-ಡಾ. ಪ್ರೀತಂ
ಶಿವಮೊಗ್ಗ : ಕಳೆದ ಐದು ವರ್ಷಗಳ ಹಿಂದೆ ಆರಂಭಗೊಂಡಿದ್ದ ಇಲ್ಲಿನ ವಿದ್ಯಾನಗರ ಬಡಾವಣೆಯ ಬಿ.ಹೆಚ್.ರಸ್ತೆ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳದೇ ಕುಂಟುತ್ತಾ ಸಾಗಿದೆ.
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ೨೦೧೨ರಲ್ಲಿ ೨೦ ಕೋಟಿ ರೂ. ವೆಚ್ಚದಲ್ಲಿ ೧.೫ ಕಿ.ಮೀ. ವಿದ್ಯಾನಗರ ಬಡಾವಣೆಯ ಬಿ.ಹೆಚ್. ರಸ್ತೆ ಕಾಮಗಾರಿ ಆರಂಭಿಸಿತು. ಕಾಮಗಾರಿ ಆರಂಭಿಸುವ ಹಂತ ದಲ್ಲೇ ಎಷ್ಟು ಅಗಲ ವಿಸ್ತೀರ್ಣಗೊಳ್ಳಬೇಕು ಎಂಬ ಬಗ್ಗೆಯೇ ಹಲವಾರು ಬಾರಿ ಸಭೆಗಳನ್ನು ಬಡಾವಣೆಯ ಜನರೊಂದಿಗೆ ಹಾಗೂ ಮುಖಂಡರೊಂದಿಗೆ ನಡೆಸಲಾಯಿತು.
೫೦ ಅಡಿ ವಿಸ್ತರಿಸಬೇಕು ಎಂದು ಮೊದಲು ತೀರ್ಮಾನಿಸಲಾಗಿತ್ತು. ಆದರೆ ಈ ಬಗ್ಗೆ ಬಡಾವಣೆಯ ಜನರು ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಹಲವಾರುಬಾರಿ ಸಭೆ ನಡೆಸಿದ ಬಳಿಕ ಅಂತಿಮವಾಗಿ ರಸ್ತೆಯ ಮಧ್ಯ ಭಾಗದಿಂದ ಎರಡೂ ಬದಿಗಳಲ್ಲಿ ೪೦ ಅಡಿ ವಿಸ್ತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳ ಲಾಯಿತು.
ಅಂತಿಮ ತೀರ್ಮಾನವಾದ ನಂತರ ರಸ್ತೆ ಕಾಮಗಾರಿ ತಕ್ಷಣಕ್ಕೆ ಆರಂಭಗೊಳ್ಳಲಿಲ್ಲ. ಇದಾದ ಕೆಲ ವರ್ಷಗಳ ನಂತರ ಕಾಮಗಾರಿ ಆರಂಭಗೊಂಡಿತು.
ನಗರದ ಸೇತುವೆ ಬಳಿಯಿಂದ ಎಂ.ಆರ್.ಎಸ್. ವೃತ್ತದವ ರೆಗೆ ರಸ್ತೆ ಕಾಮಗಾರಿ ಇದೀಗ ನಡೆಯುತ್ತಿದ್ದು, ಈ ಕಾಮಗಾರಿ ನಿಗಧಿತ ವೇಗ ದಲ್ಲಿ ನಡೆಯುತ್ತಿಲ್ಲ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ರಸ್ತೆ ಅಗಲೀ ಕರಣವಾಗಬೇಕು ಮತ್ತು ಗುಣಮಟ್ಟದ ರಸ್ತೆ ಆಗ ಬೇಕೆಂಬ ಒತ್ತಾಯ ಹಲವು ಬಾರಿ ಕೇಳಿಬಂದಿತ್ತು. ಆದರೂ ಸಹ ಈ ರಸ್ತೆಯ ಕಾಮಗಾರಿಯನ್ನು ವಿಳಂಬಗತಿಯಲ್ಲಿ ಆರಂಭಿಸಲಾಯಿತು.
ಹೆದ್ದಾರಿ ರಸ್ತೆಯಾಗಿರುವ ೧.೫ಕಿ.ಮೀ. ವಿಸ್ತೀರ್ಣದ ರಸ್ತೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಆ ಭಾಗದ ಜನರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೆ ವಾಹನ ಸವಾರರು ಪ್ರತಿನಿತ್ಯ ಅತ್ಯಂತ ಕಷ್ಟಕರ ರೀತಿಯಲ್ಲಿ ವಾಹನ ಚಾಲನೆ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ.
ಕಾಮಗಾರಿ ನಡೆಯುತ್ತಿರುವುದರಿಂದ ಬಡಾವಣೆಯ ಜನರು ಧೂಳು ಕುಡಿಯುವಂತಹ ಪರಿಸ್ಥಿತಿ ಬಂದೊದಗಿದ್ದು, ಅನೇಕ ಜನರು ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ ಎಂಬ ಆರೋಪ ಕೂಡಾ ಕೇಳಿಬರುತ್ತಿದೆ.
ಇತ್ತೀಚೆಗೆ ಸಹ್ಯಾದ್ರಿ ಕಾಲೇಜಿನ ೭೫ನೇ ವರ್ಷಾಚರಣೆಗೆ ರಾಜ್ಯದ ಮುಖ್ಯ ಮಂತ್ರಿಗಳು ಆಗಮಿಸಬೇಕಾಗಿದ್ದ ಹಿನ್ನೆಲೆಯಲ್ಲಿ ಒಂದು ಭಾಗದ ರಸ್ತೆ ಕಾಮಗಾರಿಯನ್ನು ಅತ್ಯಂತ ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗಿದೆ. ಇದರಿಂದಾಗಿ ಆ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂಬ ಆರೋಪ ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅತ್ಯಂತ ಕಡಿಮೆ ವಿಸ್ತೀರ್ಣದ ರಸ್ತೆ ಕಾಮ ಗಾರಿ ಪೂರ್ಣಗೊಳಿಸಲು ಸತತ ೫ ವರ್ಷ ಗಳಾದರೂ ಸಹ ಏಕೆ ಸಾಧ್ಯವಾಗಿಲ್ಲ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.
ನಗರದಲ್ಲಿಯೇ ಹಾದು ಹೋಗಿರುವಂತಹ ಈ ರಸ್ತೆ ಕಾಮಗಾರಿಯನ್ನು ಅತ್ಯಂತ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ವಾಹನ ಸವಾರರಿಗೆ ಆ ಭಾಗದ ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿಬರುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕುತೂಹಲದ ಅಂಶವಾಗಿದೆ.
ರಸ್ತೆ ಕಾಮಗಾರಿಯನ್ನು ಚುರುಕು ಗೊಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ. ಇದ್ದಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಕೂಡಾ ಬಗೆಹ ರಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. – ಜಿಲ್ಲಾಧಿಕಾರಿ