Sunday, October 13, 2024
Google search engine
Homeಲೇಖನಗಳುಕಥೆಚಿನ್ನದ ಚೆಂಡು

ಚಿನ್ನದ ಚೆಂಡು

ಒಬ್ಬ ರಾಜನಿಗೆ ಸುಂದರಿಯಾದ ಒಬ್ಬಳೇ ಮಗಳಿದ್ದಳು. ರಾಜ ಅವಳನ್ನು ಅತಿಶಯವಾಗಿ ಪ್ರೀತಿಸುತ್ತಿದ್ದ. ತಾನು ಸುಂದರಿ ಎಂಬ ಅಹಂ ಕಾರ ಅವಳ ನೆತ್ತಿಗೇರಿತ್ತು. ತನ್ನ ಸ್ವಾರ್ಥ ಸಾಧನೆಗಾಗಿ ಏನು ಬೇಕಾದರೂ ಮಾಡುತ್ತಿ ದ್ದಳು. ಸುಳ್ಳು ಹೇಳುತ್ತಿದ್ದಳು.ಒಂದು ದಿನ ಸಂಜೆ ಅವಳು ಪಡು ಕಡಲಿನಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಿದಳು. ತಂದೆಯ ಬಳಿಗೆ ‘ಅಪ್ಪಾ, ನನಗೆ ಈ ಸೂರ್ಯ ನನ್ನೇ ಚೆಂಡನ್ನಾಗಿ ಬಳಸಿ ಆಟವಾಡಬೇಕೆಂಬ ಆಸೆಯಾಗಿದೆ. ಅವನನ್ನು ತರಿಸಿಕೊಡು ’ ಎಂದು ಕೇಳಿದಳು. ಈ ಮಾತಿಗೆ ರಾಜನು ಜೋರಾಗಿ ನಕ್ಕುಬಿಟ್ಟ ಎಂಥ ಹುಚ್ಚು ಮಾತಿದು ಮಗಳೇ, ಸೂರ್ಯನ ಬಳಿಗೆ ಹೋಗಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಲ್ಲಾದರೂ ಮಾಡಿದರೆ ಸುಟ್ಟು ಬೂದಿ ಯಾಗುತ್ತೇವೆ. ಇನ್ನು ಅವನನ್ನು ಹಿಡಿಯುವ ಮಾತೆಲ್ಲಿ ಬಂತು ? ಅದರ ಬದಲು ಚಿನ್ನದ ಚೆಂಡನ್ನು ಮಾಡಿಸಿಕೊಡುತ್ತೇನೆ. ಅದನ್ನೇ ಸೂರ್ಯನೆಂದು ಭಾವಿಸಿ ಆಟವಾಡು’ ಎಂದು ಹೇಳಿದ.
ರಾಜಕುಮಾರಿ ಈ ಮಾತಿಗೆ ಒಪ್ಪಿ ಕೊಂಡಳು. ರಾಜ ಚಿನಿವಾರನಿಂದ ಚಿನ್ನದ ಚೆಂಡನ್ನು ಮಾಡಿಸಿ ಮಗಳಿಗೆ ಕೊಟ್ಟ .ರಾಜಕು ಮಾರಿ ಹೊತ್ತು ಮುಳುಗಿ ಕತ್ತ ಲಾಗು ವವರೆಗೂ ಚಿನ್ನದ ಚೆಂಡಿನಲ್ಲಿ ಆಟವಾಡಿದಳು. ಕಡೆಗೆ ಚೆಂಡು ಪುಟಿ ಯುತ್ತ ಹೋಗಿ ಒಂದು ಬಾವಿಗೆ ಬಿತ್ತು.
ತುಂಬ ನೀರಿ ರುವ ಬಾವಿಗೆ ಬಗ್ಗಿ ನೋಡಿ ರಾಜ ಕುಮಾರಿ ಅಸಹಾಯಕಳಾಗಿ ಅಳತೊಡಗಿ ದಳು. ‘ಅಯ್ಯೋ ನಾನು ಬಾವಿಗೆ ಇಳಿಯ ಲಾರೆ ನಲ್ಲ, ನನ್ನ ಚೆಂಡನ್ನು ಯಾರು ತಂದು ಕೊಡು ತ್ತಾರೆ ?’ ಎಂದು ಕೂಗಿಕೊಂಡಳು.
ಆಗ ಬಾವಿಯ ಕಟ್ಟೆಯಿಂದ ಒಂದು ಪುಟ್ಟ ಧ್ವನಿ ‘ರಾಜಕುಮಾರಿ ನಿನ್ನ ಚೆಂಡನ್ನು ನಾನು ಹೆಕ್ಕಿ ತಂದುಕೊಟ್ಟರೆ ಆಗಬಹುದೇ ?’ ಎಂದು ಕೇಳಿತು. ಆಗದೆ ಏನು ? ಯಾರು ತಂದು ಕೊಟ್ಟರೂ ಆಗುತ್ತದೆ ಎಂದಳು ರಾಜಕುಮಾರಿ. ‘ಸುಮ್ಮನೆ ಯಾರು ತಂದು ಕೊಡುತ್ತಾರೆ, ನಾನು ಕೇಳದು ದನ್ನು ಕೊಡುತ್ತೇನೆ ಅಂತ ಮಾತು ಕೊಡಬೇಕು’ ಎಂದಿತು ಧ್ವನಿ.
‘ಕೊಡುತ್ತೇನೆ ಮಹಾರಾಯ ಕೊಡುತ್ತೇನೆ, ಅಂತಹ ಉಪಕಾರ , ಮಾಡಿದವನಿಗೆ ಏನು ಕೇಳಿ ದರೂ ಕೊಡುತ್ತೇನೆ. ಅಂತಹ ಸಾಮರ್ಥ್ಯ ನನಗಿದೆ. ಸಿರಿವಂತ ದೊರೆಯ ಒಬ್ಬಳೇ ಮಗಳು ನಾನು’ ಎಂದು ಮಾತು ಕೊಟ್ಟಳು ರಾಜ ಕುಮಾರಿ.
ಅರೆಕ್ಷಣದಲ್ಲಿ ಯಾರೋ ಬಾವಿಗೆ ಧುಳುಮ್ಮನೆ ಜಿಗಿದು ಅರೆಕ್ಷಣದಲ್ಲಿ ಚೆಂಡಿನೊಂದಿಗೆ ವಾಪಾಸ್ಸು ಬರುತ್ತಿರುವುದನ್ನು ಕಂಡ ರಾಜ ಕುಮಾರಿ ನೋಡಿದಳು. ಅದೊಂದು ದೊಡ್ಡ ಕಪ್ಪೆ ! ‘ರಾಜಕುಮಾರಿ ಚೆಂಡು ತೆಗೆದುಕೋ ಪ್ರತಿಫಲವಾಗಿ ನನ್ನನ್ನು ಮದುವೆಯಾಗು ’ ಎಂದು ಹೇಳಿದ ಕಪ್ಪೆ ಚೆಂಡನ್ನು ನೀಡಿತು.
ರಾಜಕುಮಾರಿ ಅಸಹ್ಯದಿಂದ ನಕ್ಕಳು. ‘ಒಂದು ಕಪ್ಪೆಗೆ ನನ್ನಂಥ ಸುಂದರಿ ಹೆಂಡತಿ ಯಾಗುವುದೇ ? ಹೋಗು ಹೋಗು’ ಎಂದ ಚೆಂಡನ್ನು ತೆಗೆದುಕೊಂಡು ಹೊರಟು ಹೋದಳು. ಆದರೆ ಕಪ್ಪೆ ಬಿಡಲಿಲ್ಲ. ನೇರವಾಗಿ ರಾಜನ ಸಭೆಗೆ ಹೋಯಿತು. ರಾಜನ ಬಳಿ, ‘ದೊರೆಯೇ, ನಿಮ್ಮ ರಾಜ್ಯದಲ್ಲಿ ಕೊಟ್ಟ ಮಾತು ತಪ್ಪಿದವರನ್ನು ಏನು ಮಾಡುತ್ತೀರಿ ?’ ಎಂದು ಕೇಳಿತು.
‘ನಮ್ಮ ಬಂಧುಗಳಾದರೂ ಸರಿ,ಮಾತಿಗೆ ತಪ್ಪಿದವರಿಗೆ ಮರಣದಂಡನೆಯೇ ಶಿಕ್ಷೆ’ ಎಂದನು ರಾಜ. ‘ ನಿಮ್ಮ ಮಗಳು ನನಗೆ ಕೊಟ್ಟ ಮಾತು ತಪ್ಪಿದ್ದಾಳೆ. ಅವಳು ನನ್ನ ಇಚ್ಛೆಯಂತೆ ನನ್ನನ್ನು ಮದುವೆಯಾಗಬೇಕು. ಇಲ್ಲವಾದರೆ ನೀವು ಅವಳಿಗೆ ದಂಡನೆ ವಿಧಿಸಬೇಕು ಎಂದು ಕಪ್ಪೆ ನಡೆದ ವಿಷಯ ಹೇಳಿತು.
ನ್ಯಾಯವನ್ನು ತಪ್ಪದ ರಾಜ ಮಗಳನ್ನು ಕರೆಸಿ ವಿಚಾರಣೆ ಮಾಡಿದ. ಕಪ್ಪೆಯನ್ನು ಮದುವೆ ಯಾಗಲು ಆದೇಶ ನೀಡಿದ. ವಿಧಿಯಿಲ್ಲದೆ ರಾಜಕುಮಾರಿ ಕಪ್ಪೆಯೊಂದಿಗೆ ಮದುವೆಯಾ ದಳು. ಅದನ್ನು ತಮ್ಮ ಅಂತಃಪುರಕ್ಕೂ ಕರೆದು ಕೊಂಡು ಹೋದಳು. ಆದರೆ ಗಂಡನೆಂದು ಆದರಿಸಲಿಲ್ಲ, ಪ್ರೀತಿ ಮಾಡಲಿಲ್ಲ.
ಆದರೂ ಕಪ್ಪೆ ಠೀವಿಯಿಂದ ಅವಳ ಜೊತೆಗೆ ಹೋಗುತ್ತಾ, ಬರುತ್ತಾ ಇತ್ತು. ಹೀಗಿರಲು ಒಬ್ಬ ಶತ್ರುರಾಜ ಭಾರೀ ಸೈನ್ಯದೊಂದಿಗೆ ಬಂದು ಆ ರಾಜ್ಯಕ್ಕೆ ಮುತ್ತಿಗೆ ಹಾಕಿದ. ಅವನು ವಯಸ್ಸಿನಲ್ಲಿ ವೃದ್ಧನಾಗಿದ್ದ. ಅವನಿಗೆ ಒಂದು ಕಣ್ಣು ಇರಲಿಲ್ಲ. ‘ ನನ್ನ ಜೊತೆಗೆ ಹೋರಾಡಿ ಗೆದ್ದುಕೊಳ್ಳಿ. ಆದರೆ ನನ್ನನ್ನು ಎದುರಿಸುವ ನಿಮ್ಮಲ್ಲಿ ಇಲ್ಲವಾದರೆ, ನನಗೆ ನಿಮ್ಮ ರಾಜ್ಯ ಬೇಡ. ಬಂಗಾರ ಬೇಡ, ಸುಂದರಿಯಾದ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ’ ಎಂದು ಶತ್ರುರಾಜ ಕೇಳಿದ.
ಈ ಮಾತು ಕೇಳಿ ರಾಜನಿಗೆ ಕೋಪ ಬಂತು. ‘ಎಂತಹ ಹುಚ್ಚುತನವಿದು !! ನನ್ನ ಮಗಳಿಗೆ ಈಗಾಗಲೇ ವಿವಾಹವಾಗಿದೆ. ಅವಳಿಗೆ ಗಂಡನಿ ದ್ದಾನೆ. ಪುನಃ ಅವಳನ್ನು ನಿಮಗೆ ಕೊಡುವು ದಾದರೂ ಹೇಗೆ ?’ ಎಂದು ಕೇಳಿದ.
ಶತ್ರುರಾಜ ನಕ್ಕುಬಿಟ್ಟ. ‘ನನಗೆ ಈ ವಿಷಯ ಗೊತ್ತಿದೆ. ಒಂದು ಕಪ್ಪೆಯೊಂದಿಗೆ ಮನುಷ್ಯರ ಮದುವೆ ಆಗುವುದುಂಟೆ ?’ ಅದು ಮದು ವೆಯೇ ಅಲ್ಲ, ಅವಳನ್ನು ನನಗೇ ಕೊಟ್ಟುಬಿಡಿ ? ಎಂದ. ರಾಜನು ಈ ಮಾತಿಗೆ ಒಪ್ಪಲಿಲ್ಲ. ಶತ್ರುರಾಜ ಯುದ್ಧಕ್ಕೆ ನಿಂತ. ಅವನ ಸೇನೆಯನ್ನು ಗೆಲ್ಲಲು ರಾಜನಿಗೆ ಸಾಧ್ಯವೇ ಇರಲಿಲ್ಲ. ಈ ವಿಷಯ ತಿಳಿದು ರಾಜಕುಮಾರಿ ಅಳತೊಡಗಿ ದಳು. ಶತ್ರುರಾಜ ಗೆಲ್ಲುತ್ತಾನೆ. ನಾನು ಅವನ ವಶವಾಗುವ ಬದಲು ಸಾಯವುದೇ ಮೇಲು ಎಂದು ಹೇಳಿಕೊಂಡಳು.
ಆಗ ಕಪ್ಪೆ ‘ರಾಜಕುಮಾರಿ ಚಿಂತಿಸಬೇಡ. ಶತ್ರುವನ್ನು ನಾನು ಓಡಿಸುತ್ತೇನೆ. ನೋಡು ನನ್ನ ಪರಾಕ್ರಮ ಎಂದಿತು. ಅಂದು ರಾತ್ರಿ ಸಾವಿರಾರು ಕಪ್ಪೆಗಳು ಒಂದೇ ಸಮನೆ ಕೂಗಿ, ಕೂಗಿ ಮಳೆಯನ್ನು ಕರೆದವು. ಅದರಿಂದಾಗಿ ಅನಿರೀ ಕ್ಷಿತವಾಗಿ ಭಾರೀ ಮಳೆ ಸುರಿಯಿತು.
ಶತ್ರು ರಾಜನ ಶಸ್ತ್ರಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋದವು. ಯುದ್ದ ಮಾಡಲಾಗದೆ ಅವನು ಪಲಾಯನ ಮಾಡಿದ. ರಾಜಕುಮಾರಿಗೆ ಆದ ಸಂತೋಷ ಅಷ್ಟಿಷ್ಟಲ್ಲ’ ‘ನೀನು ನಿಜವಾದ ಗಂಡಸು ಕಣೋ’ ಎಂದು ಕಪ್ಪೆಯನ್ನು ಎತ್ತಿ ಮುತ್ತಿಟ್ಟಳು. ಮರುಕ್ಷಣವೇ ಕಪ್ಪೆ ಮಾಯವಾಗಿ ಅಲ್ಲೊಬ್ಬ ಸುಂದರನಾದ ರಾಜಕುಮಾರ ನಿಂತಿದ್ದ. ‘ರಾಜಕುಮಾರಿಗೆ ಆಶ್ಚರ್ಯ ವಾಯಿತು. ‘ಮಂತ್ರಿಯ ಕುತಂತ್ರದಿಂದಾಗಿ ಮಾಟಗಾರರು ನನ್ನನ್ನು ಮತ್ತು ನನ್ನ ನಿಷ್ಠಾವಂತ ಪ್ರಜೆಗಳನ್ನು ಕಪ್ಪೆಗಳನ್ನಾಗಿ ಮಾಡಿದ್ದರು. ರಾಜಕುಮಾರಿ ಯೊಬ್ಬಳು ಪ್ರೀತಿಯಿಂದ ಮುತ್ತಿಟ್ಟಾಗ ನಮ್ಮ ಈ ಜನ್ಮ ಹೋಗಿ ಮೊದಲಿನಂತಾಗುತ್ತೇವೆಂದು ಹೇಳಿದ್ದರು. ಈಗ ನಿನ್ನಿಂದಾಗಿ ನಾನು ಮರಳಿ ಮನುಷ್ಯನಾಗಿದ್ದೇನೆ. ಬಾ, ನನ್ನ ಅರಮನೆಗೆ ಹೋಗಿ ಅಲ್ಲಿ ಸುಖವಾಗಿ ಇರೋಣ’ ಎಂದು ಅವನು ಹೇಳಿದ.
-ಶಾಂತಪ್ರಿಯ

RELATED ARTICLES
- Advertisment -
Google search engine

Most Popular

Recent Comments