Tuesday, July 23, 2024
Google search engine
Homeಇ-ಪತ್ರಿಕೆ"ಭಗೀರಥ ಕಪ್ 2024":  ಪ್ರಥಮ ಕುಂಸಿ… ದ್ವಿತೀಯ ಮಾರಶೆಟ್ಟಿ ಹಳ್ಳಿ

“ಭಗೀರಥ ಕಪ್ 2024”:  ಪ್ರಥಮ ಕುಂಸಿ… ದ್ವಿತೀಯ ಮಾರಶೆಟ್ಟಿ ಹಳ್ಳಿ

ಶಿವಮೊಗ್ಗ : ಭಗೀರಥ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ  ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ತೃತೀಯ ವರ್ಷದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

 ಜಿಲ್ಲಾ ಮಟ್ಟದ ಕ್ರಿಕೇಟ್  ಪಂದ್ಯಾವಳಿಯನ್ನು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಂತೇಶ್ ಅತಿಥಿಗಳಾಗಿ ದೇವೇಂದ್ರಪ್ಪ  ಸಾಗರ ರವಿ , ಹಾರ್ನಳ್ಳಿ ರವಿ ಕುಂಸಿ ದಿನೇಶ, ಕುಂಸಿ ಗ್ರಾಮ ಪಂಚಾಯತಿ ಹಾಲಿ ಸದಸ್ಯರಾದ ಶ್ರೀನಿವಾಸ್ ರವರು ಸಹ ಆಗಮಿಸಿದ್ದರು…

ಗ್ರಾಮಾಂತರ ಶಾಸಕಿ ಶಾರದಮ್ಮನವರು ಒಂದೆಡೆ  ಉಪ್ಪಾರ ಜನಾಂಗದವರು ಆರ್ಥಿಕವಾಗಿ ಹಾಗೂ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ತುಂಬಾ ಹಿಂದುಳಿದಿದ್ದಾರೆ, ಸಣ್ಣ ಸಣ್ಣ ಕೆಲಸಗಳಲ್ಲಿಯೇ ಅವರು ಜೀವನ ನಡೆಸುತ್ತಿದ್ದಾರೆ, ಆದರೆ ಅವರು ತಮ್ಮ ಕೆಲಸಗಳಿಗೆ ಅಷ್ಟೇ ಸೀಮಿತವಾಗಿಲ್ಲ, ನಾವು ಕೂಡ ಸ್ವಾತಂತ್ರ್ಯರು ನಾವು ಕೂಡ ಇಂತಹ ಕ್ರೀಡೆಗಳ ಮುಖಾಂತರ ಮಾನಸಿಕವಾಗಿ ಹಾಗೂ ನೆಮ್ಮದಿಯಾಗಿ ಸಂತೋಷದ ಜೊತೆ ಸ್ನೇಹ ಸಮ್ಮಿಲನವನ್ನು ಉಳಿಸಿಕೊಂಡಿದ್ದೇವೆ ಎಂದು ಈ ಕ್ರೀಡಾ ಆಯೋಜನೆ ಮುಖಾಂತರ ಗೊತ್ತಾಗುತ್ತದೆ, ಸಣ್ಣ ಸಮುದಾಯವಾದರೂ ನಿಮ್ಮಲ್ಲಿನ ಒಗ್ಗಟ್ಟು ನೋಡಿ ಸಂತೋಷವಾಯಿತು.. ನಿಮ್ಮ ಭಗೀರಥ ಕ್ರೀಡಾ ಅಕಾಡೆಮಿ ಹಾಗೂ ನಿಮ್ಮ ಜನಾಂಗವನ್ನು ಅಭಿವೃದ್ಧಿಗೊಳಿಸಲು ಸರ್ಕಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಶ್ವಾಸನೆ  ನೀಡಿದರು…

ಕ್ರೀಡೆಯಲ್ಲಿ ಪ್ರಥಮ ಬಹುಮಾನ ಪಡೆದ ಕುಂಸಿ ಹಾಗೂ ದ್ವಿತೀಯ ಬಹುಮಾನ ಗಳಿಸಿದ ಮಾರಶೆಟ್ಟಿಹಳ್ಳಿ ತಂಡಗಳಿಗೆ ಬಹುಮಾನ ವಿತರಿಸಿದರು,

ಬಂದಂತಹ ಜಿಲ್ಲಾ ಮಟ್ಟದ ತಂಡಗಳು  ಸಾಗರ, ಕುಂಸಿ, ಬೊಮ್ಮನಕಟ್ಟೆ, ಕಾಶಿಪುರ, ಶಿವಮೊಗ್ಗ ಸಿಟಿ ಬೇಡರಹೊಸಳ್ಳಿ, ಹೊಳೆಹೊನ್ನೂರು, ಭದ್ರಾವತಿ,  ತಂಡಗಳು ಭಾಗವಹಿಸಿದ್ದವು.

ಕ್ರೀಡಾ ಪಂದ್ಯಾವಳಿಯ ಸಂಸ್ಥಾಪಕ ಅಧ್ಯಕ್ಷ ಮುರಳಿ ಸಣ್ಣಕ್ಕಿ , ಪದಾಧಿಕಾರಿಗಳಾದ:- ಗುರುರಾಜ್ ,ಕಾರ್ತಿಕ್ , ನವೀನ್, ಸಂಜಯ್, ಮಂಜು, ಭರತ್,  ಪವನ್,  ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಎನ್. ಮಾಲತೇಶ್ ಪತ್ರಿಕಾ ವಿತರಕರ ಒಕ್ಕೂಟ  ಹಾಗೂ ಕ್ರೀಡಾ ಅಭಿಮಾನಿಗಳು ಇದ್ದರು.

RELATED ARTICLES
- Advertisment -
Google search engine

Most Popular

Recent Comments