ಹೆಣ್ಣೊಂದು ಕಲಿತರೆ…

ಲೇಖನ : ಸೌಮ್ಯ ಗಿರೀಶ್

ಹೆಣ್ಣೊಂದು ಕಲಿತರೆ…

PC : Internet

ಒಂದು ಹೆಣ್ಣು ಹುಟ್ಟುವ ಮುನ್ನವೇ ಶೋಷಣೆ ಎಂಬ ಪದ ಅಂಟಿಕೊಂಡೇ ಬೆಳೆಯುವ ಸಂಪ್ರದಾಯವನ್ನು ಮೆಟ್ಟಿ ನಿಲ್ಲುವ ಕಾಲಘಟ್ಟದಲ್ಲಿದ್ದೇವೆ. ಭ್ರೂಣ ಹತ್ಯೆಯ ವಿರುದ್ಧ ಒಂದು ದೊಡ್ಡ ಅಲೆಯೇ ಎದ್ದಿದೆ. ಜನರು ಜಾಗೃತರಾಗುತ್ತಿದ್ದಾರೆ. ಇಷ್ಟಾದರೆ ಸಾಲದು ಸಮಾಜದ ಸಮತೋಲನ ಕಾಪಾಡಲು ಹೆಣ್ಣು ಶಿಶು ಮುಖ್ಯವಲ್ಲ, ಬದಲಾಗಿ ಒಂದು ಸದೃಢ ಸಮಾ ಜಕ್ಕೂ ಹೆಣ್ಣಿನ ಅವಶ್ಯಕತೆ ಅಷ್ಟೇ ಇದೆ.

ಹೆಣ್ಣಿಗೆ ಸಮಾನ ಹಕ್ಕು ಎಂದು ಕೂಗಿ ಹೇಳುವ ಜನರ ಮನೆಯಲ್ಲೇ ಮಹಿಳೆಗೆ ನ್ಯಾಯ ದೊರಕದ ಎಷ್ಟೋ ನಿದರ್ಶನಗಳು ದೀಪದ ಕೆಳಗಿನ ಕತ್ತಲೆ ಎಂಬಂತಾಗಿದೆ. ಜಾಗತೀಕರಣ ಎಂಬ ದೊಡ್ಡ ಅಲೆ ಎದ್ದಿರುವ ಈ ಹೊತ್ತಿನಲ್ಲಿ ಉಡುಗೆ, ತೊಡುಗೆ, ಆಹಾರ ಪದ್ಧತಿಗಳನ್ನು ಅನುಸರಿಸಿದರೆ ಸಾಲದು. ಅವರು ಹೆಣ್ಣಿಗೆ ನೀಡುವ ಸ್ಥಾನಮಾನಗಳನ್ನು ನೋಡಿ ಕಲಿಯುವುದೂ ಕೂಡ ಬಹಳಷ್ಟಿದೆ.

ನಿಮ್ಮ ಮನೆಯ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಪ್ರಾರಂಭ ವಾಗು ತ್ತದೆ ಹೆಣ್ಣನ್ನು ರೂಪಿಸುವ ಕಾರ್ಯ. ಮನೆ, ಸಂಸಾರ, ಗಂಡ, ಮಕ್ಕಳು ಇಷ್ಟಕ್ಕೇ ಸೀಮಿತವಾಗದೆ ಹೆಣ್ಣು ನಾನಾ ಕ್ಷೇತ್ರಗಳತ್ತ ಮುಖ ಮಾಡ ಬೇಕಾದರೆ ವಿದ್ಯೆ ಅತ್ಯವಶ್ಯಕ. ಕಟ್ಟ ಕಡೆಯ ಹಳ್ಳಿಯಲ್ಲಿರುವ ಹೆಣ್ಣು ಮಗಳೂ ಕೂಡ ಇಂದು ಸ್ತ್ರೀಶಕ್ತಿ, ಸ್ವಯಂ ಉದ್ಯೋಗ ಎಂದು ಸಬಲೀ ಕರಣದತ್ತ ಚಿತ್ತ ಹರಿಸಿದ್ದಾಳೆ.

ಇಂತಹ ಸಮಯದಲ್ಲಿ ಶಿಕ್ಷಿತ ವರ್ಗವು ತಮ್ಮ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದ ಮಹತ್ವ ತಿಳಿಸಿ, ಐಎಎಸ್, ಐಪಿಎಸ್‌ನಂತಹ ಸೇವಾ ಹುದ್ದೆಗಳತ್ತ ಚಿತ್ತ ಹರಿಸುವಂತೆ ಮಾಡುವುದು ಇಂದು ಬಹಳ ಅವಶ್ಯಕವಾಗಿದೆ. ಹೆಣ್ಣು ಎಂದ ಕೂಡಲೆ ಅವಳನ್ನು ಭೋಗದ ವಸ್ತುವಾಗಿ ಅಥವಾ ಅವಳು ಅಡುಗೆಮನೆಗೆ ಸೀಮಿತ ಎಂಬ ಭಾವನೆ ದೂರಾಗಿ ಅವಳನ್ನು ಬೆಂಬಲಿಸು ವುದರ ಜೊತೆಗೆ ಅವಳಿಗೆ ನಿರ್ಧಾರದ ಸ್ವಾತಂತ್ರ್ಯವನ್ನು ನೀಡುವ ಅವಶ್ಯಕತೆ ಬಹಳಷ್ಟಿದೆ.
ಮನೆಯ ಹಣಕಾಸು ನಿರ್ವಹಣೆ ಮಾಡಬಲ್ಲ ಹೆಣ್ಣು ಕಚೇರಿಯಲ್ಲಿ ಹಣಕಾಸಿನ ವ್ಯವಹಾರವನ್ನು ಅಷ್ಟೇ ಸುಲಭವಾಗಿ ನೆರವೇರಿಸಬಲ್ಲಳು, ಮನೆಯಲ್ಲಿನ ಕಲಹಗಳನ್ನು ತನ್ನ ತರ್ಕದಿಂದ ಗೆಲ್ಲಬಲ್ಲ ಹೆಣ್ಣು ಒಬ್ಬ ವಕೀಲೆಯಾಗಿ ಗೆಲ್ಲಬಲ್ಲಳು, ಕುಟುಂ ಬದ ಆರೋಗ್ಯ ಕಾಯುವ ಹೆಣ್ಣು ವೈದ್ಯೆಯಾಗಿ, ಸುಶೃಷಕಿಯಾಗಬ ಹುದು, ತನ್ನ ಮಕ್ಕಳಿಗೆ ಪಾಠ ಹೇಳುವ ಹೆಣ್ಣು ನೂರಾರು ಮಕ್ಕಳಿಗೆ ವಿದ್ಯೆ ನೀಡುವ ಶಿಕ್ಷಕಿಯಾಗಬಹುದು, ಮಕ್ಕಳ ಒಂದಿಷ್ಟು ಚಲನವಲನ ದಲ್ಲಾಗುವ ಬದಲಾವಣೆಯನ್ನು ಗೂಢಾಚಾರಿಯಂತೆ ಕಂಡುಹಿಡಿಯ ಬಲ್ಲ ಮಹಿಳೆ ಒಬ್ಬ ದಕ್ಷ ಅಧಿಕಾರಿಯಾ ಗಬಹುದು. ಇವುಗಳು ಇವಳ ಪ್ರತಿ ನಿತ್ಯದ ಕೆಲಸಗಳಾದರೂ ಇವೆಲ್ಲವೂ ಅವಳಲ್ಲಿರುವ ಸಾಮರ್ಥ್ಯ ವನ್ನು ತೋರುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹೆಣ್ಣು ಮಕ್ಕಳನ್ನು ಹೆಚ್ಚು ಶಕ್ತರಾಗಿ, ಆತ್ಮನಂಬಿಕೆ, ಆತ್ಮಗೌರವವಿರುವ ವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದಾರಿ ಪ್ರತಿಯೊಂದು ಕುಟುಂಬದ್ದಾಗಿದೆ. ಹೆಣ್ಣೊಂದು ಕಲಿತರೆ ಊರೊಂದು ಕಲಿತಂತೆ ಎಂಬ ನಾಣ್ನುಡಿ ಇದೆ. ಅದು ಅಕ್ಷರಶಃ ನಿಜ ವಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿ ಇದೆ. ಅದು ಅಕ್ಷರಶಃ ನಿಜವಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ.