ಶಿವಮೊಗ್ಗ : ಅಮೃತ್‌ನೋನಿ ವ್ಯಾಲ್ಯೂ ಸೋಶಿಯಲ್ ವೆಲ್ಪೇರ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ಜನರಿಗೆ ೨೪ಗಂಟೆ ಉಚಿತ ಸೇವೆ ನೀಡಲು ಸುಸಜ್ಜಿತ ಅಂಬ್ಯುಲೆನ್ಸ್‌ನ್ನು ಸೇವಾ ಭಾರತೀ ಮತ್ತು ಕೋವಿಡ್ ಸುರಕ್ಷಾ ಪಡೆಯ ಸೇವಾ ಕೇಂದ್ರಕ್ಕೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಅಮೃತ್‌ನೋನಿ ಸಂಸ್ಥೆಯ ಈ ಕಾರ್ಯ ಎಲ್ಲಾ ಸಂಘ ಸಂಸ್ಥೆ ಮತ್ತು ದಾನಿಗಳಿಗೆ ಮಾದರಿಯಾಗಿದೆ. ಈ ಅಂಬ್ಯುಲೆನ್ಸ್‌ನಲ್ಲಿ ತುರ್ತು ಆಕ್ಸಿಜನ್ ವ್ಯವಸ್ಥೆ ಇದ್ದು ಅಂಬ್ಯುಲೆನ್ಸ್‌ನ ಸಿಬ್ಬಂದಿಗಳು ಮತ್ತು ಡಿಸೇಲ್ ಸಹಿತ ಎಲ್ಲಾ ನಿರ್ವಹಣಾ ಖರ್ಚನ್ನು ಅಮೃತ್‌ನೋನಿ ಟ್ರಸ್ಟ್ ಭರಿಸುತ್ತಿದೆ ಎಂದರು.
ರಾಜ್ಯದಲ್ಲಿ ಇದೊಂದು ಮಾದರಿ ಕಾರ್ಯವಾಗಿದೆ. ಸೇವಾ ಭಾರತೀ ಕೂಡ ಉತ್ತಮವಾಗಿ ಕಾರ್ಯವಿರ್ವಹಿಸುತ್ತಿದ್ದು, ಎಲ್ಲಾರೂ ಈ ಸಂಕಷ್ಟ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ಕೈ ಜೋಡಿಸಿ ಈ ಮಹಾಮಾರಿಯನ್ನು ಹೋಗಡಲಾಡಿಸಲು ಸಹಕಾರ ನೀಡೋಣ ಎಂದರು.
ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ಮಾತನಾಡಿ, ಅಮೃತ್‌ನೋನಿ ಪ್ರಾಡಕ್ಟ್ ಆರೋಗ್ಯ ಕೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಹಲವಾರು ರಾಜ್ಯಗಳಲ್ಲಿ ಹೆಸರುವಾಸಿಯಾಗಿದೆ. ತಮಗೆ ಬಂದ ಆದಾಯದಲ್ಲಿ ಸಮಾಜಕ್ಕೆ ಆರೋಗ್ಯ ಸೇವೆಗಾಗಿ ಟ್ರಸ್ಟ್ ರೂಪಿಸಿ ಆ ಮೂಲಕ ಅಮೃತ್‌ನೋನಿ ಸಂಸ್ಥಾಪಕರಾದ ಶ್ರೀನಿವಾಸ್ ಮೂರ್ತಿ ಅವರು ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಇದನ್ನು ಮಾದರಿ ಕಾರ್ಯ ಎಂದರು.
ಆರ್‌ಎಸ್‌ಎಸ್ ಪಟ್ಟಾಭಿರಾಮ್ ಮಾತನಾಡಿ, ಇದೊಂದು ಪುಣ್ಯದ ಕಾರ್ಯ. ಸಮಾಜಕ್ಕೆ ಕೊಡುವುದು ಬಹಳ ಶ್ರೇಷ್ಠ ಕಾರ್ಯವಾಗಿದ್ದು, ಮಹಾಮಾರಿ ಕರೋನಾ ಸಂದರ್ಭದಲ್ಲಿ ಹಲವಾರು ಮರಣಗಳು ಸಂಭವಿಸುತ್ತಿದ್ದು, ಅಮೃತ್‌ನೋನಿ ಅವರ ಈ ಸಹಾಯ ಸಂಜೀವಿನಿ ರೂಪದಲ್ಲಿ ರೋಗಿಗಳಿಗೆ ಅಮೃತವಾಗಲಿ ಎಂದರು.
ಅಮೃತ್‌ನೋನಿ ಸಂಸ್ಥೆಯ ಸಂಸ್ಥಾಪಕ ಶ್ರೀನಿವಾಸ್‌ಮೂರ್ತಿ ಮಾತನಾಡಿ, ಸಮಾಜದ ಮನೋಬಲ ಹೆಚ್ಚಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ. ಅವಶ್ಯವಿರುವವರು ಈ ಉಚಿತ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಿ ಅದಕ್ಕಾಗಿ ಕೋವಿಡ್ ಸುರಾಕ್ಷ ಪಡೆಗೆ ಈ ಅಂಬ್ಯುಲೆನ್ಸ್ ನೀಡಲಾಗಿದ್ದು, ಎಲ್ಲಾರೂ ಒಟ್ಟಾಗಿ ಶ್ರಮಿಸಿ ಸಂಕಷ್ಟದಿಂದ ಹೊರಗೆ ಬರೋಣ ಎಂದರು.
ಈ ಸಂಸರ್ಭದಲ್ಲಿ ಡಿ.ಎಸ್.ಅರುಣ್, ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್, ಡಾ.ರಘುನಂದನ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ಜಿ.ಪಂ.ಸಿಇಓ ವೈಶಾಲಿ, ಡಿಹೆಚ್‌ಓ ಡಾ.ರಾಜೇಶ್ ಸುರಗಿಹಳ್ಳಿ, ಜಿ.ವಿಜಯ್‌ಕುಮಾರ್ ಮೊದಲಾದವರಿದ್ದರು.