ಶಿವಮೊಗ್ಗ : ನೂತನ ಪಿಂಚಣಿ (ಎನ್‌ಪಿಎಸ್)ಯೋಜನೆ ರದ್ದುಪಡಿ ಸುವಂತೆ ಆಗ್ರಹಿಸಿ ಇಂದು ಮಧ್ಯಾಹ್ನ ಸರ್ಕಾರಿ ನೌಕರರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ೨೦೧೬ರ ಏಪ್ರಿಲ್‌ನಿಂದ ಈಚೆಗೆ ಕೆಲಸಕ್ಕೆ ಸೇರಿದ ಸರ್ಕಾರಿ ನೌಕರರಿಗಾಗಿ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕ ವಾಗಿದೆ. ಇದರಿಂದ ಸರ್ಕಾರಿ ನೌಕ ರರಿಗೆ ನಿವೃತ್ತಿ ನಂತರ ಭದ್ರತೆ ಇಲ್ಲ ದಂತಾಗುತ್ತದೆ ಎಂದು ದೂರಿದರು.
ಹೊಸ ಪಿಂಚಣಿ ಯೋಜನೆಯಿಂದ ಕನಿಷ್ಠ ಪಿಂಚಣಿ ಸಿಗಲಿದೆ. ಸತತ ೩೩ ವರ್ಷಗಳ ಕಾಲ ಕಾರ್ಯನಿರ್ವ ಹಿಸಿದ್ದರೂ ಸುಮಾರು ೫ ಸಾವಿರ ರೂ. ಪಿಂಚಣಿ ದೊರೆಯಲಿದೆ. ಆದ್ದರಿಂದ ಇದನ್ನು ಕೂಡಲೇ ರಾಜ್ಯ ಸರ್ಕಾರ ರದ್ದುಗೊಳಿಸಿ ಹಳೇ ಪಿಂಚಣಿ ಯೋಜ ನೆಯನ್ನೇ ಈ ನೌಕರರಿಗೂ ಅಳವಡಿಸ ಬೇಕೆಂದು ಒತ್ತಾಯಿ ಸಿದರು.
ಕುಟುಂಬ ಪಿಂಚಣಿ, ಮರಣ ಉಪಧನ, ನಿವೃತ್ತಿ ಉಪಧನ ಸಿಗುವುದಿಲ್ಲ. ಕಾಲಕಾಲಕ್ಕೆ ತುಟ್ಟಿಭತ್ಯೆ ಹಾಗೂ ಪಿಂಚಣಿಯಲ್ಲಿ ಹೆಚ್ಚಳವಾ ಗುವುದಿಲ್ಲ. ಸೇವಾ ಶುಲ್ಕ ಕಡಿತ ಮಾಡಲಾಗುತ್ತದೆ. ಬಾಂಡ್ ರೂಪದ ಭದ್ರತೆಯೂ ಇರುವುದಿಲ್ಲ. ಹೀಗಾಗಿ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು. ಕೂಡಲೇ ರಾಜ್ಯ ಸರ್ಕಾರ ಈ ವಿಷಯದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಆರ್. ಮೋಹನ್‌ಕುಮಾರ್, ಕೋಶಾಧ್ಯಕ್ಷ ಐ.ಪಿ.ಶಾಂತ ರಾಜ್, ರಾಜ್ಯ ಸಮಿತಿಯ ಪ್ರಮುಖರಾದ ಬಸವನಗೌಡ, ಬಾಲಚಂದ್ರ, ಕೆಂಚಪ್ಪ, ಸಿದ್ದಬಸಪ್ಪ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.