Saturday, October 12, 2024
Google search engine
Homeಅಂಕಣಗಳುಗಾಂಧಿ ಬಜಾರ್‌ನ ಉಪ್ಪಾರಕೇರಿಯ ಮಾರ್ಕೆಟ್ ನಲ್ಲಿ ಬೆಂಕಿ ಅವಗಢ: ಈಶ್ವರಪ್ಪ, ಚನ್ನಬಸಪ್ಪ ಭೇಟಿ

ಗಾಂಧಿ ಬಜಾರ್‌ನ ಉಪ್ಪಾರಕೇರಿಯ ಮಾರ್ಕೆಟ್ ನಲ್ಲಿ ಬೆಂಕಿ ಅವಗಢ: ಈಶ್ವರಪ್ಪ, ಚನ್ನಬಸಪ್ಪ ಭೇಟಿ

ಶಿವಮೊಗ್ಗ: ನೆನ್ನೆ ಸೋಮವಾರ ರಾತ್ರಿ ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ಉಪ್ಪಾರಕೇರಿಯ 2ನೇ ತಿರುವಿನಲ್ಲಿರುವ ಬಟ್ಟೆ ಮಾರ್ಕೆಟ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಆದ ಅಗ್ನಿ ಅವಗಢವಾದ ಸ್ಥಳಕ್ಕೆ ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ತಹಶೀಲ್ದಾರ್ ಗಿರೀಶ್, ಹಾಗೂ ಅಧಿಕಾರಿಗಳು ಭೇಟಿ ನೀಡಿ ವಾಸ್ತವಿಕ ಪರಿಸ್ಥಿತಿಯನ್ನು ವೀಕ್ಷಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಅಗ್ನಿಶಾಮಕದಳದ ಸಿಬ್ಬಂದಿಯು ತಕ್ಷಣವೇ ಕಾರ್ಯಪ್ರವತ್ತರಾಗಿದ್ದು, ಈ ಹಿನ್ನಲೆಯಲ್ಲಿ ದೊಡ್ಡ ಅನಾಹುತವೇತಪ್ಪಿದ್ದು ಇದಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಭಿನಂದನೆ ತಿಳಿಸಿ, ಮುಂಬರುವ ದಿನಗಳಲ್ಲಿ ಇಂತಹ ಅಗ್ನಿ ಅನಾಹುತಗಳು ಸಂಭವಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಈ ಕುರಿತಂತೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೇಕಾಗಿರುವಂತ ಪರಿಹಾರವನ್ನು ಸಂತ್ರಸ್ತರಿಗೆ ಶೀಘ್ರದಲ್ಲೇ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಗಣ್ಯರ ಭೇಟಿ : ಸ್ಥಳಕ್ಕೆ ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ.ಯೋಗೀಶ್ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರವರು ಕೂಡ ಘಟನಾ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟವಾದ ವ್ಯಾಪಾರಸ್ಥರಿಗೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಭೇಟಿ ನೀಡಿ ಘಟನೆಯಲ್ಲಿ ಸುಮಾರು 7ರಿಂದ 8 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ, ನಷ್ಟಕೂಡ ಆಗಿವೆ. ಜಿಲ್ಲಾಡಳಿತವತಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಷ್ಟಕ್ಕೊಳಗಾದ ಅಂಗಡಿ ಮಾಲೀಕರು, ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments