Sunday, September 8, 2024
Google search engine
Homeಅಂಕಣಗಳುಲೇಖನಗಳುಪರಿಸರ ರಕ್ಷಿಸದಿದ್ದರೆ ಮನುಕುಲದ ನಾಶ ಸನ್ನಿಹಿತ : ನ್ಯಾ. ಆರ್.ಬಿ.ಧರ್ಮಗೌಡರ

ಪರಿಸರ ರಕ್ಷಿಸದಿದ್ದರೆ ಮನುಕುಲದ ನಾಶ ಸನ್ನಿಹಿತ : ನ್ಯಾ. ಆರ್.ಬಿ.ಧರ್ಮಗೌಡರ

ಶಿವಮೊಗ್ಗ : ಪರಿಸರದ ಮೇಲೆ ಮನು ಷ್ಯನ ಅವ್ಯಾಹತ ದಾಳಿಯಿಂದಾಗಿ ದಿನೇ ದಿನೇ ಪ್ರಕೃತಿ ವಿನಾಶಕ್ಕೆ ಒಳಗಾಗುತ್ತಿದೆ. ಈ ದಾಳಿ ಹೀಗೆಯೆ ಮುಂದುವರೆದರೆ ಮನುಕುಲದ ನಾಶ ಸನ್ನಿಹಿತವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಬಿ.ಧರ್ಮಗೌಡರ ಹೇಳಿದರು.
ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಅಶೋಕ ನಗರದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾತಾವರಣದ ಮಲೀನತೆ ಹಾಗೂ ಅಪಾರ ಪ್ರಮಾಣದಲ್ಲಿ ಅರಣ್ಯ ನಾಶಗೊಳ್ಳುತ್ತಿರುವುದು ಸಾಮಾಜಿಕ ದುರಂತ ಎಂದ ಅವರು, ಅಭಿವೃದ್ದಿಗಾಗಿ ಕಾಡುನಾಶ, ನಗರೀಕರಣ, ಕೈಗಾರಿಕೆ ಸ್ಥಾಪನೆಗಾಗಿ ಅರಣ್ಯಭೂಮಿ ಪರಿವರ್ತನೆ, ಜೀವ ಪ್ರಭೇದಗಳ ವಾಸಸ್ಥಾನ ನಾಶ, ಇವೆಲ್ಲವೂ ಜೀವ ವೈವಿಧ್ಯತೆಯ ಸರಪಳಿಗೆ ಪೆಟ್ಟು ನೀಡುತ್ತಿವೆ. ಮುಖ್ಯವಾಗಿ ಅತಿ ಯಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಕಾಡ್ಗಿಚ್ಚು, ಹವಾಮಾನ ಬದಲಾವಣೆ ಯಿಂದಾಗಿ ಅಪರೂಪದ ಜೀವವೈವಿದ್ಯ ಅವಸಾನದತ್ತ ಸಾಗುತ್ತಿದೆ. ಇವುಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಹೇಳಿದರು.
ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್‌ಕುಮಾರ್ ಮಾತನಾಡಿ, ಪರಿಸರ ನಾಶದಿಂದಾಗುವ ದುಷ್ಪರಿಣಾಮ ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಹಾಗೂ ಜಾಗತಿಕ ತಾಪಮಾನದ ಏರಿಕೆಯ ಪರಿಣಾಮಗಳನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು.
ಅರಣ್ಯ ಬೆಳೆಸುವಲ್ಲಿ ರೈತರನ್ನು ಪ್ರೋತ್ಸಾಹಿಸಲು ಈ ಹಿಂದೆ ಜಾರಿ ಗೊಳಿಸಲಾಗಿದ್ದ ಯೋಜನೆಯನ್ನು ಮುಂದು ವರೆಸಲಾಗಿದೆ. ಈ ಯೋಜನೆಯಡಿ ರೈತರು ನೆಟ್ಟ ಗಿಡಕ್ಕೆ ಮೊದಲ ವರ್ಷ ೩೦ರೂ., ಎರಡನೇ ವರ್ಷ ೪೦ರೂ. ಹಾಗೂ ಮೂರನೇ ವರ್ಷ ೪೦ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ, ನ್ಯಾಯಾ ಧೀಶರಾದ ಲಕ್ಷ್ಮೀನಾರಾಯಣ, ಹರೀಶ್, ಶರತನ್, ವೀಣಾ, ಶ್ವೇತಾ, ಅಂಜಲಿ ಶರ್ಮಾ, ಶಾಲಾ ಮುಖ್ಯೋಪಾಧ್ಯಾಯ ಹಾಲೇಶಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್, ಬಾಷಾಸಾಬ್, ಶಿಕ್ಷಣ ಸಂಯೋಜಕ ರಮೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂಧಿಗಳು, ಶಿಕ್ಷಕರು, ಶಾಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments