ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸಕ್ಕೆ ಸಕಲ ಸಿದ್ಧತೆ ನಡೆಸಿದ್ದು, ಜ.೬ರಂದು ಮುಖ್ಯಮಂತ್ರಿಗಳು ಸಾಗರ, ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆ ಮೂರು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿ ವಿವಿಧ ಕಾಮಗಾರಿಗಳಿಗೆ ಮುಖ್ಯ ಮಂತ್ರಿಗಳು ಮಂಜೂರಾತಿ ನೀಡಿರುವು ದರಿಂದ ಎಲ್ಲವುಗಳ ಶಂಕುಸ್ಥಾಪನೆ ನೆರವೇರುತ್ತಿದೆ ಎಂದರು.
ಅಂದು ಬೆಳಿಗ್ಗೆ ಸಾಗರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ. ಸಾಗರದಲ್ಲಿ ೯೭.೫೪ ಕೋಟಿರೂ.ಗಳ ೧೪ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ೧೨೧.೬೫ ಕೋಟಿ ರೂ.ಗಳ ೨೦ ಕಾಮಗಾರಿಗಳ ಉದ್ಘಾಟನೆ ನಡೆಯುವುದು. ಅಂದು ಮಧ್ಯಾಹ್ನ ತೀರ್ಥಹಳ್ಳಿಯಲ್ಲಿ ೨೦೨ ಕೋಟಿರೂ. ವೆಚ್ಚದ ೯೧ ಕಾಮಗಾರಿ ಶಂಕುಸ್ಥಾಪನೆ, ೧೭೬ಕೋಟಿ ರೂ. ವೆಚ್ಚದ ೬ ಕಾಮಗಾರಿಗಳ ಲೋಕಾ ರ್ಪಣೆ ಮುಖ್ಯಮಂತ್ರಿಗಳಿಂದ ನೆರವೇರುವುದು ಎಂದರು.
ಅಂದು ಸಂಜೆ ೪.೩೦ಕ್ಕೆ ಶಿವ ಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ೨೭೫ಕೋಟಿರೂ. ವೆಚ್ಚದ ೧೭ ಕಾಮ ಗಾರಿ ಶಂಕುಸ್ಥಾಪನೆ, ೧೭೬ಕೋಟಿ ರೂ. ವೆಚ್ಚದ ೬ ಕಾಮಗಾರಿಗಳನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಗೊಳಿಸುವರು ಎಂದ ಅವರು, ಮೊದಲ ಹಂತದಲ್ಲಿ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡು ತ್ತಿದ್ದು, ಮುಂದೆ ಇತರೆ ಕ್ಷೇತ್ರಗಳತ್ತ ಸರ್ಕಾರ ಗಮನಹರಿಸಲಿದೆ ಎಂದರು.
ಚುನಾವಣೆ ಸ್ಪರ್ಧೆ: ಸಾಗರ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಯಸಿದರೆ ಸ್ಪರ್ಧಿಸುವುದಾಗಿ ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದರು.
ಕಳೆದ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ ಎಂದಿದ್ದೆ, ಆದರೆ ಈಗ ಟಿಕೆಟ್ ನೀಡುವುದು ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದ ಅವರು, ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಬೆಳವಣಿಗೆಗಳು ಪಕ್ಷದಲ್ಲಿ ಆಗಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ. ಶ್ರೀನಿವಾಸ್, ಪ್ರಮುಖರಾದ ಇಸ್ಮಾ ಯಿಲ್ ಖಾನ್, ಎನ್. ರಮೇಶ್, ವಿಶ್ವನಾಥ್ ಕಾಶಿ ಮತ್ತಿತರರಿದ್ದರು.