ಜೂ. 8, 9ರಂದು ವೀರಶೈವ ಕಲ್ಯಾಣ ಮಂಟಪ್ಪದಲ್ಲಿ “ದೇಸಿ ಬೀಜೋತ್ಸವ”

ಶಿವಮೊಗ್ಗ : ಜೂ.8 ಮತ್ತು 9ರಂದು ಕೆಳದಿ ಶಿವಪ್ಪನಾಯಕ ಕೃಷಿ ವಿ.ವಿ. ಮತ್ತು ಸಾವಯವ ಕೃಷಿ ಸಂಶೋಧನಾ ಕೇಂದ್ರಗಳ ಆಶ್ರಯದಲ್ಲಿ ವೀರಶೈವ ಕಲ್ಯಾಣ ಮಂಟಪ್ಪದಲ್ಲಿ ದೇಸಿ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಎಂ.ಮಲ್ಲಿಕಾರ್ಜುನ ಹೇಳಿದರು.

ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶಿ ಭತ್ತ, ತರಕಾರಿಗಳು, ಸಿರಿಧಾನ್ಯಗಳು, ದೇಶಿ ಭತ್ತದ ಅಕ್ಕಿ, ಬಾಳೆಹಣ್ಣು, ಮಾವಿನ ಹಣ್ಣುಗಳ ಸುಮಾರು ೧೦ರಿಂದ ೧೫ ಮಳಿಗೆಗಳು ಈ ದೇಸಿ ಬೀಜೋತ್ಸವದಲ್ಲಿ ಇರಲಿವೆ. ಇವುಗಳ ಜೊತೆ ಆಹಾರ ಮೇಳದ ಮಳಿಗೆ ಇರಲಿದೆ  ಎಂದು ಅವರು ತಿಳಿಸಿದರು.  

ಹೈಬ್ರಿಡ್ ಬೀಜಗಳ ಹಣ್ಣು, ತರಕಾರಿ, ಧಾನ್ಯ ಮುಂತಾದವನ್ನು ತಡೆಗಟ್ಟಿ ದೇಶಿ ತಳಿಯನ್ನು ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ೩೦ ರೀತಿಯ ದೇಶಿ ಟೊಮ್ಯಾಟೋ ಬೀಜಗಳಂತಹ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ವಿಷಮುಕ್ತ ಆಹಾರ ಮತ್ತು  ವಿಷಮುಕ್ತ ಭೂಮಿಯನ್ನು ಮಾಡುವುದಕ್ಕಾಗಿ ಇದು ನಮ್ಮ ಒಂದು ಅಳಿವು ಸೇವೆಯಾಗಿದೆ ಎಂದರು.

ಸಾವಯವ ಕೃಷಿಗೆ ಮಹತ್ವ ನೀಡುವುದು ಅಗತ್ಯ. ನಾವು ಸೇವಿಸುವ ಆಹಾರವು ಇಂದು ವಿಷಮುಕ್ತವಾಗಿದೆ. ಭೂಮಿಯನ್ನು ವಿಷ ಮಾಡಲಾಗುತ್ತಿದೆ. ನಾವೆಲ್ಲರೂ ಒಳ್ಳೆಯ ಆಹಾರ ಸೇವಿಸಬೇಕಿದೆ. ಈ  ಹಿನ್ನಲೆಯಲ್ಲಿ ಸಾವಯವ ಕೃಷಿ ಮತ್ತು ದೇಸಿಯ ಬೀಜಕ್ಕೆ ಆದ್ಯತೆ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಉಳಿವು ಪೌಂಡೇಶ್‌ನ್‌ನ ಡಾ.ಸೀಮಾ ತಿಳಿಸಿದರು.

ರಾಜ್ಯದ ವಿವಿಧ ಕಡೆ ರೈತರು ತಾವೇ ತಯಾರಿಸಿದ ದೇಸಿ ಬೀಜಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಾರೆ. ಎರಡು ದಿನಗಳ ಕಾಲ ನಡೆಯುವ ದೇಸಿ ಬೀಜೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಬಸವಕೇಂದ್ರದ ಶ್ರೀ ಮರುಳಸಿದ್ದಸ್ವಾಮೀಜಿ, ಕೃಷಿ ವಿ.ವಿ. ಉಪಕುಲಪತಿ ಡಾ. ಜಗದೀಶ್ ಆರ್.ಸಿ., ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್, ಸಾವಯವ ಸಂಶೋಧನ ಕೇಂದ್ರದ ಸಂಯೋಜಕ ಡಾ. ಎಸ್.ಪ್ರದೀಪ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ, ಐಕಾಂತಿಕ ಸಂಸ್ಥೆಯ ರಾಘವ, ಸಾವಯವ ಪೌಷ್ಠಿಕ ಶಂಕರ ಎಂ.ದೇವೇಂದ್ರಪ್ಪ, ನಂದೀಶ್ ಉಪಸ್ಥಿತರಿರುವರು ಎಂದು ನಿವೃತ್ತ ಪ್ರೊಫೆಸರ್ ಡಾ. ಎ.ವಿ. ಪ್ರದೀಪ್ ಕುಮಾರ್‍ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ್, ಸಾವಯವ ಕೃಷಿಕ ಉಪಸ್ಥಿತರಿದ್ದರು.