Thursday, December 5, 2024
Google search engine
Homeಇ-ಪತ್ರಿಕೆನ.09 : ಸಿಡ್ಬಿ ಶಾಖಾ ಕಚೇರಿ ಉದ್ಘಾಟನೆ

ನ.09 : ಸಿಡ್ಬಿ ಶಾಖಾ ಕಚೇರಿ ಉದ್ಘಾಟನೆ

ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ಬಿ.ಗೋಪಿನಾಥ್ ಮಾಹಿತಿ

ಶಿವಮೊಗ್ಗ : ಜಿಲ್ಲೆಯಲ್ಲಿ ನೂತನವಾಗಿ ಆರಂಭವಾಗುತ್ತಿರುವ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ) ಶಾಖಾ ಕಚೇರಿ ಉದ್ಘಾಟನಾ ಸಮಾರಂಭವು ನ.09 ರ ಮಧ್ಯಾಹ್ನ 2.30 ಕ್ಕೆ ವಿನೋಬನಗರದಲ್ಲಿರುವ ವಿಧಾತ್ರಿ ಭವನದ ಸಮೀಪದಲ್ಲಿರುವ ಪ್ರಕಾಶ್ ಆರ್ಕೆಡ್‍ನಲ್ಲಿ ನಡೆಯಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದರು.

ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 7 ಶಾಖೆಗಳ ಉದ್ಘಾಟನೆಯನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಬೆಂಗಳೂರಿನಲ್ಲಿ ನ.09 ವರ್ಚ್ಯುಯಲ್ ಮೂಲಕ ಉದ್ಘಾಟಿಸಲಿದ್ದಾರೆ ಎಂದರು.

ಸಣ್ಣ ಕೈಗಾರಿಕಾ ವಲಯಕ್ಕೆ ಸಿಡ್ಬಿ ಬ್ಯಾಂಕ್‍ನ್ನು ಶಿವಮೊಗ್ಗ ಜಿಲ್ಲೆಗೆ ತರಲು ಕಾರಣೀಭೂತರಾದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಘವು ಅಭಿನಂದಿಸುತ್ತದೆ ಎಂದರು.

ಸಿಡ್‍ಬಿ ಕೇಂದ್ರ ಸರ್ಕಾರದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಕೇವಲ ಇದು ಎಂಎಸ್‍ಎಂಇಗಳಿಗೆ ಸಾಲ ನೀಡಿ ಪೆÇ್ರೀತ್ಸಾಹಿಸುವ ಬ್ಯಾಂಕಿಂಗ್ ವ್ಯವಸ್ಥೆ ಆಗಿದೆ. ಈ ಬ್ಯಾಂಕ್‍ನಲ್ಲಿ ಹಾಲಿ ಉದ್ಯಮಗಳನ್ನು ನಡೆಸುತ್ತಿರುವ ಮತ್ತು ನವ ಉದ್ಯಮದಾರರಿಗೆ ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ರೀತಿಯ ಮೆಶಿನರಿಗಳಿಗೆ ಸಾಲ ಸೌಲಭ್ಯ ಒದಗಿಸುವ ವ್ಯವಸ್ಥೆ ಇರುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಎ.ಎಂ.ಸುರೇಶ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ  ಜೋಯಿಸ್ ರಾಮಾಚಾರಿ, ಉಪಾಧ್ಯಕ್ಷ ಹರ್ಷ ಬಿ.ಕಾಮತ್, ಕಾರ್ಯದರ್ಶಿ ಎಸ್.ವಿಶ್ವೇಶ್ವರಯ್ಯ, ಖಜಾಂಚಿ ಹೆಚ್.ಬಿ.ರಮೇಶ್ ಬಾಬು, ಕಿರಣ್‍ಕುಮಾರ್ ಹಾಗೂ ಇನ್ನಿತರರಿದ್ದರು.

ಬಿ.ಗೋಪಿನಾಥ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ :

ಸಿಡ್ಬಿ ಬ್ಯಾಂಕ್ ಸಂಪೂರ್ಣ ಡಿಜಿಟಲೈಸೇಶನ್ ಆಗಿರುವ ಬ್ಯಾಂಕ್ ಆಗಿರುತ್ತದೆ. ಇಲ್ಲಿ ತಾವು ಮನೆಯಲ್ಲೇ ಕುಳಿತು ದಾಖಲೆಗಳನ್ನು ಆನ್‍ಲೈನ್ ಮೂಲಕ ಅಪ್‌ಲೋಡ್‌  ಮಾಡಬಹುದಾಗಿರುತ್ತದೆ. ದಾಖಲೆಗಳು ಸರಿ ಇದ್ದಲ್ಲಿ ಕೇವಲ 48 ಗಂಟೆಗಳ ಒಳಗಾಗಿ ಸಾಲ ದೊರೆಯಲಿದೆ.

RELATED ARTICLES
- Advertisment -
Google search engine

Most Popular

Recent Comments