ಸೊರಬ:ವಿದ್ಯಾರ್ಥಿಗಳಲ್ಲಿ ವಿದ್ಯೆ ಜೊತೆಗೆ ವಿನಯವನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶನಿವಾರ ಪಟ್ಟಣದ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪದವಿ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಯುವ ರೆಡ್ ಕ್ರಾಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಕಾಲೇಜಿಗೆ ವಿಜ್ಞಾನ ಪ್ತಯೋಗಾಲಯ, ಸುಸಜ್ಜಿತ ಸಭಾಂಗಣ, ಮೈದಾನ ಸೇರಿದಂತೆ ಹೆಚ್ಚಿನ ಅಭಿವೃದ್ಧಿಗೆ ಬೇಕಾಗಿರುವ ಅನುದಾನವನ್ನು ಕೂಡಲೇ ಉನ್ನತ ಶಿಕ್ಷಣ ಸಚಿವರ ಜೊತೆಗೆ ಚರ್ಚಿಸಿ ಅನುದಾನ ತರಲಾಗುವುದು ಎಂದರು.
ಸಾಗರ ಪದವಿ ಕಾಲೇಜಿನ ಕುಂಸಿ ಪ್ರಾಧ್ಯಾಪಕ ಪ್ರೊ.ಉಮೇಶ್ ಉಪನ್ಯಾಸ ನೀಡಿದ ಅವರು ಪ್ರಾಮಾಣಿಕ
ಅಧ್ಯಾಪಕರಿಗೆ ವಿದ್ಯಾರ್ಥಿಗಳೆ ನಿಜವಾದ ಆಸ್ತಿ. ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ಸಿದ್ಧಗೊಳಿಸುವಲ್ಲಿ ಉಪನ್ಯಾಸಕರು ಸಫಲತೆ ಹೊಂದಿದರೆ ಮಾತ್ರ ಆತನ ಅಧ್ಯಾಪನ ವೃತ್ತಿ ಪರಿಪೂರ್ಣವಾಗಬಲ್ಲದು ಎಂದರು.
ವಿದ್ಯಾರ್ಥಿ ಸಾಧನೆ ಮಾಡಿದಾಗ ಮೊದಲು ಸಂತೋಷಡುವುದು ಗುರು, ಇತಿಹಾಸದ ದ್ರೋಣರು ಅರಸು ಮಕ್ಕಳ ಒತ್ತಡಕ್ಕೆ ಮಣಿದು ಏಕಲವ್ಯನ ಹೆಬ್ಬರಳನ್ನು ಗುರು ಕಾಣಿಕೆಯಾಗಿ ಪಡೆದರೂ ಮನಸ್ಸಿನಲ್ಲಿ ಅತೀವ ಸಂಕಟಪಟ್ಟಿದ್ದರು. ಶಿಷ್ಯಂದಿರು ಎತ್ತರದ ಸ್ಥಾನದಲ್ಲಿರುವುದು ಗುರುವಿಗೆ ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ.ವಿಶ್ವನಾಥ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ಮಂಜುನಾಥ ಮೇಷ್ಟ್ರು, ಹೂವಪ್ಪ, ಪ್ರವೀಣಕುಮಾರ್, ಹರೀಶ್, ಬಸವರಾಜ ಜಡ್ಡಿಹಳ್ಳಿ, ಜ್ಯೋತಿ, ಶ್ರೀಕಾಂತ್, ರಾಜಶೇಖರಗೌಡ ತ್ಯಾವಗೋಡು, ಮಹಮದ್ ಸಾಜೀದ್, ಲಕ್ಷ್ಮಣಪ್ಪ, ಉಪನ್ಯಸಕರಾದ ಪೂರ್ಣಿಮಾ ಭಾವೆ , ಶಂಕರ್ ನಾಯಕ್ , ದಿಲೀಪ್ , ಪವಿತ್ರಾ
ನೇತ್ರಾವತಿ, ಜೋಷಿ, ಆಶಾ,ವರ್ಷಾ ಇದ್ದರು.