ಮಾರ್ಚ್ ತಿಂಗಳು ದಿನಾಂಕ 12 ರಿಂದ 18ರವರೆಗೆ ಗ್ಲಾಕೋಮಾ ಅರಿವಿಗಾಗಿ ಮಾಸಾಚರೆಣೆ. ಶಾಶ್ವತ ಅಂಧತ್ವಕ್ಕೆ ಗುರಿಯಾಗಿಸಬಲ್ಲ ಈ ಖಾಯಿಲೆಗೆ ಸೂಕ್ತ ಚಿಕಿತ್ಸೆ ಅತ್ಯಗತ್ಯ. ಗ್ಲಾಕೋಮಾ ಜಾಗೃತಿಯ ಸಪ್ತಾಹದ ಈ ಸಮಯದಲ್ಲಿ, ಗ್ಲಾಕೋಮಾದ ಬಗ್ಗೆ ನಿಮಗೊಂದಿಷ್ಟು ಅರಿವು ಮೂಡಿಸುವ ಮಾಹಿತಿ ಇಲ್ಲಿದೆ.
1.ಗ್ಲಾಕೋಮಾ ಎಂದರೇನು?
ಗ್ಲಾಕೋಮಾ ಎಂದರೆ ಹಲವಾರು ಕಾರಣ ಗಳಿಂದ ಕಣ್ಣಿನ ಒತ್ತಡ ಹೆಚ್ಚಾಗಿ ಅದರಿಂದ ಉಂಟಾ ಗುವ ಕಣ್ಣಿನ ನರದ ದೌರ್ಬಲ್ಯ ಅಥವಾ ತೊಂದರೆ.
ಕಣ್ಣಿನ ಒಳಗೆ ಜಲರಸಧಾತು(ಅಕ್ಯುಯಸ್) ಎಂಬ ದ್ರಾವಣವಿರುತದೆ ಅದು ಕಣ್ಣಿನ ಪಾಪೆ(ಐರಿಸ್) ಹಿಂದಿ ರುವ ಸಿಲಿಯರಿ ಬಾಡಿ ಎಂಬ ಸೂಕ್ಷ್ಮ ಗ್ರಂಥಿಗಳಿಂದ ಉತ್ಪತಿ ಗೊಂಡು ಕಣ್ಣಿನ ಗೊಂಬೆ ಮೂಲಕ ಹರಿದು ಕಾರ್ನಿಯಾ ಹಾಗು ಕಣ್ಣಿನ ಮಸೂರ (ಲೆನ್ಸ್)ಗಳಿಗೆ ಪೌಷ್ಟಿಕಾಂಶ ಒದಗಿಸಿ,ಕಾರ್ನಿಯಾ ಮತ್ತು ಐರಿಸ್ ಮಧ್ಯೆ ಇರುವ ಆಧಾರಪಟ್ಟಿಯ ಜಾಲಬಂಧ (ಟ್ರಬೆಕ್ಯುಲರ್ ಮೆಷ್ ವರ್ಕ್) ಎಂದು ಕರೆಯಲಾಗುವ ಒಂದು ಜರಡಿಯಂಥ ಭಾಗದಿಂದ ರಕ್ತಪ್ರವಾಹಕ್ಕೆ ಹಿಂದಿರುಗುತ್ತದೆ.”
ಈ ಜಾಲ ಬಂಧದಲ್ಲಿ ಯಾವುದೇ ಕಾರಣಕ್ಕಾಗಿ ಅಡಚಣೆ ಯಾಗುವಲ್ಲಿ ಇಲ್ಲವೆ ಅದು ಕಿರಿದಾಗುವಲ್ಲಿ ಕಣ್ಣಿನೊಳಗಿನ ಒತ್ತಡವು ಹೆಚ್ಚಾಗುವುದು ಮತ್ತು ಇದು ಕಟ್ಟಕಡೆಗೆ, ಕಣ್ಣಿನ ಹಿಂಭಾಗದಲ್ಲಿರುವ ಸೂಕ್ಷ್ಮವಾದ ನರತಂತುಗಳಿಗೆ ಹಾನಿಮಾಡಲಾರಂಭಿಸುತ್ತದೆ. ಈ ಸ್ಥಿತಿಯನ್ನು ತೆರೆದ ಕೋನದ ಗ್ಲಾಕೋಮಾ ಎಂದು ಕರೆಯಲಾಗುತ್ತದೆ ಮತ್ತು ಸುಮಾರು ೯೦ ಪ್ರತಿಶತ ಗ್ಲಾಕೋಮಾ ಕೇಸುಗಳಿಗೆ ಇದೇ ಕಾರಣ.
ಕಣ್ಣನ್ನು ಒಂದು ಬಲೂನಿಗೆ ಹೋಲಿಸಿದರೆ ಅದರಲ್ಲಿ ಒತ್ತಡ ಜಾಸ್ತಿಯಾದಾಗ ಅದು ಹೇಗೆ ಅದರ ದುರ್ಬಲ ಜಾಗದಿಂದ ಒಡೆಯು ತ್ತದೆಯೋ ಹಾಗೆ ಕಣ್ಣಿಗೆ ಅದರ ಆಪ್ಟಿಕ್ ನರವು ಶ್ವೇತಾಕ್ಷಿ ಪಟಲ(ಸ್ಕಿಳೀರ )ವನ್ನು ಹಾದು ಹೋಗುವ ಮಾರ್ಗವು ಪರಿಣಮಿಸುತ್ತದೆ. ಆಪ್ಟಿಕ್‌ನರ ಎಂಬುದು ಕಣ್ಣಿನ ದೃಷ್ಟಿವಾಹಕ ಇದು ಅಕ್ಷಿಪಟಲದಿಂದ ನಮ್ಮ ಮೆದುಳಿಗೆ ದೃಶ್ಯ ಸಂದೇಶಗಳನ್ನು ರವಾನಿಸುತ್ತದೆ ಒಂದೊಂದು ನರವು ಹತ್ತು ಲಕ್ಷಕ್ಕೂ ಮೇಲ್ಪಟ್ಟು ಸೂಕ್ಷ್ಮವಾದ ನರತಂತುಗಳಿಂದ ಕೂಡಿದೆ ಇವು ತುಂಬ ಸೂಕ್ಷ್ಮ ಹಾಗೂ ತೆಳ್ಳಗೆ ಇರುವುದರಿಂದ ಕಣ್ಣಿನ ಒತ್ತಡ ಹೆಚ್ಚಾದಾಗ ಇವು ಒತ್ತಲ್ಪಟ್ಟು ಕ್ರಮೇಣ ನಶಿಸಲ್ಪಡುತ್ತದೆ.
ಆಪ್ಟಿಕ್ ನರದ ಸೂಕ್ಷ್ಮ ತಂತುಗಳು ನಶಿಸಿದ ಮೇಲೆ ಇದು ಸರಿಪಡಿಸಲಾಗದ ಶಾಶ್ವತ ಕುರುಡನ್ನು ಉಂಟು ಮಾಡುತ್ತದೆ.ಸೂಕ್ತ ಸಮಯದಲ್ಲಿ ತಪಾಸಣೆ ಹಾಗೂ ಚಿಕಿತ್ಸೆಯಿಂದ ಮಾತ್ರ ಇದರಿಂದ ಉಂಟಾಗುವ ಕುರುಡುತನವನ್ನು ತಡೆ
2. ಗ್ಲಾಕೋಮಾದಲ್ಲಿ ಎಷ್ಟು ಬಗೆ ?
ಗ್ಲಾಕೋಮಾದಲ್ಲಿ ಹಲವಾರು ಬಗೆಯಿದೆ ಆದರೆ ಮುಖ್ಯವಾಗಿ
1)ಕೋನ ತೆರೆದ ಗ್ಲಾಕೋಮಾ(ಓಪನ್ ಆಂಗಲ್ ಗ್ಲಾಕೋಮಾ) ತುಂಬಾ ಸಾಮಾನ್ಯವಾಗಿ ಕಂಡು ಬರುವಂಥಹುದು.
2)ಕೋನ ಮುಚ್ಚಿದ ಗ್ಲಾಕೋಮಾ (ಕ್ಲೋಸ್ಡ್ ಆಂಗಲ್ ಗ್ಲಾಕೋಮಾ)
ಈ ರೋಗದ ಒಂದು ವಿರಳವಾದ ರೂಪವನ್ನು ತೀಕ್ಷ್ಣ ವಾದ ಗ್ಲಾಕೋಮಾ ಇಲ್ಲವೆ ಸಂಕುಚಿತ ಕೋನದ ಗ್ಲಾಕೋಮಾ ಎಂದು ಕರೆಯಲಾಗುತ್ತದೆ. ಈ ವಿಧದ ಗ್ಲಾಕೋಮಾವು ತೆರೆದ ಕೋನದ ಗ್ಲಾಕೋಮಾದಂತಿರದೆ, ಕಣ್ಣಿನಲ್ಲಿ ಒತ್ತಡವು ತಟ್ಟನೆ ಹೆಚ್ಚಾಗುತ್ತದೆ. ಇದರಿಂದಾಗಿ ಕಣ್ಣಿನಲ್ಲಿ ತೀವ್ರ ನೋವುಂಟಾಗಿ, ಜೊತೆಯಲ್ಲಿ ದೃಷ್ಟಿಯು ಮಂಜಾಗುತ್ತದೆ ಮತ್ತು ವಾಕರಿಕೆಯು ಉಂಟಾಗುತ್ತದೆ. ಈ ರೋಗಲಕ್ಷಣಗಳು ಆರಂಭವಾಗಿ ಕೆಲವೇ ತಾಸುಗಳೊಳಗೆ ಚಿಕಿತ್ಸೆಯನ್ನು ಪಡೆಯದಿರುವಲ್ಲಿ ಅದು ಅಂಧತ್ವವನ್ನು ಉಂಟು ಮಾಡಬಲ್ಲದು. ಇನ್ನೊಂದು ರೀತಿಯ ಗ್ಲಾಕೋಮಾವನ್ನು, ದ್ವಿತೀಯ ಗ್ಲಾಕೋಮಾ ಎಂದು ಕರೆಯಲಾಗುತ್ತದೆ. ಈ ಹೆಸರೇ ಸೂಚಿಸುವಂತೆ ಈ ವಿಧದ ಗ್ಲಾಕೋಮಾವು ಟ್ಯೂಮರ್‌ಗಳು, ಮೋತಿಬಿಂದು ಇಲ್ಲವೆ ಕಣ್ಣಿನ ಗಾಯ ಗಳಂಥ ಇತರ ಸ್ಥಿತಿಗಳಿಂದಾಗಿ ಉಂಟಾಗುತ್ತದೆ. ಹುಟ್ಟು ಗ್ಲಾಕೋಮಾ ಎಂದು ಜ್ಞಾತವಾಗಿರುವ ನಾಲ್ಕನೆಯ ವಿಧದ ಗ್ಲಾಕೋಮಾದಿಂದ ಬಾಧಿತರಾಗಿರುವ ಜನರ ಸಂಖ್ಯೆ ಕಡಿಮೆ. ಈ ವಿಧದ ಗ್ಲಾಕೋಮಾವು ಹುಟ್ಟಿನಿಂದಲೇ ಇರು ತ್ತದೆ ಇಲ್ಲವೆ ಸ್ವಲ್ಪ ಸಮಯದ ಬಳಿಕ ಆರಂಭವಾಗುತ್ತದೆ. ಇದರಿಂದಾಗಿ ಮಗುವಿಗೆ ದೊಡ್ಡದಾದ ಕಣ್ಣುಗುಡ್ಡೆಗಳಿರು ತ್ತವೆ ಮತ್ತು ಬೆಳಕನ್ನು ನೋಡಲು ಹೆಚ್ಚೆಚ್ಚು ಕಷ್ಟವಾಗುತ್ತದೆ.
3. ಗ್ಲಾಕೋಮಾ ಯಾರಲ್ಲಿ ಕಂಡು ಬರಬಹುದು
೧)45 ವರ್ಷ ಮೇಲ್ಪಟ್ಟವರು
ಗ್ಲಾಕೋಮಾ ಹುಟ್ಟಿದಾಗಿನಿಂದ ಹಿಡಿದು ಎಲ್ಲ ವಯಸ್ಕ ರಲ್ಲೂ ಇರಬಹುದು ಆದರೆ ಸಾಮಾನ್ಯವಾಗಿ ವಯಸ್ಸು ಹೆಚ್ಚಾದಂತೆ ಇದರ ಅಪಾಯ ಹೆಚ್ಚುತ್ತದೆ
೨) ಗ್ಲಾಕೋಮಾ ಇರುವ ಕೌಟುಂಬಿಕ ಹಿನ್ನಲೆ
ಗ್ಲಾಕೋಮಾ ಖಾಯಿಲೆಯು ಅನುವಂಶೀಯವಾಗಿ ಸಹ ಬರಬಹುದು ಆದರೆ ಬಂದೆ ಬರುತ್ತದೆ ಎನ್ನುವಂತಿಲ್ಲ
೩)ಕಣ್ಣಿನ ಒತ್ತಡ ಜಾಸ್ತಿ ಇರುವವರು
ಸಾಮಾನ್ಯವಾಗಿ ಕಣ್ಣಿನ ಒತ್ತಡ 21 mm of hg ಇರುತ್ತದೆ ಇದಕ್ಕಿಂತ ಹೆಚ್ಚಿನ ಒತ್ತಡ ಸತತವಾಗಿ ಇದ್ದರೆ ಕಣ್ಣಿನ ನರದ ದೋಷವುಂಟಾಗುವ ಸಾಧ್ಯತೆ ಹೆಚ್ಚು
೩)ಆಫ್ರಿಕನ್ ಅಮೆರಿಕನ್‌ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವನ್ನು ಹೊರತುಪಡಿಸಿ ಮಧುಮೇಹಿಗಳು, ದೂರದೃಷ್ಟಿ ದೋಷ ವುಳ್ಳವರು (ಮಯೋಪಿಕ್ಸ್),ದೀರ್ಘಾವಧಿ ಸ್ಟೀ ರಾಯ್ಡ್ ಉಪಯೋಗಿಸುವುದು ,ಕಣ್ಣಿಗೆ ಪೆಟ್ಟಾದ ವರುಗಳಿಗೆ ಗ್ಲಾಕೋಮಾ ಖಾಯಿಲೆ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ
4.ಗ್ಲಾಕೋಮಾ ಅರಿವು ಏಕೆ ಮುಖ್ಯ
ಗ್ಲಾಕೋಮಾ ಖಾಯಿಲೆಯ ಬಗ್ಗೆ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಅರಿವಿರಬೇಕು. ಮೇಲ್ಕಂಡ ಗ್ಲಾಕೋಮಾ ಸಂಭವನೀಯ ಅಪಾಯವುಳ್ಳ ವರು (ರಿಸ್ಕ್ ಫ್ಯಾಕ್ಟರ್ಸ್ )ನಿಯಮಿತವಾಗಿ ಕಾಲ ಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡಿಸು ವುದರಿಂದ ಮಾತ್ರ ಈ ರೋಗವನ್ನು ತಡೆಗಟ್ಟಬಹುದುಗ್ಲಾಕೋಮಾ ಎಂಬ ಖಾಯಿಲೆಗೆ ಯಾವುದೇ ಗುಣ ಲಕ್ಷಣಗಳಿಲ್ಲ ಈ ಸಮಸ್ಯೆ ಇದ್ದ ರೋಗಿಗೆ ಸಮಸ್ಯೆಯು ಕೊನೆಯ ಹಂತಕ್ಕೆ ಪ್ರಗತಿ ಹೊಂದುವವರೆಗೆ ಅಂದರೆ ದೃಷ್ಠಿಕ್ಷೇತ್ರ (ಫೀಲ್ಡ್ ಆಫ್ ವಿಷನ್ )ಕಿರಿದಾಗುವವರೆಗೂ ತಿಳಿಯಪಡುವುದಿಲ್ಲ. ಹಾಗೆ ಕೊನೆಯ ಹಂತಕ್ಕೆ ತಲುಪಿದ ಗ್ಲಾಕೋಮಾ ಸಮಸ್ಯೆಗೆ ಯಾವುದೇ ಚಿಕಿತ್ಸೆಯಿಂದ ಪರಿಹಾರ ಅಸಾಧ್ಯ ಹಾಗಾಗಿ ಕಾಲ ಕಾಲಕ್ಕೆ ಈ ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದು ಹಾಗು ಮುನ್ನೆಚ್ಚರಿಕೆ ಕ್ರಮವಾಗಿ ಈ ಗ್ಲಾಕೋಮಾ ಸಂಭವನೀಯತೆವುಳ್ಳವರು (ರಿಸ್ಕ್ ಫ್ಯಾಕ್ಟರ್ಸ್ ) ವರ್ಷಕೊಮ್ಮೆಯಾದರು ಕಣ್ಣಿನ ತಜ್ಞ ವೈದ್ಯರಿಂದ ತಪಾಸಣೆ ಮಾಡಿ ಸುವುದು ಹಾಗೆ ತಪಾಸಣೆ ಮಾಡಿಸಿದಾಗ ಗ್ಲಾಕೋಮಾ ಸಮಸ್ಯೆ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆಯನ್ನು ಆದಷ್ಟು ಬೇಗ ಪ್ರಾರಂಭ ಮಾಡಿದ್ದೇ ಆದರೆ ಸಂಭವನೀಯ ಶಾಶ್ವತ ಅಂಧತ್ವವನ್ನು ತಡೆಗಟ್ಟಬಹುದು
5.ಗ್ಲಾಕೋಮಾ:ರೋಗ ನಿರ್ಣಯ ಹೇಗೆ
ಗ್ಲಾಕೋಮಾ ತಪಾಸಣೆಗೆ ಹಲವಾರು ಪರೀಕ್ಷೆಗಳು ಲಭ್ಯವಿದೆ ಅದರಲ್ಲಿ ಪ್ರಮುಖವಾದವು
ಟೊನೊಮೇಟ್ರೀ : ಕಣ್ಣಿನ ಒತ್ತಡ ಪರೀಕ್ಷೆ ಮಾಡುವ ಸಾಧನ ಇದರಿಂದ ಕಣ್ಣಿನ ಒತ್ತಡ ಪರೀಕ್ಷೆ ಮಾಡಲಾಗುತ್ತದೆ
ವೀಕ್ಷಣಾ ಕ್ಷೇತ್ರ ಪರೀಕ್ಷೆ (ವಿಶುಯಲ್ ಫೀಲ್ಡ್ ಟೆಸ್ಟಿಂಗ್ ): ಇದರಿಂದ ಗ್ಲಾಕೋಮಾದಿಂದ ಉಂಟಾಗಿರಬಹುದಾದ ನರದೋಷವನ್ನು ಪತ್ತೆಮಾಡಬಹುದು ಫೀಲ್ಡ್ ಆಫ್ ವಿಷನ್ ಕಿರಿದಾಗಿರುವ ಲಕ್ಷಣ ಇದ್ದರೆ ಗ್ಲಾಕೋಮಾ ಸಮಸ್ಯೆ ದೃಢ ಪಡುತ್ತದೆ
6.ಗ್ಲಾಕೋಮಾ ಚಿಕಿತ್ಸೆ ಹೇಗೆ:
ಗ್ಲಾಕೋಮಾ ಖಾಯಿಲೆಗೆ ಕಣ್ಣಿನ ಡ್ರಾಪ್ಸ್ ,ಲೇಸರ್ ಹಾಗೂ ಶಸ್ತ್ರಚಿಕಿತ್ಸೆಗಳ ವಿಧಾನದಿಂದ ಉಪಚರಿಸಬಹುದು ಒಟ್ಟಾರೆ ಚಿಕಿತ್ಸೆಯ ಉದ್ದೇಶ ಗ್ಲಾಕೋಮಾದಿಂದ ಆಗುವ ಹಾನಿಯನ್ನು ಹಾಗೂ ಇದರಿಂದಾಗುವ ಶಾಶ್ವತ ದೃಷ್ಟಿದೋಷವನ್ನು ತಡೆಗಟ್ಟುವುದು
ಕಣ್ಣಿನ ಡ್ರಾಪ್ಸ್: ಹಲವಾರು ವಿಧದ ಔಷದವುಳ್ಳ ಡ್ರಾಪ್ಸ್‌ಗಳು ಲಭ್ಯ ,ಇತ್ತೀಚಿನ ದಿನಗಳಲ್ಲಿ ಅತ್ಯಂತ ಪರಿ ಣಾಮಕಾರಿ ಔಷಧಿಗಳು ಲಭ್ಯವಿದ್ದು ಸಂಭಾವ್ಯ ಶಸ್ತ್ರ ಚಿಕಿತ್ಸೆಯ ಅವಶ್ಯಕತೆಯನ್ನು ದೂರ ಮಾಡಿದೆ ಮತ್ತು ಹಾಗೆ
ಡ್ರಾಪ್ಸ್ ಗಳನ್ನೂ ಉಪಯೋಗಿಸುವಾಗ ಸಮಯಕ್ಕೆ ಸರಿ ಯಾಗಿ ಒಮ್ಮೆಯೂ ತಪ್ಪಿಸದೇ ಉಪಯೋಗಿಸಬೇಕು
ಲೇಸರ್ ಚಿಕಿತ್ಸೆ :ಇದರಲ್ಲಿ ಎರಡು ಬಗೆ ಇದೆ ಒಂದರಲ್ಲಿ ಕೋನ ಮುಚ್ಚಿದ ಗ್ಲಾಕೋಮಾದಲ್ಲಿ ಇರಿಡೊಟೋಮಿ ಮಾಡಲು ಉಪಯೋಗಿಸುತ್ತಾರೆ .ಇದರಲ್ಲಿ ಕಣ್ಣಿನ ಪಾಪೆ( ಐರಿಸ್ ) ಪರಿಧಿಯಲ್ಲಿ ರಂಧ್ರ ಮಾಡಲಾಗುತ್ತದೆ ಎರಡನೆಯದರಲ್ಲಿ ಟ್ರಬೇಕ್ಯುಲೋಪ್ಲಾಸ್ಟಿ ಎಂಬ ಚಿಕಿತ್ಸೆ ಮಾಡಲಾಗುತ್ತದೆ
ಶಸ್ತ್ರಚಿಕಿತ್ಸೆ : ಇದರಲ್ಲಿ ಟ್ರಬೇಕ್ಯುಲೆಕ್ಟಮಿ ಮತ್ತು ಸುಧಾರಿತ ಗ್ಲಾಕೋಮಾ (ಗ್ಲಾಕೋಮಾ ವಾಲ್ವು)ಹಾಕಿ ಮಾಡುವ ವಿಧಾನ ಇದೆ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸಿದ ರೋಗಿಗಳಿಗೆ ಇದರಿಂದ ಶಾಶ್ವತವಾದ ಪರಿಹಾರ ಸಾಧ್ಯ.
ಡಾ||ಕಾಂತರಾಜು ಎಸ್., MBBS, DOMS
ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗ