ಶಿವಮೊಗ್ಗ : ನೈರುತ್ಯಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ಭೋಜೆಗೌಡರ ವಿರುದ್ದ ಬಿಜೆಪಿ ಮುಖಂಡ ಎಸ್. ದತ್ತಾತ್ರಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಹಾಗೂ ಆಧಾರ ರಹಿತವಾದುದು ಎಂದು ಜೆಡಿಎಸ್ ಪಕ್ಷದ ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ಆನಂದ್ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡುತ್ತಾ, ಕಳೆದ ೨ದಿನಗಳ ಹಿಂದೆ ಭೋಜೆಗೌಡರ ವಿರುದ್ದ ಎಸ್.ದತ್ತಾತ್ರಿ ಮಾಡಿರುವ ಆರೋಪ ಯಾವುದೇ ಹುರುಳಿಲ್ಲ. ಇಂತಹ ಹೇಳಿಕೆ ನೀಡಿದವರ ವಿರುದ್ದ ಚುನಾವಣೆ ನಂತರ ಮಾನನಷ್ಟ ಮೊಕದ್ದಮ್ಮೆಯನ್ನ ಬೋಜೆಗೌಡರು ಹೂಡಲಿದ್ದಾರೆಂದು ಹೇಳಿದರು.
ಬಾರ್ ಕೌನ್ಸಿಲ್‌ನಿಂದ ಅಮಾನತು ಗೊಂಡಿದ್ದಾರೆ. ಮತ್ತು ಕಾನೂನು ಕಾಲೇಜಿಗೆ ಮಾನ್ಯತೆ ಕೊಡಿಸುವಲ್ಲಿ ಲಂಚ ಪಡೆದಿದ್ದಾರೆ ಎನ್ನುವ ಆರೋಪವನ್ನು ಮಾಡುವ ಮೂಲಕ ಶಿಕ್ಷಕ ಮತದಾರರನ್ನ ದಿಕ್ಕುತಪ್ಪಿಸುವ ಕಾರ್ಯವನ್ನು ಬಿಜೆಪಿ ಅವರು ಮಾಡುತ್ತಿದ್ದಾರೆಂದು ದೂರಿದರು.
ಶಿಕ್ಷಕರಿಗೆ ಭೋಜೆಗೌಡರು ಉಡುಗೋರೆಗಳನ್ನು ನೀಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಚುನಾವಣೆ ಸಂದರ್ಭದಲ್ಲಿ ಇಂತಹ ಆರೋಪಗಳು ಸಹಜ ಆದರೆ ಈ ಆರೋಪಕ್ಕೆ ಯಾವುದೇ ಸಾಕ್ಷ್ಯ ಧಾರಗಳಿಲ್ಲ. ಈ ರೀತಿ ಮಾಡು ವುದರಿಂದ ಭೋಜೆಗೌಡರನ್ನ ಚುನಾ ವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದರು.
ತಮ್ಮ ಪಕ್ಷದ ಅಭ್ಯರ್ಥಿಯ ಸಾಧನೆ ಬಗ್ಗೆ ಹೇಳುವುದಕ್ಕೆ ಯಾವುದೇ ವಿಷಯಗಳು ಇಲ್ಲದೇ ಇರುವು ದರಿಂದ ಈರೀತಿ ಸುಳ್ಳು ಆರೋಪ ಗಳನ್ನು ಹೇಳುವ ಮೂಲಕ ಮತದಾ ರರನ್ನು ದಿಕ್ಕುತಪ್ಪಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಪ್ರಜ್ಞಾವಂತ ಮತದಾ ರರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸದೇ ನಮ್ಮ ಪಕ್ಷದ ಅಭ್ಯರ್ಥಿ ಭೋಜೆಗೌಡ ಅವರನ್ನು ಅತ್ಯಧಿಕ ಮತಗಳಿಂದ ಜಯಶಾಲಿಯನ್ನಾಗಿ ಮಾಡುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾನೂನು ವಿಭಾಗದ ರಾಜ್ಯ ಘಟಕದ ಅನಿಲ್‌ಕುಮಾರ್, ಮೇಯರ್ ನಾಗರಾಜ್ ಕಂಕಾರಿ, ಮಾಜಿ ಮೇಯರ್ ಏಳುಮಲೈ, ಯುವಘಟಕದ ಜಿಲ್ಲಾಧ್ಯಕ್ಷ ಜಿ.ಡಿ.ಮಂಜುನಾಥ್, ರಾಮಕೃಷ್ಣ, ಎ.ಉಮೇಸ್, ಸಿದ್ದಪ್ಪ, ಮಂಜುನಾಥ್, ಭಾಸ್ಕರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.