ಶಿವವಗ್ಗ : ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ಮುಖ್ಯ ಬಸ್ ನಿಲ್ಛ್ದಾಣದಿಂದ ಆಲ್ಕೊಳ ವೃತ್ತದವರೆಗಿನ ರಸ್ತೆ ಅಭಿವೃದ್ಧಿ, ಟ್ಯಾಂಕ್ ಮೊಹಲ್ಛ್ಲಾ ಪಾರ್ಕ್, ನೆಹರೂ ಸ್ಟೇಡಿಯಂ ಆಧುನೀಕರಣ ಇನ್ನೂ ಮುಂತಾದ ಕಾಮಗಾರಿಗಳ ಬಗ್ಗೆ ಶೀಘ್ರಗತಿಯಲ್ಲಿ ಕೆಲಸವಾಗಬೇಕೆಂದು ಇಂದು ನಡೆದ ಸ್ಮಾರ್ಟ್ ಸಿಟಿ ಕುರಿತು ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಒತ್ತಾಯ ಕೇಳಿಬಂದಿತು.
ಮೇಯರ್ ನಾಗರಾಜ್ ಕಂಕಾರಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮೇಯರ್ರವರನ್ನು ಹೊರತುಪಡಿಸಿದರೆ ಸ್ಮಾರ್ಟ್ ಸಿಟಿ ಸಮಿತಿಯಲ್ಲಿ ಜನಪ್ರತಿನಿಧಿಗಳು ಯಾರೂ ಇರುವುದಿಲ್ಲ. ಎಂಎಲ್‌ಎ, ಎಂಎಲ್‌ಸಿ ಮತ್ತು ಎಂಪಿಗಳು ಹಾಗೂ ನಗರಾಭಿವೃದ್ಧಿ ಸಚಿವರು ಸಲಹಾ ಸಮಿತಿಯಲ್ಲಿ ಇರುತ್ತಾರೆ ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು.
೩೫ ವಾರ್ಡ್‌ಗಳಲ್ಲೂ ಸಹ ನಾಗರೀಕರ ಬೇಡಿಕೆಗೆ ಅನುಗುಣವಾಗಿ ಒಂದೊಂದು ಮಹತ್ತರ ಕಾರ್ಯವನ್ನು ಈ ಯೋಜನೆಯಲ್ಲಿ ಕೈಗೊಳ್ಳಬೇಕಿದೆ. ಅಲ್ಲಿನ ಬಡಾವಣೆಯ ನಾಗರೀಕರಿಗೆ ಯಾವುದು ಅವಶ್ಯಕತೆ ಇದೆಯೋ ಅಂತಹ ಕಾರ್ಯವನ್ನು ಈ ಯೋಜನೆಯನ್ನು ರೂಪಿಸಬೇಕೆಂದು ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು ಒತ್ತಾಯಿಸಿದರು.
ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡುವ ಕುರಿತು ಶಿವಮೊಗ್ಗ ನಗರದಲ್ಲಿ ಟೆಂಡರ್‌ದಾರರು ಮುಂದೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಮೇಲೆ ಮತ್ತು ಡಿಸಿ ಕಛೇರಿ ಮೇಲೆ ಪ್ಲಾಂಟ್‌ಗಳನ್ನು ನಿರ್ಮಾಣ ಮಾಡಿ ಅದರಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ಮಾರಾಟ ಮಾಡಿ, ಬಂದಂತಹ ಲಾಭವನ್ನು ಯೋಜನೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿಯೂ ಸಹ ಸಲಹೆಗಳು ಕೇಳಿಬಂದವು.
ಸಭೆಯಲ್ಲಿ ಉಪಮೇಯರ್ ವಿಜಯಲಕ್ಷ್ಮೀ ಸಿ.ಪಾಟೀಲ್, ಆಯುಕ್ತ ಪ್ರಕಾಶ್, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿ ಗಣೇಶ್, ಎನ್.ಜೆ. ರಾಜಶೇಖರ್ ಮೊದಲಾದವರು ಉಪಸ್ಥಿತರಿದ್ದರು.