Thursday, September 19, 2024
Google search engine
Homeಇ-ಪತ್ರಿಕೆಬಕ್ರೀದ್‌ : ಗೋಹತ್ಯೆ ತಡೆಗೆ ಹಿಂದೂ ಸಂಘಟನೆಯಿಂದ ಡಿವೈಎಸ್‌ ಪಿ ಯವರಿಗೆ ಮನವಿ

ಬಕ್ರೀದ್‌ : ಗೋಹತ್ಯೆ ತಡೆಗೆ ಹಿಂದೂ ಸಂಘಟನೆಯಿಂದ ಡಿವೈಎಸ್‌ ಪಿ ಯವರಿಗೆ ಮನವಿ

ಶಿವಮೊಗ್ಗ : ಬಕ್ರೀದ್‌ ಹಬ್ಬದ ವೇಳೆ ಕಟಾವ್‌ ಮಾಡುವುದಕ್ಕಾಗಿ ಒಂದು ಕೋಮಿನ ಜನರು ವಿವಿಧೆಡೆಗಳಿಂದ ಹೆಚ್ಚಿನ ಗೋವುಗಳನ್ನು ತಂದು ಸಾಕುತ್ತಿದ್ದು, ಈ ಹಿನ್ನೆಲೆಯಲ್ಲಿ ಗೋವುಗಳ ಮಾಲಿಕತ್ವದ ಪರವಾನಗಿ ಪರಿಶೀಲಿಸಬೇಕೆಂದು  ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

ಪೊಲೀಸರು ಸ್ವಯಂ ಪ್ರೇರಿತರಾಗಿ ಮತ್ತು ಹೆಚ್ಚಾಗಿ ನಮ್ಮ ಹಿಂದೂ ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿಯನ್ನು ಆಧರಿಸಿ ಗೋ ಹತ್ಯೆ ಮತ್ತು ಅಕ್ರಮ-ಸಾಗಾಟ ವಿಚಾರದಲ್ಲಿ ಹಲವಾರು ಪ್ರಕರಣಗಳನ್ನು ಕಾನೂನಾತ್ಮಕವಾಗಿ ದಾಖಲಿಸಿರುವುದು ಸ್ವಾಗತಾರ್ಹವಾಗಿದೆ. ಇದಕ್ಕೆ ಧನ್ಯವಾದಗಳು ತಿಳಿಸುತ್ತೇವೆ ಎಂದು ಸಂಘಟನೆಯ‌ ಮುಖಂಡ ದೇವರಾಜ್ ಅರಳಹಳ್ಳಿ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಸಂಘಟನೆಯ ಪದಾಧಿಕಾರಿಗಳು ಡಿವೈಎಸ್‌ ಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯಿಂದ ಗೋ ಹತ್ಯೆ ವಿಚಾರದಲ್ಲಿ ಉತ್ತಮ ಕಾರ್ಯಾಚರಣೆ ನಡೆಯುತ್ತಿದ್ದು,  ಕೆಲವು ಸ್ಥಳಗಳಲ್ಲಿ ಗೋ ಹತ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ. ಆದರೆ ಇದೇ ತಿಂಗಳು  ಅಂದರೆ ಜೂನ್‌ 17 ರಂದು  ಬಕ್ರೀದ್ ಹಬ್ಬ ಇದ್ದು, ಇದಕ್ಕೆ ಹೆಚ್ಚಿನ ಗೋವುಗಳ ಹತ್ಯೆ ಮಾಡುವ ಶಂಕೆಯಿದೆ.  ಕಳೆದ ವರ್ಷ ಬಕ್ರೀದ್ ಹಬ್ಬದ ಸಮಯದಲ್ಲಿ ಗೋ ಹತ್ಯೆ ಆಗಿರುವಂತಹ ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಗೋ ಹತ್ಯೆ ತಡೆಯುವುದಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆ ಅಗತ್ಯ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು  ಹಿಂದೂ ಜಾಗರಣ ವೇದಿಕೆ ಮನವಿಯಲ್ಲಿ ಒತ್ತಾಯಿಸಿದೆ.

ಶಿವಮೊಗ್ಗದ ಆಯನೂರು, ಹಾರನಹಳ್ಳಿ, ಚೋರಡಿ, ಹೊಳಲೂರು, ಅಗಸವಳ್ಳಿ, ಹೊನ್ನಾಪುರ, ಕಡೆಕಲ್ಲು, ಸಕ್ರೆಬೈಲು, ರಾಮನಗರ, ಹೊಸೂರು, ಮಲ್ಲಪುರ, ಹೊಸಳ್ಳಿ ಕೂಡ್ಲಿ, ಪಿಳ್ಳಂಗಿರಿ ಮುಂತಾದ  ಕಡೆಗಳಲ್ಲಿ ಒಂದು ಕೋಮಿನ ಜನರು ಹೆಚ್ಚಾಗಿದ್ಧಾರೆ. ಇಲ್ಲಿ ಈಗಾಗಲೇ  ನೂರಾರು ಸಂಖ್ಯೆಯ ಗೋವುಗಳನ್ನು ತಂದು ಸಾಕಲಾಗಿದೆ. ಇವುಗಳನ್ನ ಹತ್ಯೆ ಮಾಡುವುದಕ್ಕಾಗಿಯೇ ತಂದಿರುವ ಬಗ್ಗೆ ಅನುಮಾನ ಇದೆ. ಈ ಹಿನ್ನೆಲೆಯಲ್ಲಿ ಇಲಾಖೆ ಇಲ್ಲಿ ನಿಗಾ ಇಡಬೇಕೆಂದು ಆಗ್ರಹಿಸಲಾಗಿದೆ.

ಗೋವಿನ ಮಾಲೀಕತ್ವದ ಪರವಾನಗಿಗಳು ಅವರ ಬಳಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತಾವುಗಳು ವಿಶೇಷವಾಗಿ ಗಮನಹರಿಸಿ ಗೋ ಸಂತತಿಯ ಉಳಿವಿನ ವಿಚಾರವನ್ನು ಗಮನಿಸಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು. ಹಾಗೊಂದು ವೇಳೆ ಗೋವುಗಳ ಮಾಲೀಕತ್ವದ ಪರವಾನಗಿ ಇಲ್ಲದೆ ಗೋವುಗಳನ್ನು ಕಟ್ಟಿರುವವರನ್ನು ಗಮನ ಹರಿಸಿ ಕಾನೂನು ಕ್ರಮ ತೆಗೆದುಕೊಂಡು ಪ್ರಕರಣ ದಾಖಲಿಸಿ ಗೋವುಗಳನ್ನು ರಕ್ಷಿಸಬೇಕೆಂದು ಸಂಘಟನೆಯು ಮನವಿಯಲ್ಲಿ ಒತ್ತಾಯಿಸಿದೆ.

RELATED ARTICLES
- Advertisment -
Google search engine

Most Popular

Recent Comments