ಕಂಪ್ಯೂಟರ್‌ನಿಂದ ಸಂಪರ್ಕ ಕ್ರಾಂತಿ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಪ್ರೊ. ಜೋಗನ್ ಶಂಕರ್

ಶಿವಮೊಗ್ಗ : ಕಂಪ್ಯೂಟರ್‌ಗಳು ಸಂಪರ್ಕ ಹಾಗೂ ಕ್ರಿಯಾಶೀಲತೆಯ ಉಪಕರಣಗಳಾಗಿದ್ದು, ತಮ್ಮ ಬಳಕೆದಾ ರರಿಗೆ ವಿಶೇಷ ಜ್ಞಾನವನ್ನು ಕೊಡುತ್ತಿವೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್ ಅಭಿಪ್ರಾಯ ಪಟ್ಟಿದ್ದಾರೆ.
ಜೆಎನ್‌ಎನ್‌ಸಿಇಯ ಎಂಬಿಎ ಸಭಾಂ ಗಣದಲ್ಲಿ ಇಂದಿನಿಂದ ಆರಂಭವಾದ ಕಂಪ್ಯೂಟರ್ ಸೈನ್ಸ್ ಮತ್ತು ಸಾಫ್ಟ್ ಕಂಪ್ಯೂಟಿಂಗ್ ಎಂಬ ವಿಷಯದ ಕುರಿತ ೨ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಇಡೀ ಜಗತ್ತಿನೊಂದಿಗೆ ಸಂವಹನ ನಡೆಸಲು ಕಂಪ್ಯೂಟರ್ ಸಹಕಾರಿ ಯಾಗಿದೆ. ಕಂಪ್ಯೂಟರ್ ಹೊರತಾಗಿ ಒಂದು ದಿನವನ್ನು ಕಳೆಯುವುದು ಕಷ್ಟವಾಗಿದೆ. ಮಗುವಿನಿಂದ ಹಿಡಿದು ವೃದ್ಧರವರೆಗೆ ತಂತ್ರಜ್ಞಾನದ ಸಮ್ಮೋಹಕ ಶಕ್ತಿಗೆ ಒಳಗಾಗಿದ್ದಾರೆ ಎಂದರು.
ಕಂಪ್ಯೂಟರ್ ಇಂಜಿನಿಯರಿಂಗ್‌ನಿಂದ ಸಾಕಷ್ಟು ಕೆಲಸಗಳು ಕ್ಷಣ ಮಾತ್ರದಲ್ಲಿ ಜರುಗುವಂತಾಗಿದೆ. ಹಣ ವರ್ಗಾವಣೆ, ಅಂಚೆ ವೆಚ್ಚದಲ್ಲಿ ಇಳಿಕೆ, ಕಾಗದ ರಹಿತ ತಂತ್ರಜ್ಞಾನ, ಕ್ಷಣ ಮಾತ್ರದಲ್ಲಿ ಮಾಹಿತಿ ಎಲ್ಲೆಡೆ ಸಿಗುವಂತಾಗಿದೆ. ಕೃಷಿ ಕ್ಷೇತ್ರ ದಲ್ಲೂ ಸಹ ಸಾಕಷ್ಟು ಬೆಳವಣಿಗೆಗಳು ಈ ಹೊಸ ತಂತ್ರಜ್ಞಾನದಿಂದ ಸಂಭವಿಸು ವಂತಾಗಿದೆ. ಮೊಬೈಲ್ ವ್ಯಾಲೆಟ್, ಎಟಿಎಂ, ಪೇಟಿಎಂ, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಈಗ ಸರ್ವೇ ಸಾಮಾನ್ಯ ಎನ್ನುವ ಸ್ಥಿತಿ ಇದೆ ಎಂದರು.
ಹತ್ತರಿಂದ ಇಪ್ಪತ್ತು ವರ್ಷದೊಳಗೆ ಕಂಪ್ಯೂಟರ್ ತಂತ್ರಜ್ಞಾನದಿಂದ ಇನ್ನಷ್ಟು ಬೆಳವಣಿಗೆಗಳು ಸಂಭವಿಸಲಿದೆ. ನಮ್ಮ ಸಮಸ್ಯೆಗಳಿಗೆ ಕುಳಿತಲ್ಲೇ ಉತ್ತರ ಕಂಡುಕೊಳ್ಳುವ ತಂತ್ರಜ್ಞಾನ ಹೊಂದಿದೆ. ಸಂಪರ್ಕ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ವಾಹನಗಳ ನಿರ್ವಹಣೆ, ಡಿಜಿಟಲ್ ಲೈಬ್ರೆರಿ, ಇ-ಮ್ಯಾಗಜಿನ್‌ಗಳು, ಇ-ಬುಕ್‌ಗಳು ಈಗ ಹೊರಬರಲಾ ರಂಭಿಸಿವೆ. ವಾಚನಾಲಯಗಳಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಮೊಬೈಲ್‌ನಲ್ಲಿ ಪುಸ್ತಕ ಓದುವ ಅನುಕೂಲವನ್ನು ಇದು ಕಲ್ಪಿಸಿದೆ ಎಂದರು.
ಅಧ್ಯಕ್ಷತೆಯನ್ನು ಜೆಎನ್‌ಎನ್‌ಸಿಇ ಪ್ರಾಚಾರ್ಯ ಪ್ರೊ. ಎಚ್.ಎಸ್. ಮಹ ದೇವಸ್ವಾಮಿ ವಹಿಸಿದ್ದರು.
ಸಭೆಯಲ್ಲಿ ಎನ್‌ಇಎಸ್ ಕಾರ್ಯ ದರ್ಶಿ ಎಸ್.ಎನ್. ನಾಗರಾಜ್, ಸಮಾವೇಶದ ಸಂಚಾಲಕ ಪ್ರೊ. ಸುದೀಪ್ ಮನೋಹರ್, ಎಂಸಿಎ ವಿಭಾಗದ ನಿರ್ದೇಶಕ ಪ್ರೊ. ಅಜಿತ್ ದಂತಿ ಉಪಸ್ಥಿತರಿದ್ದರು.