ಶಿವಮೊಗ್ಗ: ನಿನ್ನೆ ರಾತ್ರಿ 11ರ ಸುಮಾರಿಗೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾಗರಕ್ಕೆ ತೆರಳುವ ವಿಜಯಲಕ್ಷ್ಮಿ ಬಸ್ಸಿನ ಚಾಲಕ ಮೇಲೆ ಮೂರು ಜನರ ತಂಡ ಗಂಭೀರ ಹಲ್ಲೆ ನಡೆಸಿ, ಆತನ ಬಳಿ ಇದ್ದ ಮೊಬೈಲ್, ನಗದು ಮತ್ತು ಬ್ಯಾಗನ್ನು ದೋಚಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ಚಾಲಕನನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಆತನ ಬ್ಯಾಗ್ ನಲ್ಲಿ ಮನೆಯ ಪತ್ರ ಕೂಡ ಇತ್ತು ಎನ್ನಲಾಗಿದೆ. ಡ್ಯೂಟಿಯಲ್ಲಿದ್ದ ಆತ ಹಾಗೆಯೇ ಮನೆಗೆ ತೆರಳಿದ್ದು ಇವತ್ತು ದೂರು ನೀಡುವ ಸಂಭವವಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ
ಖಾಸಗಿ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಕೂಡ ಆರೋಪಿಸಿದ್ದಾರೆ