದು, ಸೆ.೨೮ರಂದು ಪರಿಸರ ವಿವೇಚನ ಪತ್ರ ಸಿಗಲಿದ್ದು ನಂತರ ಮರಳು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂವಿeನ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಈ ತಾಲೂಕುಗಳಲ್ಲಿ ಅತಿವೃಷ್ಠಿ ಎಂದು ಘೋಷಿಸಬೇಕೆಂದು ಶಾಸಕ ಆರಗ eನೇಂದ್ರ ಸಚಿವರನ್ನು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಸರ್ಕಾರದ ಪರಿಹಾರದ ನಿಯಮದಂತೆ ಎಲ್ಲವೂ ನಿರ್ಧಾರವಾಗುವುದು. ಇಲ್ಲಿನ ಹಾನಿಗೆ ಹೆಚ್ಚುವರಿ ಪರಿಹಾರ ಕೇಳೋಣ ಎಂದರು.
ಜಿಲ್ಲಾಧಿಕಾರಿ ದಯಾನಂದ್ ಮಾತ ನಾಡಿ, ಜಿಲ್ಲೆಯಲ್ಲಿ ೮೨ಕೋಟಿರೂ. ಬೆಳೆ ಹಾನಿ ಹಾಗೂ ೧೩ ಕೋಟಿರೂ. ಅಡಿಕೆ ಕೊಳೆ ರೋಗದಿಂದ ಹಾನಿಯಾಗಿದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಮಾರ್ಟ್ ಸಿಟಿ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಯೋಜನೆ ಕೆಲಸಕ್ಕೆ ಎಂ.ಡಿ. ನೇಮಕವೂ ಆಗಿಲ್ಲ ಎಂದು ಶಾಸಕ ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯೇ ಇಲ್ಲದಂತಾಗಿದೆ. ಈಯೋಜ ನೆಯಲ್ಲಿ ಇಡೀ ನಗರದ ಅಭಿವೃದ್ಧಿ ಅಡಕವಾಗಿರುವುದಿಲ್ಲ. ಕೇವಲ ೯ ವಾರ್ಡ್‌ಗಳು ಮೊದಲ ಹಂತದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಇದರ ಬಗ್ಗೆಯೂ ಸಹ ಅಧಿಕಾರಿ ವರ್ಗದವರು ಜನಸಾಮಾನ್ಯರಿಗೆ ಮಾಹಿತಿ ನೀಡಿಲ್ಲ ಎಂದರು.
ಇದಕ್ಕೆ ಸ್ಪಂದಿಸಿದ ಸಚಿವರು, ಸೆ.೨೯ರ ಮಧ್ಯಾಹ್ನ ನಗರದಲ್ಲಿ ಸ್ಮಾರ್ಟ್ ಸಿಟಿ ಸಭೆ ನಡೆಸಿ ಕಾಮಗಾರಿಗಳಿಗೆ ವೇಗ ನೀಡೋಣ ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಚರ್ಚಿಸಲಾಯಿತು. ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡ, ಬೋಜೇಗೌಡ, ಆರ್. ಸೇರಿದಂತೆ ಮೊದಲಾದವರಿದ್ದರು.