ಯಾದಗಿರಿ ಜಿಲ್ಲೆಯ ಮಾಜಿ ಶಾಸಕ ಹಾಗೂ ವೈದ್ಯ ಡಾ. ವೀರಬಸವಂತರೆಡ್ಡಿ ಮುದ್ನಾಳ (76) ಸೋಮವಾರ ನಿಧನರಾದರು.
ಳೆದ ಐದಾರು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಮಧ್ಯಾಹ್ನ ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಡಾ.ವೀರಬಸವಂತರಡ್ಡಿ ಅವರು 2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಯಾದಗಿರಿ ಶಾಸಕರಾಗಿದ್ದರು. 2010ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ರಾಜಕೀಯದಲ್ಲಿ ಅಜಾತಶತ್ರು ನಾಯಕರೆಂದೇ ಹೆಸರುವಾಸಿಯಾಗಿದ್ದರು.
ಯಾದಗಿರಿ ಜಿಲ್ಲೆ ರಚನೆಯಾಗಲು ಪ್ರಮುಖ ಪಾತ್ರ ವಹಿಸಿದ್ದ ಡಾ.ವೀರಬಸವಂತರಡ್ಡಿ ಮುದ್ನಾಳ್ ಅವರ ಅಗಲಿಕೆಯಿಂದ ಯಾದಗಿರಿ ಜನರಲ್ಲಿ ಅಪಾರ ನೋವುಂಟು ಮಾಡಿದೆ.
ಮೃತರು ಪತ್ನಿ ಸೇರಿ ಮಾಜಿ ಶಾಸಕ ವೆಂಕಟೇಶ್ ಮುದ್ನಾಳ ಹಾಗೂ ನಾಲ್ಕು ಜನ ಸಹೋದರರನ್ನು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮ ಮುದ್ನಾಳನ ತೋಟದಲ್ಲಿ ಅಂತ್ಯಕ್ರಿಯೆ ಜರಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.