ಶಿವಮೊಗ್ಗ : ರಾಜ್ಯ ಸರ್ಕಾರ ಕೇವಲ ಸುಳ್ಳು ಆಶ್ವಾಸನೆ ನೀಡುತ್ತಾ, ಜನರ ಕಿವಿಗೆ ಹೂ ಮುಡಿಸುವ ಕೆಲಸಮಾಡುತ್ತಿದೆ ಎಂದು ಜಿ.ಪಂ. ಸದಸ್ಯ ಕೆ.ಈ.ಕಾಂತೇಶ್ ಆರೋಪಿಸಿದರು.
ಇಂದು ನಗರದ ಓ.ಟಿ . ರಸ್ತೆಯಲ್ಲಿರುವ ಕೃಷಿ ಇಲಾಖೆ ಕಛೇರಿಯ ಆವರಣದಲ್ಲಿ ಬಿಜೆಪಿ ವಿಸ್ತಾರಕ ಕಾರ್ಯಯೋಜನೆಯ ವಿಸ್ತಾರಕರು ಹಾಗೂ ಆಯಾ ಭೂತ್‌ಮಟ್ಟದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಯವರ ಸ್ವಚ್ಛ ಭಾರತ್ ಅಭಿಯಾನ ದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬರೀ ಸುಳ್ಳು ಆಶ್ವಾಸನೆ. ಭರವಸೆ ನೀಡುತ್ತಾ, ರಾಜ್ಯದ ಜನತೆಯನ್ನು ವಂಚಿಸುತ್ತಿದೆ. ಕೇಂದ್ರ ಸರ್ಕಾರದ ರಿಯಾಯ್ತಿ ದರದ ಅಕ್ಕಿ ಪಡೆದು ನಮ್ಮ ಸರ್ಕಾರದ್ದು ಎಂದು ಹೇಳುತ್ತಿದೆ. ಬಡವರಿಗೆ ಉಚಿತವಾಗಿ ಗ್ಯಾಸ್ ನೀಡಿದ್ದನ್ನು ನಮ್ಮ ಸರ್ಕಾರದ್ದು ಎಂದು ಹೇಳುತ್ತಿದೆ ಎಂದು ದೂರಿದರು.
ಮೋದಿ ಸರ್ಕಾರವು ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ವಿಧವೆಯರು, ಅಂಗವಿಕಲ, ವೃದ್ಧಾಪ್ಯರು, ಮಹಿಳೆಯರ ಕಲ್ಯಾಣ ಕಾರ್ಯಕ್ರಮ ಮುಂತಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ. ಪ್ರಪಂಚದಲ್ಲೇ ಭಾರತ ದೇಶದ ಸಾರ್ವಭೌಮ, ಸಂಸ್ಕೃತಿ, ಸಾರಿದ ಏಕೈಕ ಪ್ರಧಾನಿ ನರೇಂದ್ರ ಮೋದಿಯವರು ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿ ಕಾರ್ಯಕರ್ತರು ಒಟ್ಟಾಗಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ.ವಿ.ಅಣ್ಣಪ್ಪ.ಹೆಚ್. ಎನ್.ಮಂಜುನಾಥ್. ಕೆಂಪಮ್ಮ, ರೂಪ ಮಾಲತೇಶ್, ರಘು, ಧನಂಜಯ, ಮಂಜುನಾಥ ಎಂ.ಶಿವು ಸೇರಿದಂತೆ ಹಲವರಿದ್ದರು.