ಹೊಸನಗರ: ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಹೊಸನಗರ ತಾಲೂಕಿನ ಶಾಲೆಗಳಿಗೆ ನಾಳೆಯೂ (ಜು. 18) ರಜೆ ಘೋಷಣೆ ಮಾಡಲಾಗಿದೆ.
ಹೊಸನಗರ ತಹಶೀಲ್ದಾರ್ ರಶ್ಮಿ ಅವರು ಹೊಸನಗರ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಿಗೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಪ್ರಕಟಿಸಿದ್ದಾರೆ.
ಸೊರಬದಲ್ಲಿ ಮಳೆಯು ಒಂದೇ ಸಮನೆ ಜಿಟಿಜಿಟಿ ಸುರಿಯುತ್ತಿದ್ದು ವರದಾ ನದಿ ದಂಡೆಯ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿವೆ. ತುಂಗಾ ನದಿಯು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಶಿಕಾರಿಪುರದ ಅಂಜನಾಪುರ ಜಲಾಶಯವು ಮೈದುಂಬಿಕೊಂಡಿದ್ದು, ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಬಾಗಿನ ಸಮರ್ಪಿಸಿದ್ದಾರೆ.
ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವು ಕಡೆ ಮಳೆ ಅಬ್ಬರ ತಗ್ಗಿದ್ದು, ಒಂದೇ ದಿನ ಶೇ.50ರಷ್ಟು ಮಳೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ.