ಬೆಳೆ ವಿಮೆ ಮಾಡಿಸಿ ಪ್ರಯೋಜನ ಪಡೆಯಿರಿ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಜಿ.ಪಂ. ಸಿಇಓ ರಾಕೇಶ್‌ಕುಮಾರ್

ಶಿವಮೊಗ್ಗ : ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಎಲ್ಲಾ ರೈತರು ಬೆಳೆ ವಿಮೆ ಮಾಡಿಸಿ ಗರಿಷ್ಟ ಪ್ರಯೋಜನ ಪಡೆಯುವಂತೆ ಜಿ.ಪಂ. ಸಿಇಓ ರಾಕೇಶ್ ಕುಮಾರ್ ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆ ವಿಮೆ ಯೋಜನೆ ಅನುಷ್ಟಾನ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ ಒಳ ಪಡಲು ರೈತರು ಆಸಕ್ತಿ ತೋರಬೇಕು. ಅನಿಶ್ಚಿತ ಕೃಷಿಯಲ್ಲಿ ನಿಶ್ಚಿತ ಆದಾಯ ಖಾತ್ರಿಪಡಿಸುವ ಉದೇಶದಿಂದ ಫಸಲ್ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಈ ಕುರಿತು ರೈತರಲ್ಲಿ ಅರಿವು ಮೂಡಿ ಸುವ ಕಾರ್ಯವನ್ನು ಗ್ರಾಮ ಪಂಚಾ ಯತ್ ಮಟ್ಟದಲ್ಲಿ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ಕಿರಣ್‌ಕುಮಾರ್ ಮಾತನಾಡಿ, ಜಿಲ್ಲೆಯ ೧೩ ಹೋಬಳಿಗಳ ೬೨೭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬಾರಿ ಖಾರಿಫ್ ಅವಧಿಯಲ್ಲಿ ಒಟ್ಟು ೩೦೫೦೦ ಹೆಕ್ಟೇರ್ ಪ್ರದೇಶವನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವ ಗುರಿಯನ್ನು ಹೊಂದಲಾಗಿದ್ದು ೨೦೫ ಕೋಟಿ ರೂ. ವಿಮೆ ಅಂದಾಜಿಸಲಾಗಿದೆ. ೨೦೧೬ರ ಖಾರಿಫ್ ಅವಧಿಯಲ್ಲಿ ಜಿಲ್ಲೆಯಲ್ಲಿ ೨೧೦೪೧ ರೈತರಿಗೆ ೩೮೬೦ ಲಕ್ಷ ರೂ. ಬೆಳೆ ವಿಮೆ ಪಾವತಿಸಲಾಗಿದ್ದು ಇನ್ನೂ ೧೫೪೦ ಪ್ರಕರಣ ಗಳು ಪಾವತಿಗೆ ಬಾಕಿ ಇವೆ. ೨೦೧೭ನೇ ಸಾಲಿನಲ್ಲಿ ೨೪೬೦೦ ರೈತ ಫಲಾನುಭವಿ ಗಳ ೩೫೮೬ಲಕ್ಷ ರೂ. ವಿಮಾ ಮೊತ್ತ ಪಾವತಿಸಬೇಕಾಗಿದೆ ಎಂದು ತಿಳಿಸಿದರು.
ವಿಮಾ ಯೋಜನಾ ವಿವರ: ಹೋಬಳಿ ಮಟ್ಟಕ್ಕೆ ಒಳಗೊಂಡಿರುವ ಬೆಳೆಗಳ ಪಟ್ಟಿ ಈ ರೀತಿ ಇದೆ. ಹಾರನಹಳ್ಳಿ, ಹೊಳಲೂರು, ಕುಂಸಿ, ನಿಧಿಗೆ, ಶಿವಮೊಗ್ಗ, ಭದ್ರಾವತಿ, ಕೂಡ್ಲಿಗೆರೆ, ಅಂಜನಾಪುರ, ಹೊಸೂರು, ತಾಳಗುಂದ ಮತ್ತು ಅನವಟ್ಟಿ ಮಳೆ ಆಶ್ರಿತ ರಾಗಿ ಮತ್ತು ಹೊಸೂರು ಹೋಬಳಿಯಲ್ಲಿ ಮಳೆ ಆಶ್ರಿತ ಜೋಳ ನಿಗದಿಪಡಿಸಲಾಗಿದೆ.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಪಹಣಿ/ಖಾತೆ/ಪಾಸ್ ಪುಸ್ತಕ/ಕಂದಾಯ ರಸೀದಿ ಸಲ್ಲಿಸಬೇಕು. ಪ್ರಸಕ್ತ ಸಾಲು ಹಾಗೂ ಹಂಗಾಮಿನಲ್ಲಿ ಅಧಿಸೂಚಿತ ಬೆಳೆಗಳಿಗೆ ಸಾಲ ಮಂಜೂರಾಗಿದ್ದರೆ ಅಂತಹ ರೈತರು ಕಡ್ಡಾಯವಾಗಿ ಯೋಜನೆಗೆ ಒಳಪಡುತ್ತಾರೆ. ಮುಂಗಾರು ಹಂಗಾಮಿ ನಲ್ಲಿ ಇಂಡಿಮ್ನಿಟಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ.೯೦ ಹಾಗೂ ಮಳೆ ಆಶ್ರಿತ ಬೆಳೆಗಳಿಗೆ ಶೇ.೮೦ ನಿಗದಿಪಡಿಸಲಾಗಿದೆ.

SHARE
Previous article12 JUNE 2018
Next article13 JUNE 2018

LEAVE A REPLY

Please enter your comment!
Please enter your name here