ಶಿವಮೊಗ್ಗ : ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿ ೧೪ ಕಳವು ಪ್ರಕರಣಗಳ ಪತ್ತೆ ಮಾಡುವ ಮೂಲಕ ೧.೯೦ ಲಕ್ಷರೂ ನಗದು ಸೇರಿದಂತೆ ಸುಮಾರು ೪೦.೭೮ ಲಕ್ಷ ಮೌಲ್ಯ ಆಭರಣಗಳನ್ನು ವಶಪಡಿ ಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷ ಣಾಧಿಕಾರಿ ಅಭಿನವ ಖರೆ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಮುಹೀಬುಲ್ಲಾ, ಬೆಂಗಳೂರಿನ ಅಹಮ್ಮದ್ ಕಬೀರ್, ಕಡೂರಿನ ತಬ್ರೇಜ್ ಅಹಮ್ಮದ್ ಇವರುಗಳನ್ನು ಬಂಧಿಸಲಾಗಿದೆ ಎಂದರು.
ಇವರೊಂದಿಗೆ ಇವರು ಕದ್ದ ಆಭರಣ ಖರೀದಿಸಿದ ಅಬ್ದುಲ್ ಜಾವೀದ್, ಇಮ್ರಾನ್ ಅಹಮ್ಮದ್, ಮಹಮ್ಮದ್ ಮಜರ್‌ವುಲ್ಲಾ, ಗುಲ್ನಾರ್ ಶಿರೀನ್ ಇವರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಈ ತಂಡದವರು ಶಿವಮೊಗ್ಗದ ಎಪಿಎಂಸಿ ಬಳಿ ಅನುಮಾನಸ್ಪದವಾಗಿ ಓಡಾಡುವಾಗ ಸಿಕ್ಕಿಬಿದ್ದಿದ್ದು, ಇವರು ೧೪ ಮನೆ ಕಳ್ಳತನಗಳನ್ನು ಮಾಡಿರು ವುದು ಪತ್ತೆಯಾಗಿದೆ. ಈಗ ಬಂಧಿತವಾಗಿರುವ ಮುದಾಸೀರ್ ೨೫ ಪ್ರಕರಣಗಳಲ್ಲಿ ಬೇಕಿರುವ ಆರೋಪಿಯಾಗಿದ್ದಾನೆ ಎಂದರು.
ಬೀಗ ಹಾಕಿದ ಮನೆಗಳ ಪಟ್ಟಿ ಮಾಡಿಕೊಳ್ಳುವ ಈ ತಂಡ ರಾತ್ರಿ ವೇಳೆ ತನ್ನ ಕಾರ್ಯಚರಣೆ ನಡೆಸಿ ಕಳ್ಳತನ ಮಾಡುತ್ತಿತ್ತು. ಇವರು ತಿಪಟೂರಿನಲ್ಲಿ ೩ ಕಡೆ, ಹಾಸನದಲ್ಲಿ ೫ಕಡೆ, ಚಿಕ್ಕಮಗಳೂರಿನಲ್ಲಿ ೧ ಕಡೆ ಕಳವು ಮಾಡಿರುವುದನ್ನು ಒಪ್ಪಿಕೊಂಡಿ ದ್ದಾರೆ. ಈ ತಂಡ ಕೊಲೆ ಮಾಡಿರುವ ಶಂಕೆಯೂ ಇದೆ.
ಬಂಧಿತರಿಂದ ೧ಕೆ.ಜಿ. ೪೭೨ಗ್ರಾಂ ಬಂಗಾರದ ಒಡವೆಗಳು,೪೦ಗ್ರಾಂ ಬೆಳ್ಳಿ ನಾಣ್ಯಗಳು, ೧ ಕಬ್ಬಿಣದ ಟ್ರಜರಿ, ೧ ಎಲ್‌ಇಡಿ ಟಿ.ವಿ, ೧ ಇಂಡಿಕಾ ಕಾರು, ೧.೯೦ಲಕ್ಷರೂ.ನಗದು ಪತ್ತೆಯಾಗಿದೆ.
ಮರಳು ಮಾಫಿಯಾ ವಿರುದ್ದ ಕ್ರಮ : ಜಿಲ್ಲೆಯ ಅಕ್ರಮ ಮರಳು ಮಾಫಿಯಾ ವಿರುದ್ಧ ಜಿಲ್ಲಾ ಪೊಲೀಸ್ ಕಠಿಣ ಕ್ರಮ ಕೈಗೊಂಡಿದೆ.
ಕಳೆದ ಜನವರಿಯಿಂದ ಈವರೆಗೆ ೪ಕೋಟಿರೂ. ಮೌಲ್ಯದ ಅಕ್ರಮ ಮರಳನ್ನು ವಶಕ್ಕೆ ಪಡೆಯಲಾಗಿದೆ.
ರೌಡಿ ಗ್ಯಾಂಗ್‌ಗಳು ಈ ಅಕ್ರಮ ಮರಳು ದಂಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇಂತವರ ಪಟ್ಟಿ ಮಾಡಿ ಆಯಾ ಠಾಣೆಗೆ ನೀಡುವ ಮೂಲಕ ನಿಗಾ ಇಡಲು ತಿಳಿಸಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಕಾನೂನು ವ್ಯಾಪ್ತಿಯಲ್ಲಿ ಮರಳು ಮೈನಿಂಗ್ ಪ್ರಾರಂಭವಾಗಿಲ್ಲ. ೨೮ ಕಡೆಗಳಲ್ಲಿ ಮರಳು ತೆಗೆಯಲು ಗುರುತಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಆಗಬೇಕಿದೆ. ಈಗ ಯಾವುದೇ ಮರಳು ಸಾಗಣಿಕೆ ಯಾದರೆ ಅದು ಕಾನೂನು ಬಾಹಿರವಾಗಿದೆ ಎಂದರು.