ಶಿವಮೊಗ್ಗ : ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ಕೋಚಿಂಗ್ ಗಿಂತ ಮುಖ್ಯವಾಗಿ ಸಾಧನೆಯ ಹಠ ಬೇಕು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಿಎನ್‌ಆರ್ ಸಭಾಂಗಣದಲ್ಲಿ ಕಾಲೇ ಜಿನ ಪಾಥ್‌ವೇಸ್ ಘಟಕ ದಿಂದ ಅದರ ವಿದ್ಯಾರ್ಥಿಗಳಿಗಾಗಿ ಏರ್ಪಡಿ ಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತ ನಾಡಿದರು.
ಯುಪಿಎಸ್‌ಸಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಸಾಧನೆ ಗಣನೀಯವಾಗಿ ಕೋಲಾರ ಮತ್ತು ಕಲ್ಬುರ್ಗಿ ಜಿಲ್ಲೆಯವರು ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಿ ದ್ದಾರೆ. ವಿದ್ಯಾವಂತರ ಜಿಲ್ಲೆ ಎನಿಸಿಕೊಂಡ ಕರಾವಳಿ ಮತ್ತು ಮಲೆನಾಡಿಗರ ಸಾಧನೆ ತೀರಾ ಕಡಿಮೆ ಎಂದು ಹೇಳಿದರು.
ಯುಪಿಎಸ್‌ಸಿ ಸಾಧನೆ ಮಾಡಿದವರಿಗೆ ಹೆಚ್ಚಿನ ಮೌಲ್ಯ ನಮ್ಮ ದೇಶದಲ್ಲಿದೆ. ಅದರಲ್ಲೂ ವಿಶೇಷ ವಾಗಿ ಐಎಎಸ್ ತೇರ್ಗಡೆಯಾ ದವರಿಗೆ ತಾರಾ ಮೌಲ್ಯವಿದೆ. ತಮಗೆ ದೊರಕುವ ಹುದ್ದೆಯಿಂದ ಸಮಾಜಕ್ಕೆ ಏನನ್ನಾದರೂ ಕೊಡುವ ಮಹತ್ವ ಕೆಲಸವನ್ನು ಇವರು ಮಾಡಲು ಸಾಧ್ಯವಿದೆ ಎಂದರು.
ಉಳಿದ ಯಾವುದೇ ಹುದ್ದೆಯಾ ದರೂ ಕೆಲವೇ ವರ್ಷಗಳವರೆಗೆ ಮಾತ್ರ ತನ್ನ ತಾರಾ ಮೌಲ್ಯವನ್ನು ಅದು ಉಳಿಸಿಕೊಳ್ಳುತ್ತದೆ. ಕೆಲವರು ಹಣದ ಆಸೆಗೆ ಬೆನ್ನುಬಿದ್ದು, ಉತ್ತಮ ಉದ್ಯೋಗ ಪಡೆದರೂ ಸಹ ಕೋಟಿಗಟ್ಟಲೆ ಸಂಪಾದನೆ ಮಾಡಿದ ನಂತರ ಅದರಿಂದ ವಿಮುಖರಾಗುವ ಸಂದರ್ಭ ಹೆಚ್ಚು. ಅಂದರೆ ಆ ಕೆಲಸ ಮೇಲಿನ ಆಸಕ್ತಿ ಹೊರಟುಹೋಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಕೆ.ಆರ್. ಶಶಿರೇಖಾ ವಹಿಸಿದ್ದರು. ಕಲಾ ಕಾಲೇಜಿನ ಪ್ರಾಚಾರ್ಯ ಪಾಂಡು ರಂಗನ್, ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ವಾಗ್ದೇವಿ, ಅನ್ನಪೂರ್ಣಾ, ನೀತು ಉಪಸ್ಥಿತರಿದ್ದರು.