Saturday, December 14, 2024
Google search engine
Homeಇ-ಪತ್ರಿಕೆಶಿವಮೊಗ್ಗ: ನಗರ ಸಾರಿಗೆ ಬಸ್ಸುಗಳ ಸಂಖ್ಯೆ  ಹೆಚ್ಚಳ ಮಾಡಿ: ಸಾರಿಗೆ ಸಚಿವರಿಗೆ ಎಸ್.‌ ತಂಗರಾಜ್‌ ಮನವಿ

ಶಿವಮೊಗ್ಗ: ನಗರ ಸಾರಿಗೆ ಬಸ್ಸುಗಳ ಸಂಖ್ಯೆ  ಹೆಚ್ಚಳ ಮಾಡಿ: ಸಾರಿಗೆ ಸಚಿವರಿಗೆ ಎಸ್.‌ ತಂಗರಾಜ್‌ ಮನವಿ

ಶಿವಮೊಗ್ಗ : ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶಿವಮೊಗ್ಗ ನಗರ ಮತ್ತುಗ್ರಾಮಾಂತರ ಭಾಗಕ್ಕೆ ರಾಜ್ಯ ರಸ್ತೆ ಸಾರಿಗೆ  ನಗರ ಸಾರಿಗೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್. ತಂಗರಾಜ್ ಅವರು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ವಿಧಾನ ಸೌಧದಲ್ಲಿ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗಾವರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಅವರು, ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ನಂತರ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಆದರೆ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಭಾಗಕ್ಕೆ ಈಗ ಕೆಎಸ್ ಆರ್ ಟಿಸಿ ನಗರ ಸಾರಿಗೆ ಬಸ್ಸುಗಳ ಸಂಖ್ಯೆ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ  ನಗರ ಸಾರಿಗೆ ಬಸ್ಸುಗಳ ಸಂಖ್ಯೆಯನ್ನು ಜನ ಸಂಖ್ಯೆ ಗೆ ತಕ್ಕಂತೆ ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೆ ಈಶ್ವರ್ ಬೊಮ್ಮನಕಟ್ಟೆ,  ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಆರ್. ಆರ್. ಮಂಜುನಾಥ್, ಮುಖಂಡರಾದ ಇಮ್ರಾನ್, ಸೈಯದ್ ಹುಸೇನ್,  ವಿಜಯ್, ಮಹೇಂದ್ರ ಇದ್ದರು.

RELATED ARTICLES
- Advertisment -
Google search engine

Most Popular

Recent Comments