ಸರ್ಕಾರಿ ಹಾಸ್ಟೆಲ್‌ಗಳು ನರಕದ ಕೂಪಗಳು…

ಶಿವಮೊಗ್ಗ : ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗ ಮತ್ತು ಸರ್ಕಾರಿ ಮಹಿಳಾ ಹಾಸ್ಟೆಲ್‌ಗಳು ನರಕದ ಕೂಪಗಳಾಗಿವೆ ಎಂದು ಶಾಸಕ ಬಿ.ವೈ.ರಾಘವೇಂದ್ರ ಆರೋಪಿಸಿದರು.
ಇಂದು ನಗರದ ಬಿಜೆಪಿ ಕಾರ್ಯಾ ಲಯದಲ್ಲಿ ಎಸ್‌ಸಿ, ಎಸ್‌ಟಿ, ಓಬಿಸಿ ಹಾಗೂ ಮಹಿಳಾ ಹಾಸ್ಟೆಲ್‌ಗಳ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸರ್ಕಾರದ ವತಿ ಯಿಂದ ನಡೆಯುತ್ತಿರುವ ಈ ಹಾಸ್ಟೆಲ್ ಗಳಲ್ಲಿ ಯಾವುದೇ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ ಎಂದು ದೂರಿದರು.
ಪಕ್ಷದ ಓಬಿಸಿ ಮೋರ್ಚಾ, ಸರ್ಕಾರಿ ಹಾಸ್ಟೆಲ್‌ಗಳಲ್ಲಿರುವ ಅವ್ಯವಸ್ಥೆ ಮತ್ತು ನ್ಯೂನ್ಯತೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ ನರಕ ಸದೃಶ ದೃಶ್ಯಗಳು ಅನಾವರಣ ಗೊಂಡಿವೆ. ರಾಜ್ಯ ಸರ್ಕಾರ ಈ ಹಾಸ್ಟೆಲ್‌ಗಳಿಗೆ ಕೋಟ್ಯಾಂತರ ರೂ. ಬಿಡುಗಡೆ ಮಾಡುತ್ತಿದ್ದು, ಅವೆಲ್ಲವೂ ಅವ್ಯವಹಾರವಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾ ಖೆಯಿಂದ ೭೯ ಹಾಸ್ಟೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ೨೭ ಬಾಲಕಿ ಯರ ಹಾಗೂ ೫೯ ಬಾಲಕರ ವಿದ್ಯಾರ್ಥಿ ನಿಲಯಗಳಾಗಿವೆ. ೧೩೧ ಪರಿಶಿಷ್ಟ ಜಾತಿ ಹಾಗೂ ವರ್ಗದ ಹಾಸ್ಟೆಲ್‌ಗಳಲ್ಲಿ ೬೧ ಬಾಲಕಿಯರು ಹಾಗೂ ೭೦ ಬಾಲಕರ ಹಾಸ್ಟೆಲ್‌ಗಳಾಗಿದ್ದು, ಈ ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ವಾಗಿದೆ. ಬಹುಪಾಲು ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಡಗಳಿಲ್ಲ. ಈಗ ನಡೆಯುತ್ತಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳು ಕಿಷ್ಕಿಂದೆ ಯಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ರಾಜ್ಯಾದ್ಯಂತ ೧೫ ಜಿಲ್ಲಾ ಕೇಂದ್ರಗಳಲ್ಲಿ ಹಾಸ್ಟೆಲ್‌ಗಳ ಅವ್ಯವಸ್ಥೆ ಮತ್ತು ಕೊರತೆ ಕುರಿತು ಸಮಗ್ರ ವರದಿ ಯನ್ನು ಜನರ ಮುಂದೆ ಇಡಲಾಗುತ್ತಿದೆ ಎಂದ ಅವರು, ಬಹುತೇಕ ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ, ವೈದ್ಯಕೀಯ ವ್ಯವಸ್ಥೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಶಿಕ್ಷಕರ ಕೊರತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯ ಗಳೇ ಇಲ್ಲವಾಗಿದೆ. ಇದನ್ನು ಜನಸಾ ಮಾನ್ಯರಿಗೆ ತಿಳಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಡಿ.ಎಸ್.ಅರುಣ್, ಶಿವಪ್ಪ, ರಾಮನಾಯ್ಕ್, ಸಣ್ಣ ಹನುಮಂತಪ್ಪ ಮೊದಲಾದವರಿದ್ದರು.

ಮಾ.೧೬ರಂದು ಕೇಂದ್ರ ಉಕ್ಕು ಮತ್ತು ಗಣಿ ಸಚಿವ ಚೌಧರಿ ಬೀರೇಂದರ್ ಸಿಂಗ್ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಲಿದ್ದು, ಕಾರ್ಖಾನೆಯನ್ನು ಉನ್ನತೀಕರಿಸಲು ೧೦೦೦ ಕೋಟಿ ರೂ. ಅನುದಾನವನ್ನು ನೀಡುವ ನಿರೀಕ್ಷೆ ಇದೆ. ಸಂಸದ ಬಿ.ಎಸ್.ಯಡಿಯೂರಪ್ಪನವರ ಹೋರಾಟದ ಫಲವಾಗಿ ಕೇಂದ್ರ ಸಚಿವರು ಭೇಟಿ ನೀಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಯಡಿಯೂರಪ್ಪರನ್ನು ಅತ್ಯಧಿಕ ಮತಗಳಿಂದ ಜಯಶಾಲಿಯನ್ನಾಗಿಸುವುದೇ ನಮ್ಮ ಮುಂದಿರುವ ಗುರಿಯಾಗಿದೆ. ಪಕ್ಷ ಬಯಸಿದರೆ ಬೇರೆ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ.
-ಬಿ.ವೈ.ರಾಘವೇಂದ್ರ