Saturday, November 9, 2024
Google search engine
Homeಇ-ಪತ್ರಿಕೆರೈಲ್ವೇ ಇಲಾಖೆ ವೈಫಲ್ಯ: ರೈಲ್ವೆ ಸಚಿವ ರಾಜೀನಾಮೆಗೆ ನಗರ ಬ್ಲಾಕ್ ಕಾಂಗ್ರೆಸ್ ಮನವಿ

ರೈಲ್ವೇ ಇಲಾಖೆ ವೈಫಲ್ಯ: ರೈಲ್ವೆ ಸಚಿವ ರಾಜೀನಾಮೆಗೆ ನಗರ ಬ್ಲಾಕ್ ಕಾಂಗ್ರೆಸ್ ಮನವಿ

ಶಿವಮೊಗ್ಗ : ಪದೆ ಪದೆ ರೈಲು ಅಪಘಾತಗಳು ನಡೆಯುತ್ತಿರುವುದರಿಂದ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಕುಮಾರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸೋಮವಾರ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ಕಾಂಚನ್ ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಸರಕು ಸಾಗಾಣೆ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಎಕ್ಸ್‌ಪ್ರೆಸ್‌ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿದ ಪರಿಣಾಮವಾಗಿ 9 ಜನ ಮೃತ ಪಟ್ಟಿರುತ್ತಾರೆ. ಸರಕು ಸಾಗಾಣೆ ರೈಲಿನ ಪೈಲೆಟ್ ಹಾಗೂ ಸಹ ಪೈಲೆಟ್ ಮತ್ತು ಪ್ರಯಾಣಿಕ ರೈಲಿನ ಗಾರ್ಡ್ ಕೂಡ ಮೃತ ಪಟ್ಟಿರುತ್ತಾರೆ. ಹಾಗೂ ಸುಮಾರು 41 ಕ್ಕೂ ಹೆಚ್ಚಿನ ಜನಕ್ಕೆ ಗಾಯಗಳಾಗಿವೆ.

2014 ರಲ್ಲಿ ದೇಶಕ್ಕೆ ಬುಲೆಟ್ ರೈಲು ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ರೈಲುಗಳಿಗೆ ಸಿಗ್ನಲ್ ಕೊಡಲು ಇವರಲ್ಲಿ ಕಾರ್ಮಿಕರಿಲ್ಲ ಹಾಗೂ ಕೇಂದ್ರ ಸರ್ಕಾರದವರು ರೈಲಿನ ಚೇರ್ ಮತ್ತು ಶೌಚಾಲಯದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸಿಕೊಂಡು ಜನರಿಗೆ ಮೋಸ ಮಾಡುತ್ತಾ ಮತ್ತು ಪದೆ ಪದೆ ರೈಲು ಅಪಘಾತಗಳು ನಡೆಯುತ್ತಿರುವುದರಿಂದ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಶಿವಕುಮಾರ್, ಹೆಚ್.ಸಿ.ಯೋಗೇಶ್, ಬಾಲಾಜಿ, ರಂಗೇಗೌಡ, ಗಿರೀಶ್, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments