ಶಿವಮೊಗ್ಗ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಳಿವು ಫೌಂಡೇಶನ್ ಮತ್ತು ಗೋ ಸಿರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಚರಕತ್ಸೋವ ಕಾರ್ಯಾಗಾರ ಆಯೋಜಿಸಿದ್ದ, ಅದರ ಭಾಗವಾಗಿಯೇ ಅಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿರುವ ಖಾದಿ ಬಟ್ಟೆ ಮತ್ತು ಸಾವಯವ ತಿನಿಸು ನೋಡುಗರ ಗಮನ ಸೆಳೆಯುತ್ತಿವೆ.
ಗುಡಿ ಕೈಗಾರಿಕೆಯ ತರಹೇವಾರಿ ಅಟಿಕೆಗಳು, ಮನೆಯ ಅಲಂಕಾರಿಕ ವಸ್ತುಗಳ ಜತೆಗೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವೂ ಅಲ್ಲಿ ಆಯೋಜನೆ ಗೊಂಡಿದೆ. ವಿಶೇಷವಾಗಿ ಸಾವಯವ ತಿನಿಸುಗಳ ಅಂಗಡಿಗಳು ವೀಕ್ಷಕರನ್ನು ಹಿಡಿದು ನಿಲ್ಲಿಸುತ್ತಿವೆ.ಪರಿಸರ ಪೂರಕ ವಸ್ತುಗಳ ಜತೆಗೆ ದೇಸಿ ತರಕಾರಿ ಬೀಜಗಳ ಮಾರಾಟವೂ ಅಲ್ಲಿವೆ.
ಆಗಸ್ಟ್ ೧೪ ಮತ್ತು ೧೫ ರಂದು ಎರಡು ದಿನಗಳ ಕಾಲ ನಡೆಯುವ ಈ ಚರಕೋತ್ಸವಕ್ಕೆ ಬುಧವಾರ ಬೆಳಗ್ಗೆ ಉಡುಪಿಯ ಸಾಂಗತ್ಯ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸ್ವಯಂ ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.
ಚರಕ ಬರೇ ಬಟ್ಟೆ ತಯಾರಿಕೆ ಯಂತ್ರ ಅಲ್ಲ. ಸರಳ ಜೀವನದ ಧ್ಯೋತಕ. ನಮ್ಮ ಬುದ್ಧಿಮತ್ತೆ ಸೇವೆಗೆ ಬಳಸಬೇಕು ಅಂತ ಗಾಂಧಿ ಹೇಳಿದ್ದಾರೆ. ಸಿಂಥೆಟಿಕ್, ಮಿಲ್ ಬಟ್ಟೆ ಬಳಕೆ. ಇದಕ್ಕೆ ದೊಡ್ಡ ಬಂಡವಾಳ ಬೇಕು. ಉದ್ಯೋಗ ಅವಕಾಶ ಕಡಿಮೆ. ಹವಾಮಾನ ಬದಲಾವಣೆ ತಪ್ಪು ಸರಿ ಮಾಡಲು ಚರಕ ಪೂರಕ. ಹಿಂದೆ ಹೋದಂತೆ ಅಲ್ಲ. ಅಸಮಾನತೆ ಕಡಿಮೆ ಆಗುತ್ತದೆ. ಸ್ವಾಯತ್ತತೆ ಸಿಗುತ್ತದೆ ಎಂದರು.
ಉಳಿವು ಪೌಂಡೇಷನ್‌ನ ಡಾ.ಸೀಮಾ ಪ್ರಾಸ್ತಾವಿಕ ಮಾತನಾಡಿ, ಗಾಂಧೀಜಿ ಚರಕದ ಮೂಲಕ ಸ್ವಾವಲಂಬನೆ ಕನಸು ಕಂಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಶೇ.೯೭ ರಷ್ಟು ಇದ್ದ ಹತ್ತಿ ಕೃಷಿ ಈಗ ಶೇ.೦೪ ಕ್ಕೆ ಇಳಿದಿದೆ ಎಂದು ವಿಷಾದಿಸಿದ ಅವರು, ಕಾರ್ಖಾನೆಗಳ ಸಿಂಥೆಟಿಕ್ ಬಟ್ಟೆ ಬಳಕೆ ಆಗುತ್ತಿದೆ. ಪರಿಸರ ಹಾನಿ ಆಗುತ್ತಿದೆ. ಅತಿರೇಕದ ಯಂತ್ರ ಅವಲಂಬನೆ ನಿರುದ್ಯೋಗ ಸೃಷ್ಟಿ ಮಾಡಿದೆ ಎಂದರು.
ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಾ.ಹೆಚ್.ಕೆ.ಎಲ್.ಸ್ವಾಮಿ ಮಾತನಾಡಿ, ಯುವ ಜನಾಂಗ ಬದಲಾವಣೆ ದಾರಿ ಹುಡುಕುತ್ತಿದ್ದಾರೆ. ಫಾರ್ಮಸಿ ಓದಿದ್ದು. ಸಬರಮತಿ ಆಶ್ರಮದಿಂದ ೪೦ ಚರಕ ತಂದಿದ್ದೆ. ಕೊನೆಗೆ ಅಲ್ಲಿಂದ ತರಲು ಆಗಲ್ಲ ಅಂತ ಚಿತ್ರದುರ್ಗ ದಲ್ಲಿ ಚರಕ ತಯಾರು ಮಾಡಿದೆವು. ಈಗ ಶಿವಮೊಗ್ಗ ದಲ್ಲಿ ಚರಕ ತಯಾರು ಮಾಡಿದ್ದಾರೆ. ಇದು ಖುಷಿ ತಂದಿದೆ ಎಂದರು.
ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋದ ಜಿ.ಎಲ್.ಜನಾರ್ಧನ ಮಾತನಾಡಿ, ಪರಿಸರ ತುರ್ತುಸ್ಥಿತಿ ಇದ್ದೇವೆ. ನಾವೆಲ್ಲಾ ಸಮಸ್ಯೆ ಅನುಭವಿಸುತ್ತಿದ್ದೇವೆ. ದುರಂತ ಕಣ್ಣು ಮುಂದೆ ಇದೆ. ದಾರಿ ಕಾಣುತ್ತಿಲ್ಲ. ನಾವೀಗ ಕೃತಕ ಬುದ್ದಿಮತ್ತೆ ಕಾಲದಲ್ಲಿ ಇದ್ದೇವೆ. ಕಪ್ಪೆ ಹಿಡಿದು ನೀರಿಗೆ ಹಾಕಿ ಬಿಸಿ ಮಾಡಿದರೆ ಸ್ವಲ್ಪ ನೃತ್ಯ ಮಾಡುತ್ತದೆ. ನಾವೂ ಅದೇ ಸ್ಥಿತಿಯಲ್ಲಿ ಇದ್ದೇವೆ ಎಂದರು.
……………………………………………
ನಿಜವಾದ ಅರ್ಥದಲ್ಲಿ ನಮಗಿನ್ನು ಸ್ವತಂತ್ರ ಸಿಕ್ಕಿಲ್ಲ. ಯಾಕೆಂದರೆ ಹಿಂದೆಗಿಂತ ಈಗ ಹೆಚ್ಚು ಆರ್ಥಿಕ ಅಸಮಾನತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಚರಕದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
-ಡಾ.ಶ್ರೀಕುಮಾರ್ , ಸಾಂಗತ್ಯ ಸಂಸ್ಥೆಯ ಸಹ-ಸಂಸ್ಥಾಪಕ
…………
ಖಾದಿ ಬಟ್ಟೆ ತುಂಬಾ ದುಬಾರಿ ಎಂಬ ಆರೋಪ ಇದೆ. ಸಿಂಥೆಟಿಕ್ ಬಟ್ಟೆ ಕಡಿಮೆ ಇದೆ. ಅಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಬಳಕೆ ಇದೆ. ಇದರಿಂದ ಸಂಪನ್ಮೂಲ ಖಾಲಿ ಆಗುತ್ತಿದೆ.ಉತ್ಪಾದನೆ ಮತ್ತು ವಿನಿಮಯ ಎಲ್ಲರ ಅಗತ್ಯ ಪೂರೈಸುತ್ತಿಲ್ಲ. ಇದರ ಹಿಂದೆ ಲಾಭದ ದೃಷ್ಟಿ ಇದೆ.
– ಡಾ.ಸೀಮಾ , ಉಳಿವು ಪೌಂಡೇಷನ್
…………
ಜನ ಆಗಸ್ಟ್ ಹದಿನೈದರಂದು ಮಾತ್ರ ಖಾದಿ ತೊಡಲು ಹೋಗುತ್ತಿದ್ದಾರೆ. ಇದು ಸರಿ ಅಲ್ಲ. ಸ್ವದೇಶಿ ತತ್ವದ ಪ್ರಕಾರ ಅಲ್ಲಿಯ ವಸ್ತು ಅಲ್ಲಿಯೇ ಖರೀದಿ ಮಾಡಬೇಕು. ಇದು ಗಾಂಧೀಜಿ ಸಿದ್ಧಾಂತ. ಬಟ್ಟೆ ,ಜೀವನ ಎರಡೂ ಚೆನ್ನಾಗಿರಬೇಕು.
. ಡಾ.ಹೆಚ್.ಕೆ.ಎಲ್.ಸ್ವಾಮಿ, ಸರ್ವೋದಯ ಮಂಡಳಿ