Sunday, November 10, 2024
Google search engine
Homeಇ-ಪತ್ರಿಕೆಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆ ಮೋಕ್ಷ ವಾಹಿನಿ ಹಸ್ತಾಂತರ

ಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆ ಮೋಕ್ಷ ವಾಹಿನಿ ಹಸ್ತಾಂತರ

ಶಿವಮೊಗ್ಗ: ವ್ಯಾಪಾರದೊಂದಿಗೆ ಸಮಾಜ ಸೇವೆ ಮಾಡಬೇಕೆಂಬುದು ನಮ್ಮ ಸಂಸ್ಥೆಯ ಉದ್ದೇಶ.  ರಾಜ್ಯದ ಹಲವು ಕಡೆ ಶಾಖೆಗಳನ್ನು ತೆರೆದು ಇಲ್ಲಿಯವರೆಗೆ ೧೦೦೦ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದೇವೆ. ಇವರನ್ನು ಅವಲಂಬಿಸಿದ ಜನರನ್ನು ಲೆಕ್ಕ ಹಾಕಿದರೆ ೫೦೦೦ ಸಾವಿರದಷ್ಟು ಜನ ನಮ್ಮ ಸಂಸ್ಥೆಯಿಂದಾಗಿ ಬದುಕು ಸಾಗಿಸುತ್ತಿದ್ದಾರೆ ಎಂದು ಅಧಿಶಕ್ತಿ ಕಾರ್ಸ್‌ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ನಾರಾಯಣ ರಾವ್ ತಾತುಸ್ಕರ್‍ ಹೇಳಿದರು.

ಬುಧವಾರ ನಗರದ ಶಂಕರ ಮಠ ರೋಡ್ ನಲ್ಲಿರುವ ಅಧಿಶಕ್ತಿ ಟಾಟಾ ಮೋಟರ್ಸ್‌ ನ ಸಭಾಂಗಣದಲ್ಲಿ ತಮ್ಮ ಸಂಸ್ಥೆವತಿಯಿಂದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆಕೊಡುಗೆಯಾಗಿ ಮೋಕ್ಷವಾಹಿನಿ (ಡಿಸ್ಟ್ರಿಬುಶನ್ ಅಫ್ ಹಾರ್ಸ್ ವ್ಯಾನ್) ಹಸ್ತಾಂತರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯ ಸಮೂಹ ಘಟಕಗಳನ್ನು ವಿಸ್ತರಿಸಿ ಉದ್ಯೋಗ ಸೃಷ್ಟಿಸುವ ಜೊತೆಗೆ ಈ ರೀತಿಯ ಸಮಾಜ ಸೇವೆಯು ನಮ್ಮ ಕುಟುಂಬ ಸದಸ್ಯರಿಗೆ ಖುಷಿ ಕೊಡುತ್ತದೆ ಎಂದರು.

ಹಲವರು ತಮಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ತಮ್ಮ ಕುಟುಂಬ ಟೆಕ್ಸ್ ಟೈಲ್ ನಲ್ಲಿ ವ್ಯಾಪಾರ ಮಾಡುತ್ತಿದ್ದಾಗ, ಅಟೊಮೋಬೈಲ್ ಮತ್ತು ಗೋಲ್ಡ್ ವಲಯದಲ್ಲಿ ವ್ಯಾಪಾರವನ್ನು ಆರಂಭಿಸುವುದಕ್ಕೆ ಒಂದು ಅಪಾರ್ಚುನಿಟಿಯನ್ನು ಟಾಟಾ ಕಂಪೆನಿಯಿಂದ ಪಡೆದವು. ಆದರೆ ನಮಗೆ ಈ ವಲಯಗಳಲ್ಲಿ ಯಾವುದೇ ಅನುಭವವಿರಲಿಲ್ಲ. ಸಣ್ಣ ಪ್ರಮಾಣದಲ್ಲಿ ಮಾರುತಿ ಸುಜುಕಿ, ಹೀರೊಹೊಂಡಾ ಕಂಪೆನಿಗಳ ಮೋಟಾರ್‍ ವಾಹನಗಳ ಹಂಚಿಕೆದಾರರಾದೆವು. ದಾವಣಗೆರೆಯಿಂದ ಶಿವಮೊಗ್ಗ ನಗರಕ್ಕೆ ನಮ್ಮ ಕುಟುಂಬ ಸದಸ್ಯ ವೆಂಕಟೇಶ್ ಎನ್. ತಾತುಸ್ಕರ್‍ ಅವರನ್ನು ಸಣ್ಣ ಅಳುಕಿನಿಂದಲೇ ಕಳುಹಿಸಿಕೊಟ್ಟೆವು. ಅವರು ಇಲ್ಲಿ ಒಂದು ಸರ್ವೇ ಮಾಡಿ ನಮ್ಮ ಸಂಸ್ಥೆಯನ್ನು ಕಟ್ಟಿ ಬೃಹತ್  ಆಗಿ ಬೆಳೆಸಿದ್ದಾರೆ. ನಮ್ಮ ಕನಸು ನಗರದ ಶಂಕರ್‍ ಮಠದಲ್ಲಿ ನನಾಸಗಿದೆ ಎಂದು ಮಾಹಿತಿ ನೀಡಿದರು.

ನಮ್ಮ ಕುಟುಂಬ ನಿರ್ವಹಣೆಗೆ ಸಣ್ಣ ಮಟ್ಟದ ವ್ಯಾಪಾರ ಸಾಕು, ವಿಸ್ತರಣೆ ಯಾಕೆ ಎಂಬ ಪ್ರಶ್ನೆ ನಮ್ಮ ಮುಂದೆ ನಿಂತಿತು. ಯಾವ ಸಮಾಜದಿಂದ ನಾವು ಲಾಭ ತೆಗೆದುಕೊಂಡಿದ್ದೇವೋ ಅಲ್ಲಿಗೆ ನಮ್ಮ ಸೇವೆ ಇರಬೇಕೆಂಬ ಕಾರಣದಿಂದ ಕಂಪನಿಯನ್ನು ವಿಸ್ತರಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಸಿ ಹಲವಾರ ಬದುಕಿಗೆ ಸಹಕಾರಿಯಾಗಿದ್ದೇವೆ. ಇದು ನಮಗೆ ಸಾರ್ಥಕತೆಯನ್ನು ನೀಡಿದೆ ಎಂದು ಸಂತೃಪ್ತಿಯನ್ನು ವ್ಯಕ್ತಪಡಿಸಿದರು.

ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂಬ ಮೊದಲನೆಯ ಧ್ಯೇಯದೊಂದಿಗೆ ಈ ಊರಿಗೆ ಬಂದೆವು. ನಮಗೆ ಸಹಕರಿಸಿದವರನ್ನು ಸ್ಮರಿಸಿಕೊಳ್ಳಬೇಕೆಂಬ ಕೃತಜ್ಞತೆ ನಮ್ಮ ಸಂಸ್ಥೆಯ ಎರಡನೆಯ ಧ್ಯೇಯವಾಗಿದೆ. ಆರಂಭದಲ್ಲಿ ಸಹಕಾರ ನೀಡಿದ ಸುರೇಶ್ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇವೆ ಎಂದು ಸ್ಮರಿಸಿದರು.

ಸಮಾಜ ಸೇವೆಯ ಭಾಗವಾಗಿ ನಮ್ಮ ಅಧಿಶಕ್ತಿ ಸಮೂಹ ಸಂಸ್ಥೆ ವತಿಯಿಂದ ೨೧ ಲಕ್ಷ ರೂ. ವೆಚ್ಚದ ಮೋಕ್ಷ ವಾಹಿನಿಯೆಂಬ ಮೃತದೇಹವನ್ನು ಸಾಗಿಸುವ ವಾಹನವನ್ನು ಇಂದು ಲೋಕಾರ್ಪಣೆ ಮಾಡುತ್ತಿದ್ದೇವೆ. ಈ ಹಿಂದೆಯು ನಮ್ಮ ಸಂಸ್ಥೆಯು ಕೃತಕ ಕಾಲು ಜೋಡಣೆ,  ಉಚಿತ ಹೊಲಿಗೆ ಯಂತ್ರಗಳ ವಿತರಣೆಯಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ನಮ್ಮ ವ್ಯಾಪಾರ ವಹಿವಾಟಿನ ಕರ್ಮಭೂಮಿಯಾದ ಶಿವಮೊಗ್ಗ ನಗರಕ್ಕೆ ಇದನ್ನು ಸಮರ್ಪಿಸುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ. ಕೇವಲ ೧೭ ವರ್ಷದ ಹಿಂದೆ ೨೫ ಉದ್ಯೋಗಿಗಳೊಂದಿಗೆ ಪ್ರಾರಂಭವಾದ ನಮ್ಮ ಸಂಸ್ಥೆಯು ಇಂದು ೧೦೦೦ ಉದ್ಯೋಗ ಸೃಷ್ಟಿಸುವುದರ ಜೊತೆಗೆ ೫೦೦೦ ಜನರ ಬದುಕಿಗೆ ಆಸರೆಯಾಗಿರುವುದು ನಮ್ಮ ಸಂಸ್ಥೆಯ ಸಮಾಜ ಸೇವೆ ಒಂದು ಭಾಗ. ತಾನಿಷ್ಕಾ ಜ್ಯುಯೆಲ್ಲರಿಯಂತಹ ಕಂಪೆನಿಗಳನ್ನು ಸ್ಥಾಪಿಸುವ ಮಟ್ಟಕ್ಕೆ ನಮ್ಮ ಪ್ರಯಾಣ ಮುಂದುವರಿದಿದೆ. ಇದಕ್ಕೆಲ್ಲಾ ಸಮಾಜವು ಕಾರಣವಾಗಿದೆ. ಆ ಸಮಾಜಕ್ಕೆ ಮೋಕ್ಷ ವಾಹನ ಸಮರ್ಪಣೆ ಒಂದು ಚಿಕ್ಕ ಸೇವೆ ಎಂದು ಪ್ರಸ್ತಾವನೆ ಮತ್ತು ಅಧ್ಯಕ್ಷರ ನುಡಿಯನ್ನಾಡಿದ ವೆಂಕಟೇಶ್ ಎನ್.ತಾತುಸ್ಕರ್‍ ಹೇಳಿದರು.

ಅಧಿಶಕ್ತಿ ಸಂಸ್ಥೆಯ ಕುಟುಂಬಸ್ಥರಿಂದ ಮೋಕ್ಷವಾಹಿನಿಯನ್ನು ಹುಬ್ಬಳ್ಳಿಯ ರೋಟರಿ ಕ್ಲಬ್ ಗೆ ಮೊದಲು ಹಸ್ತಾಂತರಿಸಿ, ನಂತರ ಭಾವಸರ ಕ್ಷತ್ರಿಯ ಮಹಾಜನ್ ಸಮಾಜಕ್ಕೆ ಉಸ್ತುವಾರಿಗಾಗಿ ಹಸ್ತಾಂತರಿಸಲಾಯಿತು.

ರೋಟರಿ ಕ್ಲಬ್ ಹುಬ್ಬಳ್ಳಿಯ ಅಧ್ಯಕ್ಷರಾದ ಅರವಿಂದ್ ಕುಪ್ಪದ್‌,  ಭಾವಸರ ಕ್ಷತ್ರಿಯ ಮಹಾಜನ್ ಸಮಾಜದ ಅಧ್ಯಕ್ಷರಾದ ಗಜೇಂದ್ರನಾಥ್ ಮಾಲೋದ ಅವರು ಕಾರ್ಯಕ್ರಮದಲ್ಲಿ ಅತಿಥಿ ಭಾಷಣಕಾರರಾಗಿ ಆಗಮಿಸಿದ್ದರೆ, ರೋಟರಿ ಕ್ಲಬ್ ಹುಬ್ಬಳ್ಳಿಯ ಕಾರ್ಯದರ್ಶಿ ವಸಂತ ಭಾಸೈ ಕಾರ್ಯಕ್ರಮದ ಆತಿಥಿಗಳಾಗಿ ಆಗಮಿಸಿದ್ದರು. ಗೊ.ವಾ. ಮೋಹನ ಕೃಷ್ಣ ಅವರು ನಿರೂಪಣೆ ಮತ್ತು ಸ್ವಾಗತ ನಿರ್ವಹಿಸಿದರೆ, ಭಾವಸರ ವಿಜನ್ ಇಂಡಿಯಾ ಅಧ್ಯಕ್ಷರಾದ ದಿನೇಶ್ ಕುಂಟೆ ಅವರು  ವಂದನಾರ್ಪಣೆಯನ್ನು ನೆರವೇರಿಸಿದರು.

RELATED ARTICLES
- Advertisment -
Google search engine

Most Popular

Recent Comments