Saturday, October 12, 2024
Google search engine
Homeಇ-ಪತ್ರಿಕೆಗೋ ಹತ್ಯೆ ನಿಷೇಧದ ಕುರಿತು ಸುಧೀರ್ಘ ಚರ್ಚೆಗೆ ಗ್ರಾಸವಾದ ಕೆ.ಡಿ.ಪಿ. ಸಭೆ

ಗೋ ಹತ್ಯೆ ನಿಷೇಧದ ಕುರಿತು ಸುಧೀರ್ಘ ಚರ್ಚೆಗೆ ಗ್ರಾಸವಾದ ಕೆ.ಡಿ.ಪಿ. ಸಭೆ

ಶಿವಮೊಗ್ಗ: ಕೃಷಿ, ತೋಟಗಾರಿಕೆ ಹಾಗೂ ಗೋ ಹತ್ಯೆ ನಿಷೇಧದ ಬಗ್ಗೆ ಸುಧೀರ್ಘ ಚರ್ಚೆಗೆ ಇಂದಿನ  ೨೦೨೪-೨೫ನೇ ಸಾಲಿನ ಪ್ರಥಮ ತ್ರೈಮಾಸಿಕ ಕೆ.ಡಿ.ಪಿ. ಸಭೆ ಸಾಕ್ಷಿಯಾಯಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅಧ್ಯಕ್ಷತೆಯನ್ನು ವಹಿಸಿದ್ದ ಈ ಸಭೆಯ ಆರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ರೈತರಿಗೆ ನಿಗಧಿತ ಸಮಯದಲ್ಲಿ ಸೌಲಭ್ಯಗಳು ದೊರಕದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಿಗಧಿತ ಸಮಯದಲ್ಲಿ ಕೆಡಿಪಿ ಸಭೆಯನ್ನೇ ಕರೆಯದೇ ರೈತರಿಗೆ ಹೇಗೆ ಸೌಲಭ್ಯ ಒದಗಿಸುತ್ತೀರಿ ಎಂದು ಆಕ್ರೋಶ ಭರಿತವಾಗಿ ಪ್ರಶ್ನಿಸಿದರು.

ಸಂಬಂಧಿಸಿದ ಅಧಿಕಾರಿಗೆ ಇದಕ್ಕೆ ಉತ್ತರ ನೀಡಿ 275 ಮನೆಗಳಿಗೆ ಹಾನಿಯಾಗಿದೆ. 2.28 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ನಡೆಯುತ್ತಿರುವ ಗೋಹತ್ಯೆ ಕುರಿತು ಪ್ರಸ್ತಾಪಿಸಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಅಸ್ತಿತ್ವದಲ್ಲಿಯೇ ಇದೆಯೇ ಎಂದು ಖಾರವಾಗಿಯೇ ಸಚಿವರನ್ನು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ ನಡೆಯುತ್ತಿದೆ. ಗೋಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟರು, ಹಿಡಿದುಕೊಟ್ಟವರ ಮೇಲೆಯೇ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಹಸುಗಳ ಮಾರಣಹೋಮವನ್ನು ನಿಲ್ಲಿಸುವ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಭಾನು, ಮಧ್ಯಪ್ರವೇಶಿಸಿ ಇತ್ತೀಚಿಗೆ ನಡೆದ ಬಕ್ರೀದ್ ಹಬ್ಬದಲ್ಲಿ ಯಾವುದೇ ಹಸುವನ್ನು ಹತ್ಯೆಗೈಯ್ಯಲ್ಲಿಲ್ಲ. ಅತ್ಯಂತ ಶಾಂತಿಯುತವಾಗಿಯೇ ಹಬ್ಬವನ್ನು ಆಚರಿಸಲಾಗಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದಾಗ ಎಸ್.ಎನ್. ಚನ್ನಬಸಪ್ಪನವರು ತಮ್ಮ ಮೊಬೈಲ್‌ನಲ್ಲಿದ್ದ ಗೋಹತ್ಯೆ ಸಂಬಂಧಿಸಿದ ವೀಡಿಯೋ ಮತ್ತು ಪೋಟೋಗಳನ್ನು ತೋರಿಸಿ ಹಾಗಾದರೆ ಇದು ಸುಳ್ಳೇ ಎಂದು ಕುಟುಕಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಾಸಕ ಸಂಗಮೇಶ್, ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್‌ಗೌಡ, ಜಿ.ಪಂ. ಸಿ.ಇ.ಓ. ಸುಧಾಕರ್ ಸ್ನೇಹಲ್ ಲೋಖಂಡೆ ಮೊದಲಾದವರು ಇದ್ದರು.

RELATED ARTICLES
- Advertisment -
Google search engine

Most Popular

Recent Comments