Thursday, December 5, 2024
Google search engine
Homeಇ-ಪತ್ರಿಕೆರಂಗಾಯಣದಿಂದ ಜೂ.16ಕ್ಕೆ ಗೋರ್‌ ಮಾಟಿ ನಾಟಕ

ರಂಗಾಯಣದಿಂದ ಜೂ.16ಕ್ಕೆ ಗೋರ್‌ ಮಾಟಿ ನಾಟಕ

ರಂಗಮಂದಿರದಲ್ಲಿ ಸಂಜೆ 6:30ಕ್ಕೆ ಪ್ರದರ್ಶನ ಆರಂಭ

ಶಿವಮೊಗ್ಗ : ಮೈಸೂರು ರಂಗಾಯಣದಿಂದ ಜೂ.16ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 6:30ಕ್ಕೆ “ಗೋರ್‌ಮಾಟಿ” ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗನಿರ್ದೇಶಕ ಹಾಲಸ್ವಾಮಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋರ್‌ಮಾಟಿ ನಾಟಕವು ಬಂಜಾರ ಜನಾಂಗದ ಕಲೆ, ಸಂಸ್ಕೃತಿ, ಬದುಕು ಬವಣೆಗಳಿಗೆ ಕನ್ನಡಿ ಹಿಡಿಯುವ ನಾಟಕ ಇದಾಗಿದೆ. ಶಿವಮೊಗ್ಗದ ನೇಟಿವ್ ಥಿಯೇಟರ್ ಸಂಸ್ಥೆ ಈ ನಾಟಕವನ್ನು ಆಯೋಜನೆ ಮಾಡಿದ್ದು, ಜಿಲ್ಲಾ ಬಂಜಾರ ಸಂಘ ಇನ್ನಿತರ ಸಂಘಟನೆಗಳು ಸಹಕಾರ ನೀಡಿವೆ ಎಂದರು.

ಕಾಲಚಕ್ರದಲ್ಲಿ ಸಿಲುಕಿ ನುಜ್ಜುಗುಜ್ಜಾದ ಅನೇಕ ಜನಸಮುದಾಯಗಳಲ್ಲಿ ಬಂಜಾರ ಜನಾಂಗವೂ ಕೂಡ ಸೇರಿದೆ. ’ಗೋರ್ಮಾಟಿ’ ಎಂದರೆ ನಮ್ಮವರು ಎನ್ನುವ ಒಳಗೊಳ್ಳುವಿಕೆಯ ಅರ್ಥದ ಹಿನ್ನಲೆಯಲ್ಲಿ ಬಳಸಲಾಗಿದ್ದು, ಭಾರತದ ಮೂಲ ನಿವಾಸಿಗಳಲ್ಲಿ ವರ್ಣರಂಜಿತ ಸಂಸ್ಕೃತಿಯನ್ನು ಹೊಂದಿರುವ ಜನಸಮುದಾಯ. ಕಾಡು, ಬೆಟ್ಟ, ನೀರು ಇರುವ ಪ್ರದೇಶಗಳಲ್ಲಿ ತಾಂಡಗಳಾಗಿವೆ ಎಂದರು.

ಈ ಜನಸಮುದಾಯಗಳ ಮರುವ್ಯಾಖ್ಯಾನ ಮಾಡುವ ಅನಿವಾರ್ಯತೆ ಉಂಟಾಗಿದೆ. ಇಡೀ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರ ಜಾತಿ ಸ್ವರೂಪದಲ್ಲಿ ಹರಿದು ಹಂಚಿ ಹೋಗಿರುವ ಬಂಜಾರರು ಭಾರತ ದೇಶ ಮರೆತ ಮಕ್ಕಳು. ವಸಾಹತು ಪೂರ್ವಕಾಲದಲ್ಲಿ ಎತ್ತುಗಳ ಮೇಲೆ ಉಪ್ಪು, ದಿನಸಿ, ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಬುಡಕಟ್ಟು ಇದ್ದಕ್ಕಿದ್ದಂತೆ ತೆರೆ ಮರೆಯಾದ್ದದ್ದ ಹೇಗೆ?. ಇವರ ಇತಿಹಾಸ, ಬಲಿದಾನ ಯಾಕೆ ನೆನಪಾಗುವುದಿಲ್ಲ?. ಈ ಎಲ್ಲಾ ಸವಾಲುಗಳ ಹುಡುಕಾಟವೇ ’ಗೋರ್ಮಾಟಿ’ ನಾಟಕ ಇದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗೇಶ್‌ನಾಯ್ಕ, ಸೈಯ್ಯದ್ ಅಲಿಂ ಇದ್ದರು.

RELATED ARTICLES
- Advertisment -
Google search engine

Most Popular

Recent Comments