ಅರಣ್ಯ ಭೂಮಿಯನ್ನೇ ಮಾರಿಕೊಂಡ ಅಕಾರಿಗಳು-ಜನಪ್ರತಿನಿಗಳು… ಕಾನೂನು ಅಡಕತ್ತರಿಯಲ್ಲಿ ಅಮಾಯಕ ರೈತರು

ಶಿವು ಕಿರುವಾಸೆ

ಶಿವಮೊಗ್ಗ : ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ ಡಿ.ಸಿ.ಎಫ್. ಹುದ್ದೆಯಲ್ಲಿರಲು ಅರ್ಹತೆ ಇಲ್ಲದಿದ್ದರೂ ಸಾಗರ ಎಂಪಿಎಂ ಅರಣ್ಯ ವಿಭಾಗದ ಎ.ಸಿ.ಎಫ್ ಆಗಿದ್ದ ಮೋಹನ್ ಎನ್.ಗಂಗೋಲಿ ರಾಜಕೀಯ ಬೆಂಬಲದೊಂದಿಗೆ ಕಾನೂನುಬಾಹಿರವಾಗಿ ೨,೫೦೦ ಸಾವಿರ ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಗೆ ಮಂಜೂರು ಮಾಡಿಕೊಟ್ಟಿರುವುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಬಡಪಾಯಿ ರೈತರು ಇದೀಗ ಕಷ್ಟಪಟ್ಟು ಸಂಪಾದಿಸಿದ ಹಣ ಹಾಗೂ ಭೂಮಿ ಎರಡನ್ನೂ ಕಳೆದುಕೊಳ್ಳುವ ಆತಂಕಕ್ಕೆ ಗುರಿಯಾಗಿದ್ದಾರೆ.
ಸಾಗರ ಎಂ.ಪಿ.ಎಂ.ಅರಣ್ಯ ವಿಭಾಗದ ಎ.ಸಿ.ಎಫ್ ಆಗಿದ್ದ ಮೋಹನ್ ಎನ್.ಗಂಗೋಲಿ ಅವರು ನಿಯಮ ಬಾಹಿರವಾಗಿ ಅರಣ್ಯ ಒತ್ತುವರಿ ಭೂಮಿಯನ್ನು ಅನರ್ಹರಿಗೆ ಹಕ್ಕುಪತ್ರ ನೀಡಿರುವುದು ವಿವಾದಕ್ಕೆ ಮುಖ್ಯ ಕಾರಣ.
ಎಸ್.ಎಫ್.ಎಸ್. ಕೇಡರ್‌ನ ಅಕಾರಿಯೊಬ್ಬರು ಐಎಫ್‌ಎಸ್ ಕೇಡರ್‌ನ ಹುದ್ದೆಯನ್ನು ಅನುಭವಿಸಲು ಸರ್ಕಾರಿ ಸೇವಾ ನಿಯಮಾವಳಿಯಲ್ಲಿ ಅವಕಾಶ ವಿರುವುದಿಲ್ಲ.
ಒಂದು ವೇಳೆ ಸೇವಾ ಜೇಷ್ಠತೆ ಆಧರಿಸಿ ಡಿ.ಸಿ.ಎಫ್. ಹುದ್ದೆಯನ್ನು ಅಲಂಕರಿಸಿದರೂ ಕೇವಲ ೩ ತಿಂಗಳ ಅವಗೆ ಕಛೇರಿ ಕಾರ್ಯ ಕಲಾಪಗಳಿಗಷ್ಟೇ ಅವರ ಅಕಾರ ಸೀಮಿತವಾಗಿರುತ್ತದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ಈ ಸಂಬಂಧ ನಿವೃತ್ತ ಅರಣ್ಯಾಕಾರಿ ಎ.ಜಿ.ಯೋಗೇಂದ್ರ ಅವರು ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವ ಹಾಗೂ ಒದಗಿಸಿರುವ ದಾಖಲಾತಿ ಪ್ರಕಾರ ಮೋಹನ್ ಗಂಗೋಲಿ ಅವರು ಡಿ.ಸಿ.ಎಫ್ ಹುದ್ದೆಗೆ ಬರಲು ಸೇವಾ ಜೇಷ್ಠತೆ ಕೂಡಾ ಇರುವುದಿಲ್ಲ. ಆದರೂ ಅವರು ಅರಣ್ಯ ಸಚಿವ ಕಾಗೋಡು ತಿಮ್ಮಪ್ಪ ಅವರ ಪ್ರಭಾವ ಬಳಸಿಕೊಂಡು ನಿಯಮಬಾಹಿರವಾಗಿ ಡಿಸಿಎಫ್ ಹುದ್ದೆಗೇರುತ್ತಾರೆ. ಹೆಚ್ಚುವರಿ ಡಿ.ಸಿ.ಎಫ್ ಆಗಿ ಅಕಾರ ಸ್ವೀಕರಿಸಿದ ಬಳಕೆ ಜಿಲ್ಲಾ ಅರಣ್ಯ ಸಮಿತಿ ಮೂಲಕ ಹೊಸನಗರ ಹಾಗೂ ಇತರೆಡೆ ಒತ್ತುವರಿದಾರರಿಂದ ಹಣ ಪಡೆದು ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಅನುಭವಿಸಲು ಹಕ್ಕುಪತ್ರ ನೀಡಿರುವುದು ಬೆಳಕಿಗೆ ಬಂದಿದೆ.
ವಾಸ್ತವವಾಗಿ ಭಾರತ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ಶಿವಮೊಗ್ಗ, ಸೊರಬ, ಸಾಗರ, ಶಿಕಾರಿಪುರ , ಹೊಸನಗರ ಹಾಗೂ ಶಿವಮೊಗ್ಗ ತಾಲ್ಲೂಕು ಗಳಲ್ಲಿ ೨೭-೪-೧೯೭೮ಕ್ಕೆ ಮೊದಲು ಅರಣ್ಯ ಭೂಮಿ ಒತ್ತುವರಿದಾರರ ಕುಟುಂಬಗಳ ಒಟ್ಟು ಸಂಖ್ಯೆ ೨೨೧೬, ಹಾಗೂ ೧೪೦೧.೬೨ ಹೆಕ್ಟೇರ್ ಭೂಮಿ ಮಾತ್ರ. ಈ ಪೈಕಿ ಶಿವಮೊಗ್ಗ ಜಿಲ್ಲಾಕಾರಿಗಳು ದಿನಾಂಕ ೫.೫.೧೯೯೭ರ ಸರ್ಕಾರಿ ಆದೇಶದಂತೆ ೧೦೭೧ ಒತ್ತುವರಿ ಪ್ರಕರಣಗಳನ್ನು ೭೯೦.೭೯ ಹೆಕ್ಟೇರ್ ಭೂಮಿಗೆ ಸಂಬಂಧಪಟ್ಟಂತೆ ಬಗೆಹರಿಸಿ ದ್ದಾರೆ. ಉಳಿದಂತೆ ೯೭೫ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ೫೯೮.೧೯ ಹೆಕ್ಟೇರ್ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆ ಯಲು ಕಂದಾಯ ಇಲಾಖೆಗೆ ವರದಿ ಕೂಡಾ ನೀಡಿದ್ದರು.
ಆದರೆ ಕಾಗೋಡು ತಿಮ್ಮಪ್ಪ ಸಾಗರ ಶಾಸಕರಾಗಿ ಆಯ್ಕೆಗೊಂಡು ವಿಧಾನಸಭಾ ಸ್ಪೀಕರ್ ಹಾಗೂ ಇದೀಗ ಕಂದಾಯ ಮಂತ್ರಿಯಾದ ನಂತರ ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳು ಹೆಚ್ಚಿದ್ದು ಕಾನೂನುಬಾಹಿರವಾಗಿ ಜಿಲ್ಲಾ ಅರಣ್ಯ ಸಮಿತಿ ಮೂಲಕ ಹಕ್ಕು ಪತ್ರ ವಿತರಣೆ ಕಾರ್ಯ ನಡೆದಿದೆ.
ಕಾಗೋಡು ತಿಮ್ಮಪ್ಪ ಅವರು ವಕೀಲರಾಗಿ, ಸೇವೆ ಸಲ್ಲಿಸಿದವರು. ಅನುಭವವೂ ಇದೆ. ಕಾಗೋಡು ಹೋರಾಟದಲ್ಲಿ ಗೇಣಿದಾರರ ಪರವಾಗಿ ವಕಾಲತ್ತು ವಹಿಸಿ ಭೂರಹಿತರಿಗೆ ಹಕ್ಕು ಪತ್ರ ಕೊಡಿಸಿದ ಗೌರವ ಹೊಂದಿದ್ದಾರೆ.
ಆದರೆ ತಿಮ್ಮಪ್ಪ ಅರಣ್ಯ ಸಚಿವರಾದ ಮೇಲೆ ನಡೆದುಕೊಳ್ಳುತ್ತಿರುವ ರೀತಿ ಹಲವು ಅನುಮಾನಗಳಿಗೆ ಕಾರಣವಾಗಿವೆ.
ಮುಖ್ಯವಾಗಿ ಒಂದು ಗಂಟೆ ಕೂಡಾ ಡಿ.ಸಿ.ಎಫ್.ಹುದ್ದೆಯಲ್ಲಿರಲು ಅರ್ಹರಲ್ಲದ ವ್ಯಕ್ತಿಯನ್ನು ಆ ಹುದ್ದೆಗೆ ನಿಯಮಬಾಹಿರವಾಗಿ ತಂದು ಕೂರಿಸಿದ್ದಾರೆ.
‘ಉಳುವವನೇ ಹೊಲದೊಡೆಯ’ ಭೂ ಸುಧಾರಣೆ ಕಾಯ್ದೆ ಮೂಲಕ ಗೇಣಿ ಹೋರಾಟಗಾರರಿಗೆ ದೇವರಾಜ ಅರಸರು ನ್ಯಾಯ ಒದಗಿಸಿದ್ದರು. ಅದೇ ರೀತಿ ತಾವು ವಸತಿ ಭೂರಹಿತರ ಪರವಾಗಿರುವುದಾಗಿ ತಿಮ್ಮಪ್ಪನವರು ಸದನದಲ್ಲಿ ಭಾವುಕರಾಗಿ ಹೇಳಿಕೊಂಡಿದ್ದರು.
೧೯೦೦ರಲ್ಲಿ ಮೈಸೂರು ಅರಣ್ಯ ಕಾಯ್ದೆ ಜಾರಿಗೆ ಬಂದಿತು. ೧೯೨೭ರಲ್ಲಿ ಭಾರತೀಯ ಅರಣ್ಯ ಕಾಯ್ದೆ ತರಲಾಯಿತು. ಬಳಿಕ ೧೯೬೩ರಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ರೂಪಿತಗೊಂಡಿತ್ತು. ಆದರೆ ೧೯೭೬ರಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ ಅರಣ್ಯ ರಕ್ಷಣೆಯ ಹೊಣೆಯನ್ನು ಮಾತ್ರ ರಾಜ್ಯ ಸರ್ಕಾರಗಳಿಗೆ ವಹಿಸಿತ್ತು.
ಕೇಂದ್ರ ಸರ್ಕಾರ ಮತ್ತೊಮ್ಮೆ ೧೯೯೦ರಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು, ೧೯೮೦ಕ್ಕಿಂತ ಹಿಂದಿನ ಅರಣ್ಯ ಒತ್ತುವರಿ ದಾರರ ಪಟ್ಟಿ ತಯಾರಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ಸುತ್ತೋಲೆ ಹೊರಡಿಸಿತು.
ಈವರೆಗೆ ರೂಪಿಸಿರುವ ಅರಣ್ಯ ಕಾಯ್ದೆ ಹಾಗೂ ನೀತಿಗಳ ಪ್ರಕಾರ ರಾಜ್ಯ ಸರ್ಕಾರಗಳಿಗೆ ಅರಣ್ಯದ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ೧೯೭೬ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಂವಿಧಾನದ ೪೨ನೆಯ ತಿದ್ದುಪಡಿ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರಗಳು ತನ್ನ ವ್ಯಾಪ್ತಿಗೊಳಪಡುವ ಅರಣ್ಯ ಪ್ರದೇಶಗಳಿಗೆ ‘ಕಾವಲುನಾಯಿ’( ಡಿZಠ್ಚಿeಜ್ಞಿಜ bಟಜ) ಇದ್ದಂತೆ.
ಅಂದರೆ ಅರಣ್ಯ ಹಾಗೂ ಅರಣ್ಯ ಸಂಪತ್ತು, ವನ್ಯಜೀವಿ ಮತ್ತು ಪಶು ಪಕ್ಷಿಗಳ ರಕ್ಷಣೆಯ ಹೊಣೆ ಹೊರುವುದಾಗಿದೆ. ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೇ ಹೊರತು ಅರಣ್ಯ ಭೂಮಿಯನ್ನು ಪರಭಾರೆ ಮಾಡುವ ಹಕ್ಕು ಇರುವುದಿಲ್ಲ. ಇಂತಹ ಪ್ರವೃತ್ತಿ ಕಾನೂನು ಬಾಹಿರ ಹಾಗೂ ನಿಷಿದ್ಧ ಎಂದು ಹಲವಾರು ಪ್ರಕರಣಗಳಲ್ಲಿ ಸುಪ್ರೀಂ ಹಾಗೂ ಹೈಕೋರ್ಟ್ ಆದೇಶ ನೀಡಿವೆ.
ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿ ಪ್ರಕಾರ ಹಕ್ಕು ಪತ್ರಕ್ಕೆ ಅರ್ಹರಾಗಲು ಅರಣ್ಯ ಭೂಮಿ ಒತ್ತುವರಿಯಾಗಿ ೧೯೭೮ಕ್ಕೆ ಮೊದಲು ೭೫ ವರ್ಷಗಳು ಕಳೆದಿರಬೇಕು. (ಅಂದರೆ ಮೂರು ತಲೆಮಾರು).
೨೪.೧೦.೧೯೮೦ರ ನಂತರ ಹೊಸದಾಗಿ ಅರಣ್ಯ ಭೂಮಿ ಒತ್ತು ವರಿಯಾಗಿದ್ದರೆ ತೆರವುಗೊಳಿಸುವಂತೆ ಕೇಂದ್ರ ಸರ್ಕಾರದ ಆದೇಶವಿದೆ. ಸರ್ವೋಚ್ಛ ನ್ಯಾಯಾಲಯ ಕೂಡಾ ಇದನ್ನೇ ಎತ್ತಿ ಹಿಡಿದಿದೆ. ಆದರೆ ಮೋಹನ್ ಗಂಗೋಲಿ ನೇತೃತ್ವದ ಸಬ್ ಡಿವಿಜನಲ್ ಕಮಿಟಿಯು ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು, ೧೦೪ ವರ್ಷ ಪೂರೈಸಿರುವ ಹಿರಿಯ ನಾಗರೀಕರ ಅರ್ಜಿ ತಿರಸ್ಕರಿಸಿದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರನ್ನು ಅರ್ಹರ ಪಟ್ಟಿಯಿಂದ ಹೊರಗಿಡಲಾಗಿದ್ದು, ಹೊಸನಗರ ತಾಲ್ಲೂಕಿನಲ್ಲಿ ೩೬೧ ಜನರಿಗೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲಾಗಿದೆ. ಅರ್ಹ ಫಲಾನುಭವಿಗೆ ಎರಡು ಎಕರೆ ಭೂಮಿ ಮಾತ್ರ ಮಂಜೂರು ಮಾಡಬೇಕೆಂಬ ನಿಯಮಾವಳಿ ಇದೆ. ಆದರೆ, ಸಾಗರ ತಾಲೂಕು, ಆನಂದಪುರಂ ಹೋಬಳಿಯ ಮಲ್ಲಂದೂರು ಗ್ರಾಮದ ಸರ್ವೆ ನಂ.೧೫೫ ಹಾಗೂ ಸರ್ವೆ ನಂ.೧೫೭ರಲ್ಲಿ ಒಂದೇ ಕುಟುಂಬಕ್ಕೆ ೨೪ ಎಕರೆ ಮಂಜೂರು ಮಾಡಿದ್ದು, ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ.
ಈ ಸಂಬಂಧ ಪ್ರತೀ ಗುಂಟೆಗೆ ೫ ಸಾವಿರದವರೆಗೆ ಸುಮಾರು ೪೩೪ ಜನರಿಂದ ೮ ಕೋಟಿ ೬೪ ಲಕ್ಷ ರೂ. ಪಡೆಯ ಲಾಗಿದೆ ಎಂದು ನಿವೃತ್ತ ಫಾರೆಸ್ಟರ್ ಎ.ಜಿ.ಯೋಗೇಂದ್ರ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಅವರು ತಮ್ಮ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕೂಡಾ ಒದಗಿಸಿದ್ದು, ಇದೀಗ ಪ್ರಕರಣ ಲೋಕಾಯುಕ್ತ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಮಾಯಕರು ಲಕ್ಷಾಂತರ ಹಣ ಹಾಗೂ ಭೂಮಿ ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ. ಪರಿಸರ ಹಾಗೂ ಅರಣ್ಯ ಸಂಪತ್ತು ಸಂರಕ್ಷಿಸಬೇಕಾದುದು ಸರ್ಕಾರ ಹಾಗೂ ಅರಣ್ಯ ಇಲಾ ಖೆಯ ಪರಮ ಕರ್ತವ್ಯ. ಆದರೆ ಇಲ್ಲಿ ಅರಣ್ಯ ರಕ್ಷಕರೇ ಭಕ್ಷಕ ರಾಗಿದ್ದು ಬೇಲಿಯೇ ಹೊಲ ಮೇಯ್ದ ಗಾದೆಯಂತಾಗಿದೆ.