ವಿಶ್ವಹಿಂದೂ ಪರಿಷತ್-ಬಜರಂಗದಳ ಶಿವಮೊಗ್ಗ ದುರ್ಗಿ ಪ್ರಖಂಡ ಹಾಗೂ ಸಂಸ್ಕೃತಿ ಫೌಂಡೇಶನ್ ವತಿಯಿಂದ ಇಂದು ಮುಂಜಾನೆ ಜೈಲು ರಸ್ತೆ ಕೆನರಾ ಬ್ಯಾಂಕ್ ಮುಂಭಾಗ ಬಸ್‌ಸ್ಟಾಪ್ ಬಳಿ ದಿನಪತ್ರಿಕೆ ಹಂಚುವ ಯುವಕರಿಗೆ ಮಾಸ್ಕ್, ಸ್ಯಾನಿಟೈಜರ್, ಹ್ಯಾಂಡ್ ಗ್ಲೌಸ್ ನೀಡಿ ಕೊರೋನಾ ಎರಡನೇ ಮಹಾಮಾರಿಯ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಕೃತಿ ಫೌಂಡೇಶನ್‌ನ ಶರಣ್, ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ವಿಶ್ವ ಹಿಂದೂ ಪರಿಷತ್ ನಗರ ಸಹ ಕಾರ್ಯದರ್ಶಿ ಮಂಜುಶೇಟ್, ಸುರೇಶ್ ಬಾಬು, ದುರ್ಗಿ ಪ್ರಖಂಡ ಅಧ್ಯಕ್ಷ ಪ್ರಶಾಂತ್ (ಪುಟ್ಟಣ್ಣ), ಗಂಗಾಧರ, ಪವನ, ಶ್ರೇಯಸ್ ಹಾಗೂ ಜಿಲ್ಲಾ ದಿನಪತ್ರಿಕೆ ವಿತರಕ ಸಂಘದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಅರುಣ್ ಹೆಚ್. ಮತ್ತಿತರರಿದ್ದರು.