Tuesday, July 23, 2024
Google search engine
Homeಇ-ಪತ್ರಿಕೆಅಕ್ಟಿಂಗ್ ಸ್ಕೂಲ್ ಅಫ್ ಕರ್ನಾಟಕದಿಂದ ಅಭಿನಯದ ಕುರಿತು 35 ದಿನಗಳ ವರ್ಕ್‌ಶಾಪ್

ಅಕ್ಟಿಂಗ್ ಸ್ಕೂಲ್ ಅಫ್ ಕರ್ನಾಟಕದಿಂದ ಅಭಿನಯದ ಕುರಿತು 35 ದಿನಗಳ ವರ್ಕ್‌ಶಾಪ್

ಜೂ.16ಕ್ಕೆ ಶಿವಮೊಗ್ಗ ರಘು ಅವರಿಂದ ಎಲ್ಲ ತರಬೇತಿಗಳ ಉದ್ಘಾಟನೆ

ಶಿವಮೊಗ್ಗ: ಅಭಿನಯ, ನಾಟಕದ ಕುರಿತು 35 ದಿನಗಳ ವರ್ಕ್‌ಶಾಪ್ ಮತ್ತು ವಿವಿಧ ಅಭಿನಯ ತರಬೇತಿಗಳ ಉದ್ಘಾಟನಾ ಸಮಾರಂಭವನ್ನು ಜೂ. 16ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಕ್ಟಿಂಗ್ ಸ್ಕೂಲ್ ಅಫ್ ಕರ್ನಾಟಕ ಎಎಸ್ ಕೆ ಚೆಲುವರಂಗದ ಅಜಯ್ ಕುಮಾರ್‍ ಹೇಳಿದರು.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೀನಾಸಂ ನಂತಹ ಸಂಸ್ಥೆಗಳಲ್ಲಿ ಅಭಿನಯ, ನಾಟಕ ತರಬೇತಿಯನ್ನು ಕೊಡಲಾಗುತ್ತದೆ. ಆದರೆ ವಿದ್ಯಾರ್ಥಿಗಳು ಇದರಿಂದ ವಂಚಿತರಾಗುತ್ತಾರೆ. ಈ ನಿಟ್ಟಿನಲ್ಲಿ ಈ ವರ್ಕಶಾಪ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜೂನ್ ೧೬ರಿಂದ ಜು.೨೧ರ ವರೆಗೆ ನಡೆಯುವ ವರ್ಕ್‌‌ಶಾಪ್ ನಲ್ಲಿ ಅಯ್ದ 30 ಜನರಿಗೆ ಮಾತ್ರ ಈ ಅವಕಾಶವಿರುತ್ತದೆ. ಮಂಜು ಕೊಡಗು, ಅಜಯ್ ನೀನಾಸಂ, ತಿರುಣಾವುಕ್ಕರಸು, ಲಕ್ಷ್ಮಣ ಕೆ.ಪಿ., ಕೃಷ್ಣಪೂರ್ಣ ನೀನಾಸಂ, ಕ್ರಿಷ್ಟೋಪರ್‍ ಸಿಡೋಜ ನೀನಾಸಂ, ಡಾ.ಸಾಸ್ವೆಹಳ್ಳಿ ಸತೀಶ್, ಹೊಂಗಿರಣ ಚಂದ್ರು,  ಚಂದ್ರಶೇಖರ ಶಾಸ್ತ್ರಿ,  ಶಿವಮೊಗ್ಗ ಹರೀಶ್, ಹರ್ಷ ಗೊಭಟ್, ರಂಗನಾಥ್ ನೀನಾಸಂ, ಸಂತೋಷ್ ದಿಂಡಗೂರು ನೀನಾಸಂ ತರಬೇತಿ ನೀಡುವ ಮಾರ್ಗದರ್ಶಕರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯಲ್ಲಿ ಹಲವು ರೀತಿಯ ತರಬೇತಿಗಳಿದ್ದು ಈ ಎಲ್ಲ ತರಬೇತಿಗಳನ್ನು ಜೂ.16ರಂದು ಶಿವಮೊಗ್ಗ ರಘು ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಅಭಿನಯ ಶಾಲೆಯಲ್ಲಿ ರೆಗ್ಯುಲರ್‍ ತರಗತಿಗಳನ್ನು ವಾರದಲ್ಲಿ ಮೂರು ದಿನಗಳು ಸಂಜೆಯ ಸಮಯದಲ್ಲಿ ಎಲ್ಲ ವಯಸ್ಸಿನವರಿಗೂ ಕಲಿಸಲಾಗುತ್ತದೆ. ಎರಡನೆಯದಾಗಿ ವಾರಂತ್ಯ ಅಂದರೆ ಶನಿವಾರ ಮತ್ತು ಭಾನುವಾರ, ಮೂರನೆಯದು ಪರ್ಸನಲ್ ಟ್ರೈನಿಂಗ್ 3 ತಿಂಗಳು ಅಥವಾ 6 ತಿಂಗಳ ಅಭಿನಯ ತರಬೇತಿಯನ್ನು ಹೇಳಿಕೊಡಲಾಗುತ್ತದೆ. ಇವಕ್ಕೆಲ್ಲಾ ಪ್ರತ್ಯೇಕವಾಗಿ ಕಡಿಮೆ ಶುಲ್ಕವನ್ನು ವಿಧಿಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯೋಗೀಶ್, ಪ್ರಜ್ವಲ್, ಅರವಿಂದ, ಸಂತೋಷ್, ಅಬಿ. ಯೋಗಿ, ಸಂದೀಪ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments