Saturday, October 12, 2024
Google search engine
Homeಇ-ಪತ್ರಿಕೆಸರ್ಕಾರ ಮಧ್ಯ ಪ್ರವೇಶಿಸಲ್ಲ: ಇಡಿ ದಾಳಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಸರ್ಕಾರ ಮಧ್ಯ ಪ್ರವೇಶಿಸಲ್ಲ: ಇಡಿ ದಾಳಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಮೈಸೂರು : ಮಾಜಿ ಸಚಿವ ನಾಗೇಂದ್ರ ಮನೆಯ ಮೇಲೆ ಇಡಿ ದಾಳಿ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಅವರು ಅವರ ಕೆಲಸವನ್ನು  ಕಾನೂನು ಪ್ರಕಾರ ಮಾಡಲಿ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಬುಧವಾರ ಬೆಳಗ್ಗೆ ಮಾಜಿ ಸಚಿವ ನಾಗೇಂದ್ರ ಹಾಗೂ ಮತ್ತೊಬ್ಬ ಶಾಸಕನ ಮನೆಯ ಮೇಲೆ ಇಡಿ ರೇಡ್ ಆಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಇಡಿ ಅವರ ಕೆಲಸ ಮಾಡಲಿ. ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಆದರೆ, ಅವರು ಕಾನೂನು ಪ್ರಕಾರ ಕೆಲಸ ಮಾಡಲಿ ಎಂದು ಹೇಳಿದರು.

ಇದೇ ವೇಳೆ ಮುಡಾ ಹಗರಣಗಳ ಬಗ್ಗೆ ಕೇಳುತ್ತಿದ್ದಂತೆ ಗರಂ ಆದ ಸಿದ್ದರಾಮಯ್ಯ, ಮುಡಾ ವಿಚಾರದಲ್ಲಿ ನನ್ನ ಹೆಂಡತಿ ವಿಚಾರವನ್ನ ಇಟ್ಟುಕೊಂಡು ವಿವಾದ ಮಾಡುತ್ತಿದ್ದಾರೆ. ನಾವು ಅವರಿಗೆ ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ ಎಂದು ಹೇಳಿದರು.

ಮುಡಾದವರು ನಮ್ಮ ಜಮೀನನ್ನ ನಿಯಮಬಾಹಿರವಾಗಿ ಭೂ ಸ್ವಾದೀನ ಮಾಡಿಕೊಂಡಿದ್ದಾರೆ. ಅದಕ್ಕೆ ತಪ್ಪಾಯಿತು ಎಂದು ಬದಲಿ ನಿವೇಶನ ಕೊಟ್ಟಿದ್ದಾರೆ. ಇದರಲ್ಲಿ ವಿವಾದ ಯಾಕೆ ಬಂತು. ರಾಜಕೀಯಕ್ಕಾಗಿ ಬಿಜೆಪಿಯವರು ಈ ವಿಷಯವನ್ನು ವಿವಾದ ಮಾಡಿ ಪ್ರತಿಭಟನೆ, ಮುತ್ತಿಗೆ ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಮುಡಾ ಅಕ್ರಮಗಳ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಬಂದ ನಂತರ ತಪ್ಪಾಗಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಸಿದ್ದರಾಮಯ್ಯ, ಈ ವಿಚಾರದಲ್ಲಿ ನಮ್ಮ ಪೊಲೀಸರು ಹಾಗೂ ಅಧಿಕಾರಿಗಳು ತನಿಖೆ ನಡೆಸಲು ಸಮರ್ಥರಿದ್ದಾರೆ. ಆದ್ದರಿಂದ ಮುಡಾ ಹಗರಣವನ್ನ ಸಿಬಿಐಗೆ ವಹಿಸುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯ ಬಗ್ಗೆ ‌ಮೀಸಲಾತಿ ನಿರ್ಣಯ ಆದ ಮೇಲೆ ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ  ಹೇಳಿಕೆ ನೀಡಿದರು.

RELATED ARTICLES
- Advertisment -
Google search engine

Most Popular

Recent Comments