ಅಂದಾಜು ರೂ.1,35,000 ಮೌಲ್ಯದ ಒಣ ಗಾಂಜಾ ವಶ
ಶಿವಮೊಗ್ಗ: ನಿನ್ನೆ ಮದ್ಯಾಹ್ನ ನಗರದ ಸಹ್ಯಾದ್ರಿ ಕಾಲೇಜ್ ಹಿಂಭಾಗದ ಮೊಟಾಳು ಚೌಡಮ್ಮ ದೇವಸ್ಥಾನದ ಹತ್ತಿರದ ಸೇತುವೆಯ ಮೇಲೆ ಮತ್ತೂರು ಕಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ 04 ಜನ ಆಸಾಮಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳಿಂದ ಅಂದಾಜು ರೂ.1,35,000 ಮೌಲ್ಯದ 1 ಕೆಜಿ 65 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಜಯನಗರ ಪೊಲೀಸ್ ಠಾಣೆ [ಪ್ರಭಾರ] ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆ ಪಿಐ ಸಿದ್ದೇಗೌಡ.ಹೆಚ್.ಎಂ ಮತ್ತು ಸಿ.ಇ.ಎನ್ ಕ್ರೈಂ ಪೋಲೀಸ್ ಠಾಣೆ ಪಿಎಸ್‍ಐ ಬಸವರಾಜ ಬಿರಾದಾರ ಅವರ ನೇತೃತ್ವದ ಸಿಬ್ಬಂದಿಗಳ ತಂಡಗಳಿಂದ ಸ್ಥಳಕ್ಕೆ ಹೋಗಿ ದಾಳಿ ನಡೆಸಲಾಗಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಸೈಯದ್ ಸಲೇಹ (28 ವರ್ಷ) ಮಕಾನ್ ಕಟ್ಟೆ ತಡಸ ಗ್ರಾಮ ಭದ್ರಾವತಿ, ಮಹಮದ್ ಮುಸ್ತಪ (25 ವರ್ಷ) ಮೊಮ್ಮಿನ ಮೊಹಲ್ಲ ಅನ್ವರ್ ಕಾಲೋನಿ, ಭದ್ರವಾತಿ, ಮುಬಾರಕ್ (27 ವರ್ಷ) ನೆಹರು ನಗರ, ಭದ್ರಾವತಿ ಮತ್ತು ನ್ಯಾಮತ್ ಖಾನ್ (27 ವರ್ಷ) ಜಟ್‍ಪಟ್ ನಗರ ಪಾರ್ಕ್ ಹತ್ತಿರ ಭದ್ರಾವತಿ ಇವರನ್ನು ಬಂಧಿಸಿದೆ.
ಆರೋಪಿಗಳಿಂದ ಅಂದಾಜು ಮೌಲ್ಯ ರೂ.1,35,000 ಗಳ 1 ಕೆಜಿ 65 ಗ್ರಾಂ ತೂಕದ ಒಣ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು, ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.