Wednesday, November 13, 2024
Google search engine
Homeಇ-ಪತ್ರಿಕೆವೈಭೋಗದಲ್ಲಿ ನಡೆದ ಗುಡ್ಡೇಕಲ್ ಜಾತ್ರೆ

ವೈಭೋಗದಲ್ಲಿ ನಡೆದ ಗುಡ್ಡೇಕಲ್ ಜಾತ್ರೆ

ಶಿವಮೊಗ್ಗ : ಶ್ರಾವಣ ಮಾಸದಲ್ಲಿ ಅತ್ಯಂತ ವಿಜೃಂಭಣೆ ವೈಭವದಿಂದ ನಡೆಯುವ ತಮಿಳು ಸಮುದಾಯದ ಆರಾಧ್ಯ ದೈವ ಹಾಗೂ ನಗರದ ಪ್ರಸಿದ್ಧ ಶ್ರೀ ಬಾಲಸುಬ್ರಮಣ್ಯಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಅತ್ಯಂತ ವೈಭೋಗದಲ್ಲಿ ನಡೆಯಿತು.

ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಕ್ರೋಧಿನಾಮ ಸಂವತ್ಸರದ ಆಷಾಢ ಬಹುಳ ಅಷ್ಟಮಿಯಂದು ಮೊದಲನೆಯ ದಿನವಾದ ಜು.೨೮ ಭಾನುವಾರದಂದು ‘ಭರಣಿ’, ಎರಡನೇಯ ದಿನವಾದ ಜು.೨೯ ಸೋಮವಾರದಂದು ‘ಆಡಿಕೃತಿಕೆ’ ಹರೋಹರ ಜಾತ್ರೆಗೆ ಶಿವಮೊಗ್ಗ ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತ ಮಹಾಶಯರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಎಂದಿನAತೆ ಬೆಳಗ್ಗೆ ಮಳೆ ಬಂದರೂ ಸಹ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದ ಸಮಯದಲ್ಲಿ ಸ್ವಲ್ಪ ವಿರಾಮ ನೀಡಿ ಸ್ವಾಮಿ ದರ್ಶನಕ್ಕೆ ಅನುಕೂಲವಾಗುವಂತೆ ಮಾಡಿತ್ತು. ಯುವಕರು ಮಕ್ಕಳು ಬಹಳ ಸಡಗರದಿಂದ ಜಾತ್ರೆಯಲ್ಲಿ ಸಂಭ್ರಮಾಚರಣೆ ಪಟ್ಟರು. ಹರಕೆ ತೀರಿಸಲು ಬರುವ ಭಕ್ತರು, ದೇವರ ದರ್ಶನಕ್ಕೆ ಬಂದ ಭಕ್ತರು ಹಾಗೂ ಸಾರ್ವಜನಿಕರಿಗೆ ದೇವಸ್ಥಾನದ ಸಮಿತಿ ವತಿಯಿಂದಲೇ ಅನ್ನಸಂತಾರ್ಪಣೆ ಹಾಗೂ ಪ್ರಸಾದ ವಿತರಣೆ ಆಯೋಜಿಸಲಾಗಿತ್ತು. ದೇವರ ದರ್ಶನ ಪಡೆದ ನಂತರ ಸಹಸ್ರಾರು ಜನರು ದೇವರ ಪ್ರಸಾದವನ್ನು ಸ್ವೀಕರಿಸಿ ಸಂತೃಪ್ತರಾದರು.

ಜಾತ್ರೆಯಲ್ಲಿ ಮಕ್ಕಳ ಆಟಿಕೆಗಳು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಿಯೇ ರಂಜಿಸುತ್ತಿದ್ದವು. ಮಕ್ಕಳು, ಯುವಕರು ಜಾತ್ರೆಯಲ್ಲಿನ ಆಟಿಕೆಗಳನ್ನು ಆಡಿ ಸಂತಸಪಟ್ಟರು. ಈ ವೇಳೆ ವಿವಿಧೆಡೆಯಿಂದ ಬಂದಿದ್ದ ಭಕ್ತರು ದೇವರ ದರ್ಶನದ ನಂತರ ತುಂಬಿದ ತುಂಗೆಯ ಸಂದರ್ಯವನ್ನು ಕಣ್ತುಂಬಿಕೊAಡರು.  

ವಿಶೇಷತೆ :
ಬಾಲಸುಬ್ರಮಣ್ಯ ಸ್ವಾಮಿಗೆ ಹರಕೆ ಮಾಡಿಕೊಂಡ ಭಕ್ತರು ಕಾವಡಿಗಳನ್ನು ಹೆಗಲ ಮೇಲೆ ಹೊತ್ತು ಬರುವುದು ಹರೋಹರ ಜಾತ್ರೆಯ ವಿಶೇಷತೆ. ಅಲಂಕೃತಗೊAಡ ತೇರು ಎಳೆಯುವುದು, ಕೆನ್ನೆ ಮತ್ತು ನಾಲಿಗೆಗೆ ತ್ರಿಶೂಲಗಳನ್ನು ಚುಚ್ಚಿಕೊಂಡು ದೇಹವನ್ನು ದಂಡನೆಗೆ ಒಳಪಡಿಸಿ, ದೂರದ ಊರುಗಳಿಂದ ಪಾದಯಾತ್ರೆಯಲ್ಲಿ ಹರೋಹರ ನಾಮಸ್ಮರಣೆ ಮಾಡುತ್ತಾ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಆಗಮಿಸಿದ್ದರು.  ವಿಶೇಷವಾಗಿ ಹರಿಶಿಣದ ಮಡಿ ವಸ್ತç ಧರಿಸಿದ ಮಹಿಳೆಯರು, ಪುರುಷರು, ಮಕ್ಕಳು ಹಾಗ/ಉ ಯುವಕರು ನಾನಾ ರೀತಿಯಲ್ಲಿ ಅಲಂಕೃತಗೊAಡಿದ್ದ ಕಾವಡಿಯನ್ನು ಹೊತ್ತು, ವಿಶೇಷ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಬರುವುದು ಕಂಡು ಬಂದಿತು.

ಪೊಲೀಸ್ ಬಂದೋಬಸ್ತ್ :
ದೇವಸ್ಥಾನದ ಸುತ್ತಮುತ್ತ ಪುಂಡರ ಹಾವಳಿಯನ್ನು ತಡೆಯಲು ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಕಳ್ಳತನವಾದರೆ ತಕ್ಷಣವೇ ಕಂಡು ಹಿಡಿಯಲು ಅನುಕೂಲವಾಗುವಂತೆ ೩೫ ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿಯೇ ವಿಶೇಷ ಪೊಲೀಸ್ ಠಾಣೆಯನ್ನು ತೆರೆಯಲಾಗಿತ್ತು. ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದ್ದು, ಮಳೆ ವಿಶ್ರಾಂತಿ ಕೊಟ್ಟಿದ್ದರಿಂದ ಭಕ್ತರ ಸಂಖ್ಯೆಯೂ ಹೆಚ್ಚಿತ್ತು.
ದೇವಸ್ಥಾನದ ಬಳಿ ದೇವರ ದರ್ಶನಕ್ಕೆ ಬರುವವರು ಮತ್ತು ದರ್ಶನ ಮುಗಿಸಿಕೊಂಡು ಹೊಗುವವರ ನಡುವೆ ನೂಕುನುಗ್ಗಲು ಏರ್ಪಡದಂತೆ ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿತ್ತು.

RELATED ARTICLES
- Advertisment -
Google search engine

Most Popular

Recent Comments