ಶಿವಮೊಗ್ಗ: ಇಲ್ಲಿಯವರೆಗೆ ಯಾರೂ ಹಿಂದೂ ಸಮಾಜವನ್ನು ಟೀಕೆ ಮಾಡಿರಲಿಲ್ಲ.
ಬಿಜೆಪಿಗೆ ಬಹುಮತ ಬರದಿರುವುದು ಕಾಂಗ್ರೆಸ್‌ಗೆ ಹರ್ಷ ತಂದಿದೆ ಹಾಗಾಗಿ ಹಿಂದೂ ಸಮಾಜ
ಹಿಂಸಾ ಕೃತ್ಯದಲ್ಲಿ ಇಳಿದುಬಿಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್
ಗಾಂಧಿಯವರು ಹೇಳಿಕೆ ಕೊಟ್ಟಿರುವುದು ಇಡೀ ಪ್ರಪಂಚದ ಹಿಂದುಗಳಿಗೆ
ನೋವನ್ನು ಉಂಟು ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಹೇಳಿದರು.
ಅವರು ಇಂದು ಮೈದುಂಬಿ ಹರಿಯುತ್ತಿರುವ ತುಂಗ ನದಿಗೆ ಬಾಗಿನ ಅರ್ಪಿಸಿದ ನಂತರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ಗಾಂಧಿಯವರು ವಿರೋಧ
ಪಕ್ಷದ ಸ್ಥಾನವನ್ನು ಗೌರವದಿಂದ ನಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇಡೀ ಹಿಂದು
ಸಮಾಜ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿ ಬೀಳುತ್ತದೆ ಎಂದರು.
ಬಿಜೆಪಿಯ ಮುಖಂಡರಿಂದ ನನಗೆ ಮತ್ತೆ ಪಕ್ಷ ಸೇರಿ ಸಂಘಟನೆ ಬಲಪಡಿಸಲು ಕರೆ
ಬಂದಿರುವುದು ನಿಜ. ಆದರೆ, ನನಗೆ ನಾಲ್ಕು ಬಾರಿ ಪಕ್ಷದಿಂದ ಅನ್ಯಾಯವಾಗಿದೆ. ಪಕ್ಷ
ನಿಷ್ಟನಾಗಿ ಪಕ್ಷ ಹೇಳಿದ ಎಲ್ಲಾ ಕಾರ್ಯಗಳನ್ನು ನಿಭಾಯಿಸಿದ್ದೇನೆ. ನನ್ನ ಬೇಡಿಕೆಗೆ
ನಾಯಕರು ಒಪ್ಪಿದರೆ ನಾನು ಮತ್ತೆ ಪಕ್ಷಕ್ಕೆ ಬರುತ್ತೇನೆ. ಈಗ ಸದ್ಯಕ್ಕೆ
ತುರ್ತುಯಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಇ.ಕಾಂತೇಶ್, ಈ.ವಿಶ್ವಾಸ್, ಸುವರ್ಣ ಶಂಕರ್,
ಶಂಕರ್‌ಗನ್ನಿ, ಮಹಾಲಿಂಗಶಾಸ್ತ್ರಿ, ಅ.ಮಾ.ಪ್ರಕಾಶ್, ಆರತಿ ಅ.ಮಾ.ಪ್ರಕಾಶ್, ಜಾಧವ್,
ಶಂಕರ್, ಜಯಲಕ್ಷ್ಮೀ ಈಶ್ವರಪ್ಪ, ಸೀತಾಲಕ್ಷ್ಮೀ ಇನ್ನಿತರರಿದ್ದರು.