ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ನೆನ್ನೆ ಅಪಘಾತದಲ್ಲಿ ಮೃತರಾದ ಎಮ್ಮೆ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಸರ್ಕಾರದಿಂದ ಎರಡು ಲಕ್ಷ ಘೋಷಣೆ ಆಗಿದೆ ನಾನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇನ್ನು ಹೆಚ್ಚಿನ ಸಹಾಯ ಮಾಡಲು ಮನವಿ ಮಾಡುತ್ತೇನೆ. ಜೊತೆಗೆ ವೈಯಕ್ತಿಕವಾಗಿ ಗೀತಾ ಶಿವರಾಜಕುಮಾರ್ ರವರು ಮತ್ತು ಶಿವರಾಜ್ ಕುಮಾರ್ ರವರು ಮೃತರಾದ ಪ್ರತಿಯೊಬ್ಬರಿಗೂ ಒಂದು ಲಕ್ಷ ರೂಪಾಯಿಗಳನ್ನು ನೀಡಲು ಸಮ್ಮತಿಸಿದ್ದು ಶೀಘ್ರವಾಗಿ ಅವರ ಕುಟುಂಬಗಳಿಗೆ ತಲುಪಿಸುತ್ತೇನೆ ಭರವಸೆ ನೀಡಿದರು.