ಮಾಸಾಂತ್ಯಕ್ಕೆ ಯೋಜನಾ ಪ್ರಸ್ತಾವನೆ ಸರ್ಕಾರಕ್ಕೆ

ಶಿವಮೊಗ್ಗ : ಜಿಲ್ಲಾ ಯೋಜನಾ ಸಮಿತಿ ವರದಿಯನ್ನು ಸಿದ್ಧಪಡಿಸಿ ಈ ತಿಂಗಳ ಅಂತ್ಯದ ಒಳಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಂದು ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದರು.
ಪ್ರಸ್ತುತ ಸಾಲಿನ ಜಿಲ್ಲಾ ಯೋಜನಾ ಸಮಿತಿಯ ರಚನೆ ಪ್ರಕ್ರಿಯೆ ಸುಮಾರು ಒಂದೂವರೆ ತಿಂಗಳ ಕಾಲ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗ ಸೂಚಿ ಪ್ರಕಾರ ಜಿಲ್ಲಾ ಯೋಜನೆಯ ರೂಪುರೇಶೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ತಾಲೂಕು ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಈ ಬಾರಿಯೂ ಬರಪರಿಸ್ಥಿತಿ ಎದುರಾಗುವ ಅಪಾ ಯದ ಎಲ್ಲಾ ಲಕ್ಷಣಗಳು ಕಾಣಿಸು ತ್ತಿದ್ದು, ಅದನ್ನು ಎದುರಿಸಲು ಈಗಿಂದಲೇ ಪೂರ್ವ ಸಿದ್ಧತೆ ಮಾಡಲಾಗುವುದು. ಈವರೆಗೆ ರಾಜ್ಯದಲ್ಲಿ ಮುಂಗಾರು ಆಶಾದಾಯಕವಾಗಿಲ್ಲ. ಮಳೆ ಬೆಳೆ ಪರಿಸ್ಥಿತಿ ಕುರಿತಾಗಿ ನಿಗಾ ವಹಿಸಲಾ ಗಿದ್ದು, ಎಲ್ಲಾ ಜಿಲ್ಲಾಧಿಕಾರಿಗಳಿಂದ ವರದಿ ತರಿಸಲಾಗುತ್ತಿದೆ. ಆಲಮಟ್ಟಿ ಹಾಗೂ ಹಾರಂಗಿ ಜಲಾಶಯಗಳನ್ನು ಬಿಟ್ಟರೆ ಯಾವುದೇ ಜಲಾಶಯಗಳು ತುಂಬಿಲ್ಲ. ಭದ್ರಾ, ಹೇಮಾವತಿ, ಕೆಆರ್‌ಎಸ್ ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿಲ್ಲ. ರಾಜ್ಯದಲ್ಲಿ ಭತ್ತವನ್ನು ಬೆಳೆಯುವ ಪರಿಸ್ಥಿತಿ ಇಲ್ಲ. ಬರಗಾಲ ಘೋಷಣೆ ಕುರಿತು ನವೆಂಬರ್‌ವರೆಗೆ ಕಾದು ನೋಡಲಾಗುವುದು ಎಂದರು.
ಪ್ರಾಪರ್ಟಿ ಕಾರ್ಡ್ ಪದ್ಧತಿಯನ್ನು ಪ್ರಾಯೋಗಿಕವಾಗಿ ಮೈಸೂರು, ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಜಾರಿಗೆ ತರಲಾಗಿದೆ. ಆದರೆ ಇದರ ಬಗ್ಗೆ ಕೆಲವು ಅಪಸ್ವರಗಳಿದ್ದು, ಇದನ್ನು ಸರಿಪಡಿಸುವ ಕುರಿತಾಗಿ ಒಂದು ವಾರದ ಒಳಗಾಗಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾ ಧ್ಯಕ್ಷೆ ವೇದಾವಿಜಯಕುಮಾರ್, ಸಿಇಓ ರಾಕೇಶ್ ಕುಮಾರ್ ಮುಂತಾದವರು ಇದ್ದರು.