Monday, November 11, 2024
Google search engine
Homeಅಂಕಣಗಳುಲೇಖನಗಳುಗುಣಮಟ್ಟದ ಹಾಲು ಒದಗಿಸಲು ಕ್ರಮ : ಹೆಚ್.ಎನ್.ವಿದ್ಯಾಧರ್

ಗುಣಮಟ್ಟದ ಹಾಲು ಒದಗಿಸಲು ಕ್ರಮ : ಹೆಚ್.ಎನ್.ವಿದ್ಯಾಧರ್

ಶಿವಮೊಗ್ಗ: ಗ್ರಾಹಕರಿಗೆ ಗುಣಮಟ್ಟದ ಹಾಲು ಒದಗಿಸಲು ಕ್ರಮ ಕೈಗೊಳ್ಳಲಾಗು ವುದು ಎಂದು ಶಿಮುಲ್‌ನ ನೂತನ ಅಧ್ಯಕ್ಷ ಹೆಚ್.ಎನ್.ವಿದ್ಯಾಧರ್ ಹೇಳಿದರು.
ಶಿಮುಲ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಅವರು ಇಂದು ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿಮುಲ್ (ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಪ್ರಸ್ತುತ ೧೧೧೨ ಹಾಲು ಉತ್ಪಾದಕರ ಸಂಘಗಳನ್ನು ಹೊಂದಿದ್ದು, ನಿತ್ಯ ೫,೭೪,೭೯೪ ಕೆ.ಜಿ. ಹಾಲು ಶೇಖರಿಸುತ್ತಿದೆ. ಈ ಪೈಕಿ ೨,೧೩,೦೯೬ ಕೆ.ಜಿ.ಯಷ್ಟು ಹಾಲು, ಮೊಸರು ನಿತ್ಯ ಮಾರಾಟವಾಗುತ್ತಿದೆ ಎಂದರು. .
ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ಪ್ರತಿನಿತ್ಯ ೧.೭೪ಲಕ್ಷ ಕೆ.ಜಿ. ಹಾಲನ್ನು ಪೌಡರ್ ಆಗಿ ಪರಿ ವರ್ತಿಸಲಾಗುವುದು. ಕ್ಷೀರ ಭಾಗ್ಯ ಯೋಜನೆಗೆ ೧ಲಕ್ಷ ಕೆ.ಜಿ. ಹಾಲು ನೀಡಲಾಗುತ್ತಿದೆ. ಒಕ್ಕೂ ಟವು ೭ ಶಿಥಲೀಕರಣ ಕೇಂದ್ರ, ೬೬ ಬಿಎಂಸಿ ಕೇಂದ್ರಗಳನ್ನು ಹೊಂದಿದೆ ಎಂದು ತಿಳಿಸಿದರು.
ಶಿವಮೊಗ್ಗ ಡೈರಿಯಲ್ಲಿ ೨ಲಕ್ಷ ಲೀ. ಸಾಮರ್ಥ್ಯದ ಮಿಲ್ಕ್ ಪ್ಯಾಕಿಂಗ್ ವ್ಯವಸ್ಥೆ, ೨ಲಕ್ಷ ಲೀ. ಫ್ಲೆಕ್ಸಿ ಪ್ಯಾಕ್ ಹಾಲಿನ ಘಟಕ ಇದೆ. ಇದೇ ಮಾದರಿಯಲ್ಲಿ ದಾವಣಗೆರೆಯಲ್ಲಿ ೩ಲಕ್ಷಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು ೧೫೦ ಕೋಟಿ ರೂ. ವೆಚ್ಚದ ಕಾಮಗಾರಿ ಭರದಿಂದ ಸಾಗಿದೆ. ಒಂದೂವರೆ ವರ್ಷದೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
೧೯೮೭ರಲ್ಲಿ ಪ್ರಾರಂಭವಾದ ಈ ಒಕ್ಕೂಟ ಪ್ರಸ್ತುತ ೧.೫೮ ಸದಸ್ಯರನ್ನು ಹೊಂದಿದೆ. ೧೪೧೪.೬೦ಲಕ್ಷ ಷೇರು ಬಂಡವಾಳ, ೨೦೧೬-೧೭ರಲ್ಲಿ ೭.೨೫ಕೋಟಿರೂ. ಲಾಭ ಹೊಂದಿದೆ ಎಂದು ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಶಿಮುಲ್‌ನ ಎಟಿಎಂ ಪಾರ್ಲರ್‌ಗಳನ್ನು ವಿಸ್ತರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಸಾರವಾಗಿ ಕ್ರಮಕೈ ಗೊಳ್ಳಲಾಗುವುದು. ಅಲ್ಲದೆ, ಗ್ರಾಹಕರಿಗೆ ಗುಣಮಟ್ಟದ ಹಾಲು ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಸ್.ಸಿ. ನಾಗರಾಜಪ್ಪ, ನಿರ್ದೇಶಕರಾದ ಶ್ರೀಪಾದರಾವ್, ಚಂದ್ರಶೇಖರ್, ಷಣ್ಮುಖ ಪಾಟೀಲ್, ಹೆಚ್.ಕೆ. ಬಸಪ್ಪ, ಕೆ.ಎಲ್. ಜಗದೀಶ್ವರ್, ಪಾಲಾಕ್ಷಪ್ಪ, ಶಿವಶಂಕರಪ್ಪ, ಎಂ.ಎನ್. ಮಹೇಶ್ವರಪ್ಪ ಮತ್ತಿತರರಿದ್ದರು.

RELATED ARTICLES
- Advertisment -
Google search engine

Most Popular

Recent Comments