ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ

ಲೇಖನ : ಬಿ.ನಾಗರಾಜ್

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ

ಪ್ರತಿಷ್ಠೆ ಪಣಕ್ಕಿಟ್ಟಿರುವ ನಾಯಕರು

2017ರ ರಾಜ್ಯವಿಧಾನಸಭೆ ಚುನಾ ವಣೆಗೆ ದಿಕ್ಸೂಚಿ ಎಂದೇ ಪರಿಗಣಿಸ ಲಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಆಳುವ ಕಾಂಗ್ರೆಸ್ ಪಕ್ಷ ಹಾಗೂ ಅಧಿಕಾರದ ಕನಸಿನಲ್ಲಿ ರುವ ಬಿಜೆಪಿ ಪಕ್ಷಗಳಿಗೆ ಅಕ್ಷರಶಃ ಅಗ್ನಿ ಪರೀಕ್ಷೆಯಾಗಲಿದೆ.
ಸಿದ್ಧರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡಾಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂದಿನ ವಾತಾವರಣವೇ ಮತ್ತೆ ಮರು ಕಳಿಸಿಬಿಟ್ಟಿದೆ.

ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಾಗ ಇದು ಮುಖ್ಯ ಮಂತ್ರಿ ಹಾಗೂ ಶ್ರೀನಿವಾಸ ಪ್ರಸಾ ದರ ನಡುವಿನ ಜಿದ್ದಾಜಿದ್ದಿ ಕಾಳಗ ಎಂದು ಬಣ್ಣಿಸಲಾಗಿತ್ತು. ಆದರೆ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು , ಈ ಚುನಾವಣೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಪರಿಣಮಿಸಿರುವು ದರಿಂದ ಇಡೀ ಚಿತ್ರಣವೇ ಬದಲಾಗಿ ಬಿಟ್ಟಿದ್ದು, ಸಿದ್ಧರಾಮಯ್ಯ ವರ್ಸ್‌ಸ್ ಯಡಿಯೂರಪ್ಪ ಎಂಬಂತಾಗಿದ್ದು, ಸೋಲು ಸ್ವೀಕರಿಸುವ ಮನಸ್ಥಿತಿಯಲ್ಲಿ ಇಬ್ಬರೂ ಇಲ್ಲ. ವಾಸ್ತವವಾಗಿ ಈ ಎರಡೂ ಕ್ಷೇತ್ರ ಗಳ ಚುನಾವಣಾ ಫಲಿತಾಂಶದ ಸೋಲು ಕಾಂಗ್ರೆಸ್ ಸರ್ಕಾರದ ಪತನ ವಾಗುವುದಿಲ್ಲ. ಅಂತೆಯೇ ಪ್ರತಿಪಕ್ಷ ಬಿಜೆಪಿ ಗೆದ್ದರೆ ಅಧಿಕಾರದ ಚುಕ್ಕಾಣಿ ಯನ್ನೇನು ಹಿಡಿಯುವುದಿಲ್ಲ. ಎರಡೂ ಕ್ಷೇತ್ರಗಳಲ್ಲಿ ಯಾರೇ ಗೆದ್ದರೂ ಅವರ ಅಧಿಕಾರದ ಅವಧಿ ಅಲ್ಪಾವಧಿಯಾಗಿರುತ್ತದೆ. ಆದರೂ ಫಲಿತಾಂ ಶದ ಪರಿಣಾಮ ಕುರಿತು ಎರಡೂ ಪಕ್ಷಗಳು ಆತಂಕಕ್ಕೊಳಗಾಗಿವೆ.

2015ರಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಯಾಯ್ತು ಎಂದು ಸಿದ್ಧರಾಮಯ್ಯ ಜೆಡಿಎಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪ ಚುನಾವಣಾ ಎದುರಿಸಿದ್ದರು. ಆಗ ಶ್ರೀನಿವಾಸ್ ಪ್ರಸಾದ್ ಸಿದ್ಧರಾಮಯ್ಯ ಅವರ ಬೆನ್ನಿಗೆ ನಿಂತಿದ್ದರು.
ಇದೀಗ ಅದೇ ಶ್ರಿನಿವಾಸ್ ಪ್ರಸಾದ್ ಸ್ವಾಭಿಮಾನಕ್ಕೆ ಧಕ್ಕೆಯಾ ಯ್ತೆಂದು ಕಾಂಗ್ರೆಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಯಿಂದ ಉಪ ಚುನಾವಣೆಗೆ ನಿಂತಿದ್ದಾರೆ. ಇಡೀ ಸಂಪುಟವೇ ಬಂದು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳಲಿ ನೋಡೋಣ ಎಂದು ಶ್ರೀನಿ ವಾಸ್ ಪ್ರಸಾದ್ ಸವಾಲು ಹಾಕಿ ದ್ದಾರೆ.ಹೀಗಾಗಿ ಸಿದ್ಧರಾಮಯ್ಯ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಇಡೀ ಸಂಪುಟ ಸದಸ್ಯರೊಂದಿಗೆ ನಂಜನ ಗೂಡಿಗೆ ಲಗ್ಗೆ ಇಟ್ಟಿದ್ದಾರೆ. ಅದಕ್ಕೂ ಮುಂಚೆ ಠಿಕಾಣಿ ಹೂಡಿರುವ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಗಳ ಗೆಲುವಿಗಾಗಿ ತಾವು ಕಲಿತ ವಿದ್ಯೆಯನ್ನೆಲ್ಲ ಧಾರೆ ಎರೆಯುತ್ತಿದ್ದಾರೆ.

ಆದರೆ ಎರಡೂ ಕ್ಷೇತ್ರಗಳ ಮತದಾರರು ಗುಟ್ಟು ಬಿಡುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಉಪ ಚುನಾ ವಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ ಬಿಜೆಪಿ ಹೈಕಮಾಂಡ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಬಿಟ್ಟಿದೆ. ಇದು ಒಂದು ರೀತಿಯಲ್ಲಿ ಬಿ.ಎಸ್.ಡಿಯೂರಪ್ಪ ಅವರಿಗೆ ಅಗ್ನಿ ಪರೀಕ್ಷೆ ಕೂಡಾ.ಮುಂದಿನ ವಿಧಾನಸಭೆ ಚುನಾ ವಣೆಗೆ ಟಾರ್ಗೆಟ್ ೧೫೦ರೊಂದಿಗೆ ಅಧಿಕಾರ ಹಿಡಿದೇ ತೀರುತ್ತೇನೆಂದು ಛಲ ತೊಟ್ಟಿರುವ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದಾರೆ. ಎರಡೂ ಕ್ಷೇತ್ರಗಳನ್ನು ಗೆದ್ದು ಹೈಕಮಾಂಡ್‌ಗೆ ತಮ್ಮ ತಾಕತ್ತು ತೋರಿಸುವುದು ಅವರ ಉದ್ದೇಶ. ಇವೆರಡೂ ಕ್ಷೇತ್ರಗಳಲ್ಲಿ ಲಿಂಗಾಯಿತ ಮತದಾರರು ತಲಾ ೫೦ ಸಾವಿರದಷ್ಟಿ ರುವುದು ಯಡಿಯೂರಪ್ಪ ಆತ್ಮಬಲ ಹೆಚ್ಚಿಸಿದೆ.

ಆದರೆ, ಗುಂಡ್ಲುಪೇಟೆಯಲ್ಲಿ ದಿ.ಮಾಜಿ ಸಚಿವ ಮಹದೇವ ಪ್ರಸಾದ್ ಅವರ ಪತ್ನಿಯೇ ಚುನಾ ವಣಾ ಕಣದಲ್ಲಿರುವುದು ಯಡಿಯೂರಪ್ಪ ಅವರ ತಲೆನೋವಿಗೆ ಕಾರಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹ ದೇವ ಪ್ರಸಾದ್ ಲಿಂಗಾಯಿತ ಕೋಮಿಗೆ ಸೇರಿದ್ದು, ಕಾಂಗ್ರೆಸ್ ಎಂಬ ಕಾರಣಕ್ಕೆ ಸಿದ್ಧರಾಮಯ್ಯನವ ರಿಂದಾಗಿ ಅಹಿಂದ ಮತಗಳ ಜೊತೆಗೆ ಮಹದೇವ ಪ್ರಸಾದ್‌ರ ಸಾವಿನ ಅನುಕಂಪ ಕೆಲಸ ಮಾಡಿದರೆ ಗೀತಾರ ಆಯ್ಕೆ ಕಷ್ಟವಾಗಲಾರದು. ಅಲ್ಲದೇ ಈ ಮಧ್ಯೆ ಗುಂಡ್ಲುಪೇಟೆ ಉಪ ಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿ ಜೊತೆಗೆ ಭಾವನಾತ್ಮಕ ವಿಚಾ ರವೂ ತಳುಕು ಹಾಕಿ ಕೊಂಡಿದ್ದು, ನಿಮ್ಮನ್ನು ಅವಿರೋಧ ಆಯ್ಕೆ ಮಾಡು ವುದಾಗಿ ಯಡಿ ಯೂರಪ್ಪ ಭರವಸೆ ನೀಡಿದ್ದರೆಂದು ಗೀತಾ ಹೇಳುತ್ತಿದ್ದಾರೆ.

ಸಮುದಾಯದ ಪ್ರಭಾವಿ ನಾಯಕ. ಆದರೆ ಲಿಂಗಾಯಿತ ವಿರೋಧಿ ಎಂಬ ಹಣೆ ಪಟ್ಟಿ ಮುಂಚಿನಿಂದಲೂ ಇದೆ. ಒಂದೊಮ್ಮೆ ಯಡಿಯೂರಪ್ಪ ಕಾರಣಕ್ಕೆ ಲಿಂಗಾಯಿತರು ಬಿಜೆಪಿ ಯನ್ನು ಬೆಂಬಲಿಸಿದರೂ, ಪೂರ್ಣ ಪ್ರಮಾಣದಲ್ಲಿ ಶ್ರೀನಿವಾಸ ಪ್ರಸಾದ್ ಲಿಂಗಾಯಿತರ ಮತಗಳನ್ನು ನೆಚ್ಚಿ ಕೊಳ್ಳುವಂತಿಲ್ಲ. ಅಸಲಿ ಸಂಗತಿ ಗೊತ್ತಿ ರುವುದರಿಂದ ಸಿದ್ಧರಾಮಯ್ಯ ಹೆಚ್ಚು ಖುಷಿಯಾಗಿದ್ದಾರೆ. ಜೊತೆಗೆ ಅಹಿಂದ ವರ್ಗ ಕಾಂಗ್ರೆಸ್ ಕೈ ಬಿಡುವುದಿಲ್ಲ ಎಂಬ ನಂಬಿಕೆಯೇ ಮುಖ್ಯಮಂತ್ರಿಗಳ ಆತ್ಮ ವಿಶ್ವಾಸ ಹೆಚ್ಚಿಸಿದೆ .

ಸುತ್ತೂರು ಮಠ ನಿರ್ಣಾಯಕ :

ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿಶಾಲಿಯಾಗಿರುವ ಸುತ್ತೂರು ಮಠ ಲಿಂಗಾಯಿತರ ಮಠವಾದರೂ ಶ್ರೀಗಳು ತಮ್ಮ ಜಾತ್ಯಾತೀತ ನಿಲುವಿ ನಿಂದಾಗಿ ಸರ್ವ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಶ್ರೀನಿ ವಾಸ್ ಮುಂಚಿನಿಂದಲೂ ಶ್ರೀಗಳ ಜೊತೆ ಅನ್ಯೋನ್ಯತೆ ಹೊಂದಿಲ್ಲ. ಆದರೆ ಸಿದ್ಧರಾಮಯ್ಯ ಅಂದರೆ ಶ್ರೀ ಗಳಿಗೆ ಅಚ್ಚುಮೆಚ್ಚು. ಇದನ್ನು ಮನ ಗಂಡಿರುವ ಬಿಎಸ್‌ವೈ ಮಠಕ್ಕೆ ಎಡತಾಕುತ್ತಿದ್ದಾರೆ. ಧರ್ಮ ಸಂಕಟಕ್ಕೆ ಸಿಲುಕಿರುವ ಶ್ರೀಗಳು ತಟಸ್ಥನೀತಿ ಅನುಸರಿಸುವ ಸಾಧ್ಯತೆ ಇದೆ. ಅಂತೆಯೇ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ತಟಸ್ಥರಾಗಿರುವ ಜೆಡಿಎಸ್ ಕಾರ್ಯ ಕರ್ತರು ವರಿಷ್ಠರು ಕಾರ್ಯಕರ್ತರಿಗೆ ಸೂಚನೆ ನೀಡದಿದ್ದರೂ, ಇಲ್ಲಿನ ಬಹುತೇಕ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿರು ವುದು ಗುಟ್ಟಾಗಿ ಉಳಿದಿಲ್ಲ. ಆದರೂ ಬಡಪೆಟ್ಟಿಗೆ ಪಟ್ಟು ಬಿಡದ ಯಡಿ ಯೂರಪ್ಪ ತಮ್ಮ ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡು ತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧ ರಾಮಯ್ಯ ಕೂಡಾ ಹಿಂದೆ ಬಿದ್ದಿಲ್ಲ. ಮತದಾರರು ಕೂಡಾ ಗುಟ್ಟು ಬಿಡುತ್ತಿಲ್ಲವಾದ್ದರಿಂದ ಏ.13ರವರೆಗೆ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.

ಕಾಂಗ್ರೆಸ್ ಈ ಎರಡೂ ಕ್ಷೇತ್ರಗಳಲ್ಲಿ ದಲಿತ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದೆ. ಶ್ರೀನಿವಾಸ್ ಪ್ರಸಾದ್ ದಲಿತ