Sunday, September 8, 2024
Google search engine
Homeಅಂಕಣಗಳುಲೇಖನಗಳುಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರು ಮನೆಗಷ್ಟೇ ಸೀಮಿತವಾಗಿಲ್ಲ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರು ಮನೆಗಷ್ಟೇ ಸೀಮಿತವಾಗಿಲ್ಲ

ಶಿವಮೊಗ್ಗ: ಮಹಿಳೆಯರು ಮನೆಗಷ್ಟೇ ಸೀಮಿತವಾಗಿರದೇ ಸಮಾಜದ ಎಲ್ಲಾ ಕಾರ್ಯ ಚಟು ವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಹೇಳಿದರು.
ನಗರದ ಕುವೆಂಪುರಂಗಮಂದಿ ರದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾಸ್ತ್ರೀಶಕ್ತಿ ಒಕ್ಕೂಟ ಹಾಗೂ ವಿವಿಧ ಮಹಿಳಾ ಸಂಘ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾ ಚರಣೆ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಮಹಿಳೆಯರು ಇಂದು ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ವಿ ಹಾದಿಯತ್ತ ಸಾಗುತ್ತಿದ್ದಾರೆ, ಆಕೆ ಕುಟುಂಬ ನಿರ್ವಹಣೆಯ ಜವಾಬ್ದಾರಿಯುತ ಕಾರ್ಯದೊಂದಿಗೆ ಸಮಾಜದಲ್ಲಿ ತನ್ನದೆಯಾದ ಸ್ಥಾನ ಪಡೆದುಕೊಳ್ಳಲು ಸದಾ ಶ್ರಮಿಸುತ್ತಿರುತ್ತಾಳೆ ಎಂದರು.
ಮಹಿಳೆಯರು ಪುರುಷರಷ್ಟೆ ಸಮಾನವಾಗಿ ದುಡಿಯುತ್ತಿದ್ದರೂ ಅವರ ಮೇಲೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಸ್ತ್ರೀಯರು ತಮ್ಮ ಮೇಲೆ ನಡೆಯುವ ವರದಕ್ಷಿಣೆ ಕಿರುಕುಳ, ಅತ್ಯಚಾರ ದಂತಹ ಹಲವಾರು ಪಿಡುಗುಗಳ ವಿರುದ್ಧ ಒಗ್ಗಟಾಗಿ ಹೋರಾಡಬೇಕು. ಮಹಿಳೆಯರ ಸಮಗ್ರ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಯೊಂದಿಗೆ ಸಕಲ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದ್ದು ಪ್ರತಿ ಮಹಿಳೆಯು ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳುವತ್ತ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಾಪೌರ ನಾಗರಾಜ್ ಕಂಕಾರಿ ಮಾತನಾಡಿ, ಒಬ್ಬ ಮಹಿಳೆ ಅಮ್ಮನಾಗಿ, ಹೆಂಡತಿಯಾಗಿ, ಮಗಳಾಗಿ ನಿಸ್ವಾರ್ಥತತೆಯ ಸಾರ್ಥಕ ಜೀವನ ನಡೆಸುತ್ತಾರೆ. ಕುಟುಂಬದ ಪ್ರತಿ ಜವಬ್ದಾರಿಯಲ್ಲಿಯೂ ಮಹಿಳೆಯ ಪಾತ್ರ ಅಪಾರ. ನಾರಿ ಒಬ್ಬಳು ವಿದ್ಯಾವಂತಳಾದರೆ ಇಡೀ ಕುಟುಂಬ ಸಾಕ್ಷರತೆಯ ಹಾದಿಯಲ್ಲಿ ಸಾಗುತ್ತದೆ. ಆದರೆ ಹಿಂದಿನ ಕಾಲದ ಮಹಿಳೆಯರು ಅನಕ್ಷರಸ್ಥರಾಗಿದ್ದರು ಸಹ ವ್ಯವಸ್ಥಿತ ಕುಟುಂಬ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜೀವ ವೈವಿಧ್ಯಮಂಡಳಿ ಅಧ್ಯಕ್ಷ ಶೇಷಾದ್ರಿ, ಉಪನ್ಯಾಸಕ ಹರಿಪ್ರಸಾದ್, ಉಪಮಹಾಪೌರ ವಿಜಯಲಕ್ಷ್ಮಿ ಸಿ.ಪಾಟೀಲ್ ಸೇರಿದಂತೆ ಮತ್ತಿತರ ಗಣ್ಯರು ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments