Wednesday, September 18, 2024
Google search engine
Homeಅಂಕಣಗಳುಲೇಖನಗಳುಪರೀಕ್ಷೆಗಳೆಂದರೆ ಹಬ್ಬ : ಸಂಭ್ರಮಿಸಿ

ಪರೀಕ್ಷೆಗಳೆಂದರೆ ಹಬ್ಬ : ಸಂಭ್ರಮಿಸಿ

ಲೇಖನ : ಡಾ.ಬಿ.ಎಂ.ದಾರುಕೇಶ
ಉಪನ್ಯಾಸಕರು
ರಾಜ್ಯ ಮಟ್ಟದ ತರಬೇತುದಾರರು
ಮತ್ತು ಆಪ್ತ ಸಮಾಲೋಚಕರು
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ದಾವಣಗೆರೆ 

PC : Internet
ಒಂದು ವರ್ಷದಿಂದ ನಿರೀಕ್ಷಿಸುತ್ತಿದ್ದ ಪರೀಕ್ಷೆಗಳು ಬಂದೇ ಬಿಟ್ಟವು. ಎಂದಾಗ ನಿಜಕ್ಕೂ ಸಡಗರ, ಸಂಭ್ರಮದಿಂದ ಆಚರಿಸಿಕೊಳ್ಳುವ ಹಬ್ಬದಂತಹುದು ! ಈ ಪರೀಕ್ಷೆಗಳ ನಂತರ ನಿಮಗೆ ಮುಂದಿನ ತರಗತಿಗಳಿಗೆ ಪ್ರಮೋಷನ್ ಸಿಕ್ಕಂತೆಯೇ ತಾನೆ. ಇಷ್ಟು ಮಾತ್ರಕ್ಕೇ ಭಯಪಡುವುದು, ಗಾಬರಿಗೊಳ್ಳುವುದು, ನಿದ್ರೆ ಬಾರದಿರುವುದು, ಊಟ ಮಾಡಲಾಗದಿರುವುದು ಇವೆಲ್ಲವೂ ಬಹಳ ಕಡಿಮೆ ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಆಗುತ್ತವೆ. ನಿಜ ಹೇಳಬೇಕೆಂದರೆ, ಒಂದು ರೀತಿಯಲ್ಲಿ, ಇವುಗಳೆಲ್ಲಾ ಅರ್ಥರಹಿತ ಭಯಗಳೇ, ಎಲ್ಲವನ್ನೂ ಓದಿಕೊಂಡಿರಬೇಕಾದರೆ ಭಯಪಡುವುದಾದರೂ ಏತಕೆ?
ನಾನು ರಾಜ್ಯಾದ್ಯಂತ ಸಂಚರಿಸಿ ವಿದ್ಯಾರ್ಥಿಗಳಿಗೆ ಪರಿಕ್ಷಾ ತರಬೇತಿಗಳನ್ನು ನೀಡಿದ್ದೇನೆ ಅಲ್ಲಿ ಅನೇಕ ಶಾಲೆಗಳಲ್ಲಿ ಅನೇಕ ರೀತಿಯ ವಿಧ್ಯಾರ್ಥಿಗಳನ್ನು ಕಂಡಿದ್ದೇನೆ, ಅವರಿಂದ ಅತಿ ಹೆಚ್ಚು ಬಾರಿ ಕೇಳಲಾಗುವ ಪ್ರಶ್ನೆಗಳನ್ನು ಹಾಗೂ ಅದಕ್ಕೆ ತಕ್ಕ ಪರಿಹಾರಗಳನ್ನೂ ನೀಡಿದ್ದೇನೆ, ಮತ್ತು ಇದು ಸರಿ ಇದೆಯಾ ಎಂದು ಕೇಳಿದೆ, ವಿಚಾರ ವಿನಿಮಯ ನಡೆಯಿತು ಅವರು ಒಪ್ಪಿದರು,ನಿಮಗೂ ಒಪ್ಪಿಗೆಯಾಗಿ ಪರೀಕ್ಷೆಗೆ ಸಹಕಾರಿಯಾದೀತು.ಒಮ್ಮೆ ಪ್ರಯತ್ನಿಸಿ.

ಸಮಸ್ಯೆ: ಓದಿದ್ದು ಮರೆತು ಹೋಗುತ್ತದೆ.
ಪರಿಹಾರ : ಓದುವ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು., ಅದಕ್ಕಾಗಿ ಡಿಕ್ಷನರಿ ಬಳಸಿ ಕಷ್ಟದ ಪದಗಳ ಅರ್ಥಗಳನ್ನು ತಿಳಿಯಿರಿ., ಅವತ್ತಿನ ಪಾಠಗಳನ್ನು ಅವತ್ತೇ ಅಭ್ಯಾಸ ಮಾಡಿ., ನಾಳೆ ಮಾಡುವ ಪಾಠವನ್ನೂ ಒಂದು ದಿನ ಮುಂಚಿತವಾಗಿ ಓದಿ,ಸಹಪಾಠಿಗಳೊಂದಿಗೆ ಚರ್ಚಿಸಿ., ಖಾಲಿ ಕೋಣೆಯಲ್ಲಿ ಗೋಡೆಗೆ ಪಾಠಮಾಡಿ., ಪ್ರತಿಯೊಂದು ಚಾಪ್ಟರ್‌ಗೂ ಸಂಕ್ಷಿಪ್ತ ನೋಟ್ಸ ಮಾಡಿಟ್ಟುಕೊಳ್ಳಿ,ಅದನ್ನು ವಾರಕ್ಕೊಮ್ಮೆ ರೀಕಾಲ್ ಮಾಡಿ , ನೆನಪಿನ ತಾಯಿ ಗಮನ, ಗಮನದ ತಾಯಿ ಆಸಕ್ತಿ, ಆಸಕ್ತಿಯ ತಾಯಿ ಪ್ರಭಲವಾದ ಮಹತ್ವಾಕಾಂಕ್ಷೆ.


ಸಮಸ್ಯೆ: ಪಾಠದಲ್ಲಿ ಆಸಕ್ತಿ ಇರುವುದಿಲ್ಲ
ಪರಿಹಾರ: ಏನನ್ನು ಕಲಿಯುತ್ತಿದ್ದೇನೆ, ಏಕೆ ಕಲಿಯುತ್ತದ್ದೇನೆ ಎಂಬ ಎರಡು ಪ್ರಶ್ನೆಗಳಿಗೆ ನಿಮ್ಮದೇ ಆದ ನಾಲ್ಕು ಸಾಲುಗಳನ್ನು ಬರೆಯಿರಿ, ಪಾಠಗಳನ್ನು /ವಿಷಯಗಳನ್ನು ಪ್ರೀತಿಸಿ, ಅದನ್ನು ಕಲಿಯುವ ಹಠವನ್ನು ಬೆಳೆಸಿಕೊಳ್ಳಿ,ಲಷ್ಕ್ಯ ಗುರಿಯೆಡೆಗೆ ಇರಲಿ, ಶಿಸ್ತುಬದ್ದ ಅಧ್ಯಯನ ಕ್ರಮ ರೂಢಿಸಿಕೊಳ್ಳಿ.


ಸಮಸ್ಯೆ: ಓದುವಾಗ ಏಕಾಗ್ರತೆ ಬರುವುದಿಲ್ಲ
ಪರಿಹಾರ : ಮೌನವಿರುವ ಸ್ಥಳದಲ್ಲಿ ಓದಿ/೫ ನಿಮಿಷ ಧ್ಯಾನಮಾಡಿ ಆರಂಬಿಸಿ. ಓದಿದ್ದನ್ನು ಪುಸ್ತಕ ಮುಚ್ಚಿ ಬರೆಯಲೇ ಬೇಕು ಎಂದು ದೃಢ ಸಂಕಲ್ಪದಿಂದ ಓದಲು ಆರಂಬಿಸಿ. ಪುಸ್ತಕ ನೋಡದೇ ಮಾತಿನ ಮೂಲಕ ಹೇಳುತ್ತಾಹೋಗಿ. ಓದಿದ್ದರ ಸಂಕ್ಷಿಪ್ತ ಸಾರಾಂಶ ಬರೆಯಿರಿ,ವಿಷಯದ ಮುಖ್ಯ ಪದಗಳನ್ನು ಬರೆಯಿರಿ.


ಸಮಸ್ಯೆ : ವಿಷಯಗಳ ನಡುವೆ ಕನ್‌ಪ್ಯೂಷನ್ ಆಗುತ್ತದೆ.
ಪರಿಹಾರ: ಚರ್ಚೆಮಾಡಿ ಆಗ ವಿಷಯ ಸ್ಪಷ್ಟವಾಗುತ್ತದೆ., ಅದೇ ಬೇರೆ ಇದೇ ಬೇರೆ – ಏಕೆ ಬೇರೆ ಬೇರೆ ಎಂದು ಚರ್ಚೆ ಮಾಡಿ ಆಗ ಸ್ಪಷ್ಟತೆ ಬರುತ್ತದೆ., ಬರೆದಿರುವುದನ್ನು ಓದಿ ಮತ್ತು ಓದಿದ್ದನ್ನು ಬರೆಯಿರಿ., ಅಗತ್ಯ ಬಿದ್ದಲ್ಲಿ ವಿಷಯಕ್ಕೆ ಸಂಬಂಧಿಸಿದ ನಿಮ್ಮದೇ ಆದ ಚಿತ್ರ ರೂಪದಲ್ಲಿ / ಕಥೆ ರೂಪದಲ್ಲಿ ಕ್ರಿಯಾತ್ಮಕವಾಗಿ ಗುರುತಿಸುವ ವಿಧಾನಗಳಲ್ಲಿ ವಿಷಯಗಳನ್ನು ಪ್ರಸ್ತುತಪಡಿಸಿ.


ಸಮಸ್ಯೆ : ವಿಷಯ ಅರ್ಥ ಆಗಿದ್ದು ಓದಿ ಓದಿ ಬೋರ್ ಆಗುತ್ತೆ
ಪರಿಹಾರ: ಸದರಿ ವಿಷಯದ ಬಗ್ಗೆ ಹೊಸ ಮಾಹಿತಿಯನ್ನು ಸಂಗ್ರಹಿಸಿ ಹೊಲಿಕೆ ಮಾಡಿ. ವಿಷಯದ ಆಳ ಮತ್ತು ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗಿ


ಸಮಸ್ಯೆ: ಪರೀಕ್ಷೆಯಲ್ಲಿ ಬರೆಯಲು ಸಮಯ ಸಾಕಾಗುವುದಿಲ್ಲ.
ಪರಿಹಾರ : ಹಳೆಯ ಪ್ರಶ್ನೆ ಪತ್ರಿಕೆಗೆ ನಿಗದಿತ ಸಮಯದಲ್ಲಿ ಉತ್ತರ ಬರೆಯು ವುದನ್ನು ಅಭ್ಯಾಸ ಮಾಡಿ., ಪ್ರಶ್ನೆಗಳನ್ನು ಸರಿಯಾಗಿ ಗಮನಿಸಿ/ಅವುಗಳಿಗಿರುವ ಅಂಕಗಳನ್ನು ಗಮನಿಸಿ., ಯಾವ ಯಾವ ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕೋ ಅಷ್ಟನ್ನು ಕರಾರುವಕ್ಕಾಗಿ ಬರೆಯಿರಿ., ಕೊನೆಯಲ್ಲಿ ಹತ್ತು ನಿಮಿಷ ಉಳಿಸಿ ಕೊಳ್ಳುವಂತೆ ಬರೆಯಿರಿ ಆ ಸಮಯದಲ್ಲಿ ಉತ್ತರ ಪತ್ರಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿ.


ಸಮಸ್ಯೆ: ಪರೀಕ್ಷೆ ಹತ್ತಿರ ಬಂದಂತೆಲ್ಲಾ ಟೆನ್‌ಷನ್ ಆಗುತ್ತದೆ.
ಪರಿಹಾರ : ನೀವೇನು ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧ ಮಾಡಲು ಗನ್ ಹಿಡಿದು ನಿಂತಿಲ್ಲ ಎಂಬುದರ ಅರಿವು ಇರಲಿ., ಇಂತಹ ಪರೀಕ್ಷೆಗಳನ್ನು ಈಗಾಗಲೇ ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಬರೆದಿರುವಿರಿ (ಹಾಲ್ ಟಿಕೆಟ್ ಕೊಟ್ಟಿರುತ್ತಾರೆ- ಅಷ್ಟೆ), ಕ್ರಮ ಬದ್ಧ/ಯೋಜನಾ ಬದ್ಧ ಅಧ್ಯಯನ ದಿಂದ ಆತ್ಮ ವಿಶ್ವಾಸ ವೃದ್ಧಿಸಿಕೊಳ್ಳಿ., ಸಾಂಸ್ಕೃತಿಕ/ಧಾರ್ಮಿಕ/ಪ್ರಾರ್ಥನೆ – ಧ್ಯಾನದಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಪರೀಕ್ಷಾ ದೃಷ್ಠಿಯಿಂದ ನೋಟ್ಸ್‌ನ್ನು ಆ ವಾರ ದಲ್ಲೇ ಸಿದ್ಧಪಡಿಸಿಕೊಳ್ಳಿ, ವೇಳಾಪಟ್ಟಿ ರಚಿಸಿಕೊಂಡು – ಶಿಸ್ತು ಬದ್ಧ ಅಭ್ಯಾಸದಲ್ಲಿ ತೊಡಗಿ.


ಸಮಸ್ಯೆ: ಪಾಠದಲ್ಲಿ ಆಸಕ್ತಿ ಇಲ್ಲ.
ಪರಿಹಾರ: ನೀರಸವಾದ ವಿಷಯಗಳಲ್ಲಿ ಹೊಸತನ್ನು ಹುಡುಕಲು ಪ್ರಯತ್ನಿಸಿ.
ಪಾಠದ ಬಗ್ಗೆ ತೋಚಿದ್ದನ್ನು ಗೀಚಿ, ನಂತರ ಕಂಪೇರ್ ಮಾಡಿ., ನಿಮ್ಮ ಜವಾ ಬ್ದಾರಿ ಅರಿಯಿರಿ.


ಸಮಸ್ಯೆ: ಓದಲು ಕುಳಿತರೆ ನಿದ್ರೆ ಬರುತ್ತದೆ.
ಪರಿಹಾರ: ವಿಷಯದ ಬಗ್ಗೆ ಆಸಕ್ತಿ ಬೆಳಸಿಕೊಳ್ಳಿ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಅದನ್ನು ಪ್ರೀತೀಸಿ ನಿದ್ರೆ ಬರುವುದಿಲ್ಲ., ಲೆಕ್ಕ ಮಾಡಿ ಗುಣಿಸಿ- ಭಾಗಿಸಿ., ನೀರಿಗೆ ಬಿಳದೆ ಈಜು ಬರುವುದಿಲ್ಲ, ಆಸಕ್ತಿ ಇಲ್ಲದೆ ಓದು ಬರುವುದಿಲ್ಲ.


ಸಮಸ್ಯೆ: ಮನಸ್ಸು ಬೇರೆಡೆಗೆ ಚಲಿಸುತ್ತದೆ.
ಪರಿಹಾರ: ಟಿ.ವಿ.ರೇಡಿಯೋಗಳಿಂದ ದೂರದಲ್ಲಿರಿ.- ನಿಶ್ಯಬ್ದ ವಾತಾವರಣ ದಲ್ಲಿ ಓದಿರಿ.- ಗಟ್ಟಿಯಾಗಿ ಓದಿರಿ., ಬರೆದು ಬರೆದು ಕಲಿಯಲು ಯತ್ನಿಸಿ – ಕಲಿತಿದ್ದನ್ನು ಬರೆದು ಬರೆದು ಅಭ್ಯಾಸ ಮಾಡಿ., ಶೂನ್ಯ ವೇಳೆಯಲ್ಲಿ ಓದಿದ್ದನ್ನು ನೆನಪಿಸಿಕೊಂಡು ಬರೆಯಿರಿ.


ಸಮಸ್ಯೆ: ಪರೀಕ್ಷೆ ಹತ್ತಿರವಾದಂತೆ ಭಯ ಉಂಟಾಗುತ್ತದೆ.
ಪರಿಹಾರ: ಈಗಿನಿಂದಲೇ ಪರೀಕ್ಷಾ ಸಿದ್ದತೆಯನ್ನು ಮಾಡುತ್ತಿರುವುದರಿಂದ ಭಯದ ಅವಶ್ಯಕತೆ ಇಲ್ಲ., ಭಯ ಪಡಲು ಸಮಯ ಪುರುಸೊತ್ತು ಇಲ್ಲದ ಹಾಗೆ ಕೆಲಸ ಮಾಡಿ., ಧೈರ್ಯ ಇರುವವಂತೆ ನಟಿಸಿ., ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಎಂದು ಗಾಢವಾಗಿ ನಂಬಿ. ಮನೆದೇವರ ಮೇಲೆ ಭಾರ ಹಾಕಿ ದಿಟ್ಟ ಪ್ರಯತ್ನಗಳಲ್ಲಿ ತೊಡಗಿ.


ಸಮಸ್ಯೆ:ಅಕ್ಷರ ಚೆನ್ನಾಗಿರುವುದಿಲ್ಲ.
ಪರಿಹಾರ: ನಿಧಾನವಾಗಿ ಬರೆಯಿರಿ, ಪದದಿಂದ ಪದಕ್ಕೆ ಬಿಡಿಸಿ ಬಿಡಿಸಿ ಬರೆಯಿರಿ.’ ಸ್ವಲ್ಪ ಕಡಿಮೆ ಉತ್ತರ ಬರೆಯಿರಿ.,ನಿಮ್ಮ ಅಕ್ಷರ ಬೇರೆಯವರು ಓದು ವಂತಿದ್ದರೆ ಸಾಕು.


ಸಮಸ್ಯೆ: ನರ್ವೆಸ್ ಆಗುತ್ತದೆ.
ಪರಿಹಾರ: ಆಶಾವಾದಿಗಳಾಗಿರಿ,- ಎಡೆಬಿಡದೆ ಓದಿನಲ್ಲಿ ತೊಡಗಿಕೊಳ್ಳಿ ಸಂತೋಷಕ್ಕಾಗಿ ನಡುವೆ ಸ್ವಲ್ಪ ಮಜಾ ಮಾಡಿ- ಆಹಾರ ನಿದ್ರೆ ಚೆನ್ನಾಗಿರಲಿ, ಇವೆಲ್ಲದರ ಮದ್ಯೆ ವಿದ್ಯಾರ್ಥಿಗಳು ಸಮಯ ಪಾಲನೆ. ಕಲಿಕೆಯಲ್ಲಿ ಆತ್ಮ ವಿಶ್ವಾಸ. ತಮ್ಮ ಮೇಲೆ ತಮಗೆ ನಂಬಿಕೆ.ಮತ್ತು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿ ಕೊಂಡು ಓದಲು ತೊಡಗಿದರೆ ಓದುವುದೆಲ್ಲವೂ ಅರ್ಥವಾಗುತ್ತದೆ ಅದಕ್ಕೆ ಮಹತ್ವಾಕಾಂಕ್ಷೆ ಮತ್ತು ಶದ್ದೆ ಇರಬೇಕಾಗುತ್ತದೆ
ಪರಿಕ್ಷಾ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ಅಭ್ಯಾಸದಲ್ಲಿ ತೊಡಗಿಕೂಳ್ಳಬೇಕು ಯಾವುದೇ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳಿದ್ದರೆ ಫೋನ್ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು.


 

RELATED ARTICLES
- Advertisment -
Google search engine

Most Popular

Recent Comments